1.5 ಕೋಟಿ ರೂ. ವೆಚ್ಚದಲ್ಲಿ ವಾಲ್ಮೀಕಿ ವೃತ್ತ ನವೀಕರಣ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,12-  ನಗರದ ವಾಲ್ಮೀಕಿ ಸರ್ಕಲ್ ನ್ನು ಒಂದು ವರೆ ಕೋಟಿ ರೂ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಕುರಿತು  ನಗರದ ಶಾಸಕ ಭರತ್ ರೆಡ್ಡಿ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅವರು ನಿನ್ನೆ ಸರ್ಕಲ್ ಬಳಿ ತೆರಳಿ ಸರ್ಕಲ್ ನವೀಕರಣ, ಒತ್ತುವರಿ ತೆರವು, ರಸ್ತೆ ಅಭಿವೃದ್ಧಿ ಕುರಿತು ಮಾಹಿತಿ ಪಡೆದರು.
ಕಳೆದ ಒಂದೂವರೆ ದಶಕದ ಹಿಂದೆ ಈ ವಾಲ್ಮೀಕಿ ವೃತ್ತವನ್ನು ಅಭಿವೃದ್ಧಿಪಡಿಸಿದ್ದು.  ಸದ್ಯ ಕೆಲವು ಕಡೆಗಳಲ್ಲಿ ದುರಸ್ಥಿ ಕಾರ್ಯದ ಅಗತ್ಯ ಇದೆ. ಅಲ್ಲದೆ ವೃತ್ತವನ್ನು ಮರು ನವೀಕರಣ ಮಾಡುವ ಮೂಲಕ ಮೇಲ್ದರ್ಜೆಗೇರಿಸಲಾಗುವುದು ಶೀಘ್ರ ಕಾಮಗಾರಿ ಆರಂಭಿಸಲಾಗುವುದು. ಅಲ್ಲದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಅಂದಾಜು 5 ಕೋಟಿ ರೂ.ಗಳ ವೆಚ್ಚದಲ್ಲಿ ಉದ್ಯಾನ ವನವನ್ನು ನಿರ್ಮಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ವೇಳೆ ಕಾಂಗ್ರೆಸ್ ಮುಖಂಡ ಪಿ.ಜಗನ್ನಾಥ್  ಮೊದಲಾದವರು ಹಾಜರಿದ್ದರು.