ಉ.ಕ. ಕರಿಯರ್ ಕಾನ್ಕ್ಲೇವ್-2024
ಹುಬ್ಬಳ್ಳಿ,ಜೂ12: ಇನ್‍ಸ್ಟಿಟ್ಯೂಟ್ ಆಫ್ ಎಕ್ಸಲೆನ್ಸ್ ಇನ್ ಮ್ಯಾನೇಜ್‍ಮೆಂಟ್ ಸೈನ್ಸ್ ಹುಬ್ಬಳ್ಳಿ ,ಕರ್ನಾಟಕ ವಿಶ್ವ ವಿದ್ಯಾನಿಲಯ ಕಾಲೇಜು ಶಿಕ್ಷಕರ ಸಂಘ ಮತ್ತು ದೇಶಪಾಂಡೆ ಸ್ಟಾರ್ಟ್‍ಅಪ್‍ಗಳ ಸಹಯೋಗದೊಂದಿಗೆ ತನ್ನ ಕ್ಯಾಂಪಸ್‍ನಲ್ಲಿ ಒಂದು ದಿನದ ಉತ್ತರ ಕರ್ನಾಟಕ ಕೆರಿಯರ್ ಕಾನ್ಕ್ಲೇವ್ ಅನ್ನು ಆಯೋಜಿಸಿತ್ತು .
ಕಾರ್ಯಕ್ರಮವನ್ನು ಕೆಎಎಸ್ ಅಧಿಕಾರಿ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ,ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಹಣಕಾಸು ನಿಗಮ ಹುಬ್ಬಳ್ಳಿ ಯವರು ಉದ್ಘಾಟಿಸಿ ಮಾತನಾಡುತ್ತ, ಸರಿಯಾದ ಸಮಯದಲ್ಲಿ ಕದ ತಟ್ಟುವವರಿಗೆ ಯಶಸ್ಸಿನ ಬಾಗಿಲು ತೆರೆಯುತ್ತದೆ, ಶ್ರಮಕ್ಕೆ ಬೇರೆ ಪರ್ಯಾಯವಿಲ್ಲ. ವಿದ್ಯಾರ್ಥಿಗಳು ತಮ್ಮ ಗುರಿಯನ್ನು ಸಾಧಿಸುವವರೆಗೆ ಬೆಳಿಗ್ಗೆ ಐದು ಗಂಟೆಯ ನಂತರ ಮಲಗುವ ಹಕ್ಕು ಇಲ್ಲ ಎಂದರು.
ಇನ್ನೊಬ್ಬ ಅತಿಥಿಗಳಾಗಿದ್ದ ಕರ್ನಾಟಕ ವಿಶ್ವವಿದ್ಯಾನಿಲಯ ಕಾಲೇಜು ಶಿಕ್ಷಕರ ಸಂಘದ ಅಧ್ಯಕ್ಷ ಡಾ.ಮಂಜುನಾಥ್ ತಲ್ಲೂರು ಮಾತನಾಡುತ್ತ ಜ್ಞಾನ ಮತ್ತು ಸಾಮಾನ್ಯ ಜ್ಞಾನ ಎರಡು ಉತ್ತಮ ಸ್ನೇಹಿತರು, ಶಿಕ್ಷಣವು ಜೀವನದಲ್ಲಿ ಆತ್ಮವಿಶ್ವಾಸ ತುಂಬಬೇಕು ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಧ್ಯಾಪಕಿ ಹಾಗೂ ಸಲಹಾ ಮಂಡಳಿ ಸದಸ್ಯೆ ಡಾ.ಪೂರ್ಣಿಮಾ ಚರಂತಿಮಠ ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಕಾಲೇಜಿನ ನಿರ್ದೇಶಕರಾದ ಡಾ.ವೀರಣ್ಣ ಡಿ ಕೆ ಸ್ವಾಗತಿಸಿದರು. ಕುಮಾರಿ ಶಾರದ ಪ್ರಾರ್ಥಿಸಿದರು. ಕಾರ್ಯಕ್ರಮವನ್ನು ಪೆÇ್ರ.ವಿನಂತಿ ನಾಯ್ಕ್ ಮತ್ತು ಪೆÇ್ರ.ಅಕ್ಷತಾ ಬಿಳಗಿ ನಿರ್ವಹಿಸಿದರು. ಪೆÇ್ರ.ಪೂಜಾ ಚರಂತಿಮಠ ಮತ್ತು ಇತರ ಸಿಬ್ಬಂದಿಗಳು ಮತ್ತು 75 ನೋಂದಾಯಿತ ವಿದ್ಯಾರ್ಥಿಗಳು ಭಾಗವಹಿಸಿದ್ದರು.