ಮನೆಗಳ್ಳಿಯ ಬಂಧನ24,480 ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ವಶ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಜೂ,12- ನಗರದ ಗಾಂಧಿ ಪೊಲೀಸರು ಪ್ರಕರಣ ದಾಖಲಾಗಿ 24 ಗಂಟೆಗಳಲ್ಲಿ ಮನೆಕಳ್ಳತನ ಮಾಡಿದ ಆರೋಪಿತಳನ್ನು ಬಂಧಿಸಿ,24,480 ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳ ವಶಪಡಿಸಿಕೊಳ್ಳಲಾಗಿದೆ.
ಜೂ 9 ರಂದು ರಾತ್ರಿ   ಸಂಗನಕಲ್ಲ ರಸ್ತೆಯ  ಬೀಗ ಹಾಕಿದ ಮನೆಯ ಕೀಯನ್ನು ಮುರಿದು ಅಂದಾಜು ಬೆಲೆ 18,24,480 ರೂ ಮೌಲ್ಯದ,  228 ಗ್ರಾಂ ಬಂಗಾರದ ಆಭರಣಗಳು ಮತ್ತು 4281 ಗ್ರಾಂ ಬೆಳ್ಳಿಯ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದರು.  
ಈ ಪ್ರಕರಣವನ್ನು ಗಾಂಧಿನಗರ ಠಾಣೆಯ ಪಿಐ ಸಿದ್ದರಾಮೇಶ್ವರ ಗಡೇದ್ ಮತ್ತವರ ತಂಡ.  ಮನೆ ಕಳ್ಳತನ ಮಾಡಿದ ಆರೋಪಿತಳಾದ ನಗರದ ಶ್ರೀರಾಮಪುರ ಕಾಲೋನಿ ಪೆದ್ದಕ್ಕ (40)ವರ್ಷ ಈಕೆಯನ್ನು‌ ಬಂಧಿಸಿ  ಕಳ್ಳತನ ಮಾಡಿದ ಸುಮಾರು 228 ಗ್ರಾಂ ಬಂಗಾರದ ಆಭರಣ, 4281 ಗ್ರಾಂ ಬೆಳ್ಳಿಯ ಸಾಮಾನು ವಶಪಡಿಸಿಕೊಳ್ಳಲಾಗಿದೆ.