ದೇಶದ ಆರ್ಥಿಕತೆಯಲ್ಲಿ ರೈತರ ಕೊಡುಗೆ ಅಪಾರ

ಸಂಜೆವಾಣಿ ವಾರ್ತೆ
ದಾವಣಗೆರೆ ಜೂ.12; ಭಾರತೀಯ ಕೃಷಿ ಪದ್ಧತಿ ಸುಧಾರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರಥಮ ಆದ್ಯತೆಯಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸಲು ಕ್ರಮ ಕೈಗೊಳ್ಳಲು ಮುಂದಾಗಬೇಕು ಆಗ ಮಾತ್ರ ದೇಶದ ಆರ್ಥಿಕ ಪ್ರಗತಿಯಲ್ಲಿ ರೈತರ ಕೊಡುಗೆ ಅಪಾರವಾಗುತ್ತದೆ  ಎಂದು ಅನೇಕ ನಿದರ್ಶನಗಳ ಮೂಲಕ ದಾವಣಗೆರೆ ಜಿಲ್ಲಾ ಕ ಸಾ ಪ ದ  ಅಧ್ಯಕ್ಷ ಬಿ. ವಾಮದೇವಪ್ಪ ತಿಳಿಸಿಕೊಟ್ಟರು.ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಭಾರತೀಯ ಕಿಸಾನ್ ಸಂಘ ಕುವೆಂಪು ಕನ್ನಡ ಭವನದಲ್ಲಿ ಏರ್ಪಡಿಸಿದ್ದ  ಸೇವಾ ಉಪಕ್ರಮ  ದಾವಣಗೆರೆ ಜಿಲ್ಲಾ ಕೃಷಿಕರೊಂದಿಗೆ ಸಂವಾದ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಈ ಕಾರ್ಯಕ್ರಮ ರೈತರಿಗೆ ದೊರಕಬಹುದಾದ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ  ಸೌಲಭ್ಯಗಳನ್ನು ಹಾಗೂ ಆಧುನಿಕ ಬೇಸಾಯ ಪದ್ಧತಿಗೆ ಬೇಕಾಗಬಹುದಾದ ಸವಲತ್ತುಗಳನ್ನು ಈ ಕಾರ್ಯಕ್ರಮ ತಿಳಿಸುವಂತಾಗಲಿ  ಎಂದು ವಾಮದೇವಪ್ಪ ಅವರು ಆಶಿಸಿದರು.ಈ  ಕಾರ್ಯಕ್ರಮಕ್ಕೆ ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಹುಬ್ಬಳ್ಳಿಯಿಂದ ಆಗಮಿಸಿದ್ದ ಕೃಷಿ ತಜ್ಞ ಡಾ.ರಂಜಿತ್ ಕುಮಾರ್ ಪಿ. ಎಸ್. ಅವರು ರೈತರಿಗೆ ಬೇಕಾಗುವ ಹಾಗೂ ಅನುಸರಿಸಬೇಕಾದ ಉಪಯುಕ್ತವಾದ ಹಾಗೂ ಲಾಭದಾಯಕವಾದ ಕ್ರಮಗಳ ಬಗ್ಗೆ  ಸ್ಲೈಡ್ಸ್ ಗಳ ಮೂಲಕ ರೈತರಿಗೆ ಮನವರಿಕೆ ಮಾಡಿಕೊಟ್ಟರು. ಈ ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯಿಂದ ಆಗಮಿಸಿದ್ದ ನಾನಾ ಭಾಗದ ರೈತರು ಅನೇಕ ಮಾಹಿತಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ನ ನಿರ್ದೇಶಕರಾದ ಜಿ ರುದ್ರಯ್ಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ರೈತರ ಜೀವನಮಟ್ಟ ಇತರೆ ಎಲ್ಲಾ ಉದ್ಯೋಗಗಳಿಗಿಂತಲೂ ಉತ್ತಮವಾದದ್ದು ಎಂಬ ಸ್ಥಿತಿಗೆ ಬರುವಂತದಾಗ ಮಾತ್ರ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮುಂದಾಗುತ್ತಾರೆ ಎಂದು ತಿಳಿಸಿದರು. ರೈತರ ಪರಿಸ್ಥಿತಿ ಸುಧಾರಿಸುವಲ್ಲಿ ಸರ್ಕಾರಗಳ ಪಾತ್ರ ಪ್ರಮುಖವಾಗಿದೆ ಎಂದು ತಿಳಿಸಿದರು. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಸುಧಾರಣೆಗಾಗಿ ಅನೇಕ ಕ್ರಮಗಳನ್ನು ಕೈಗೊಳ್ಳುವಂತಾಗಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಕೆನರಾ ಲೀಡ್ ಬ್ಯಾಂಕಿನ ಅಧಿಕಾರಿ ಶಿವಪ್ಪ  ಉಪಸ್ಥಿತರಿದ್ದರು . ನಗರದ ಸೇವಾ ಕಾರ್ಯಕರ್ತ ರೂಪೇಶ್ ಹಾಗೂ ಇನ್ನೂ ಮುಂತಾದವರು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಸ್ವಾಗತ ಮತ್ತು ಪರಿಚಯದ ನುಡಿಗಳನ್ನು ಜಿಲ್ಲಾ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ವೇದಾನಂದ ಹೊನ್ನೇಬಾಗಿ ಇವರು ಮಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಸಂಚಾಲಕರಾದ ಅಶೋಕ್ ದುರ್ವಿಗೆರೆ ಅವರು ನಿರೂಪಣೆ ಮಾಡಿ ಸರ್ವರಿಗೂ ವಂದಿಸರು. ನಮ್ಮ ಸಂಘ ಮಾಡುತ್ತಿರುವ ಉಪಯುಕ್ತ ಕಾರ್ಯಕ್ರಮಗಳನ್ನು ಭಾಗವಹಿಸಿದ್ದ ರೈತರು ಹಾಗೂ ರೈತ ಮುಖಂಡರು ಮನ ಬಿಚ್ಚಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.