ಮಣ್ಣು ಆರೋಗ್ಯ ಅಭಿಯಾನ: ಶಾಲಾ ಮಕ್ಕಳಿಗೆ ತರಬೇತಿ
ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜೂ.೧೨; ಜಿಲ್ಲೆಯ ಹಿರಿಯೂರು ತಾಲ್ಲೂಕಿನ ದೇವರಕೊಟ್ಟ ಗ್ರಾಮದ ಏಕಲವ್ಯ ಮಾದರಿ ವಸತಿ ಶಾಲೆಯ ಮಕ್ಕಳಿಗೆ ಮಂಗಳವಾರ ಮಣ್ಣು ಆರೋಗ್ಯ ಕುರಿತು ತರಬೇತಿ ನೀಡಲಾಯಿತು.
2024-25ನೇ ಸಾಲಿನಲ್ಲಿ ಕೇಂದ್ರ ಪುರಸ್ಕøತ ಯೋಜನೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಶಾಲಾ ಮಕ್ಕಳಿಗೆ ಮಣ್ಣು ಆರೋಗ್ಯ ಅಭಿಯಾನ ಕುರಿತು ಕಾರ್ಯಕ್ರಮ ಆಯೋಜಿಸಿದ್ದು, 8ನೇ ತರಗತಿಯಿಂದ 12ನೇ ತರಗತಿವರೆಗಿನ ಮಕ್ಕಳಿಗೆ ಮಣ್ಣು ಆರೋಗ್ಯ ಕುರಿತು ತರಬೇತಿ ನೀಡಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ಯೋಜನೆಯ ಉದ್ದೇಶ, ಮಣ್ಣು ಮಾದರಿ ಸಂಗ್ರಹಣೆ, ವಿಶ್ಲೇಷಣೆ, ಮಣ್ಣು ಆರೋಗ್ಯ ಚೀಟಿ ತಯಾರಿ ಕುರಿತು ತರಬೇತಿ ನೀಡಲಾಯಿತು. ಒಟ್ಟು 50 ವಿದ್ಯಾರ್ಥಿಗಳು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಈ ಸಂದರ್ಭದಲ್ಲಿ ಜಂಟಿ ಕೃಷಿ ನಿರ್ದೇಶಕ ಬಿ.ಮಂಜುನಾಥ್, ಉಪ ಕೃಷಿ ನಿರ್ದೇಶಕ ಬಿ.ಎನ್.ಪ್ರಭಾಕರ್, ಸಹಾಯಕ ಕೃಷಿ ನಿರ್ದೇಶಕ ಮಂಜುನಾಥ್, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ರವಿಕುಮಾರ್, ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲ ಪ್ರವೀಣ್ ಕುಮಾರ್, ಸಹಾಯಕ ಕೃಷಿ ನಿರ್ದೇಶಕರಾದ (ವಿಷಯ ತಜ್ಞರು) ಟಿ.ಪಿ.ರಂಜಿತಾ, ಕೃಷಿ ಅಧಿಕಾರಿ ಎಂ.ಎಸ್.ಕಿರಣ್ ಕುಮಾರ್, ಆತ್ಮ ಸಿಬ್ಬಂದಿ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು.