ವಿದೇಶಿ ವಸ್ತ್ರ ಬಹಿಷ್ಕರಿಸಿ, ಸ್ವದೇಶಿ ಖಾದಿ ಹೆಚ್ಚು ಬಳಸಬೇಕು; ಡಾ. ಎಚ್. ಕೆ. ಎಸ್. ಸ್ವಾಮಿ

ಸಂಜೆವಾಣಿ ವಾರ್ತೆ
ಚಿತ್ರದುರ್ಗ. ಜೂ.೧೨; ಗಾಂಧೀಜಿಯವರ ಕಲ್ಪನೆಯಲ್ಲಿ ಸ್ವದೇಶಿ ಎಂದರೆ ಭಾರತದ ಅಗತ್ಯವನ್ನು ಪೂರೈಸುವಷ್ಟು ಬಟ್ಟೆ ಉತ್ಪಾದಿಸುವುದು ಮತ್ತು ಅದನ್ನು ವಿತರಿಸುವುದು, ಜನರು ಬಳಸಲು ವಚನಬದ್ಧರಾಗುವಂತೆ ಮನವಲಿಸುವುದು, ವಿದೇಶಿ ಮಾಲನ್ನು ಅಗತ್ಯ ಇರುವೆಡೆಯಲ್ಲಿ ಬಳಸುವ ಹಕ್ಕು ಇದ್ದೆ ಇರುತ್ತದೆ ಎಂದು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಮತ್ತು ಕರ್ನಾಟಕ ಸರ್ವೋದಯ ಮಂಡಳಿ ಜಿಲ್ಲಾಧ್ಯಕ್ಷರಾದ ಡಾ. ಎಚ್. ಕೆ. ಎಸ್. ಸ್ವಾಮಿ ನುಡಿದರು.ಅವರು ಶಿವಮೊಗ್ಗ ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸಹಜ ಸಮೃದ್ಧ ಸಂಸ್ಥೆ, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ಮಹಾವಿದ್ಯಾಲಯ, ಸಾವಯವ ಕೃಷಿ ಸಂಶೋಧನಾ ಕೇಂದ್ರವು ಆಯೋಜಿಸಿದ್ದ ದೇಸಿ ಬಿಜೋತ್ಸವದಲ್ಲಿ ಮಾತನಾಡುತ್ತಿದ್ದರು.ಬಹುಪಾಲು ಹೆಂಗಸರು ಲಾಭಕ್ಕಾಗಿಯೂ ಅಥವಾ ಖುಷಿಗಾಗಿ, ಗೃಹ ಬಳಕೆಗಾಗಿ, ಬಟ್ಟೆ ನೆಯುತ್ತಿದ್ದರು. ಅದನ್ನೇ ಇವತ್ತು ಮಾಡಬಹುದೇ ಇಲ್ಲವೇ ಎಂಬ ತನಿಖೆ ಅನಗತ್ಯ, ಲಕ್ಷಾಂತರ ರೈತರÀ ಆದಾಯವು ಹೆಚ್ಚು ಆಗುತ್ತದೆ, ಚರಕ ಇಲ್ಲದೆ ಬಡವರ ನಡುವೆ ಮಾಡಿದ ಕೆಲಸದಲ್ಲಿ ಲಾಭವಿಲ್ಲ, ಧರ್ಮವೂ ಇಲ್ಲ, ಬಡ ಜನ ಆಹಾರ ಬಟ್ಟೆ ಪಡೆದುಕೊಳ್ಳಲು ನಾವು ಸಹಾಯ ಮಾಡಲೇಬೇಕು, ಭಾರತದಲ್ಲಿನ ಸಾಮೂಹಿಕ ಬಡತನವನ್ನು ಬರ‍್ಯಾವು ಪರಿಹರಿಸಲಾರದು ಎಂದರು.2AA ವರ್ಷಗಳ ಹಿಂದೆ ಭಾರತದ ಹೆಂಗಸರು ಮನೆ ಬಳಕೆಗೆ ನೋಲುತ್ತಿದ್ದರು, ವಿದೇಶಿ ಬೇಡಿಕೆಗೂ ನೂಲುತ್ತಿದ್ದರು. ಭಾರತದ ಲಕ್ಷಾಂತರ ಮನೆಗಳಿನ ಆರ್ಥಿಕ ಕಷ್ಟದ ಸಮಸ್ಯೆಯನ್ನು ಚರಕ ಪರಿಹರಿಸುವುದು ಮತ್ತು ಅದು ಕ್ಷಾಮದ ವಿರುದ್ಧ ಪರಿಣಾಮಕಾರಿ ಎಂದು ಗಾಂಧೀಜಿ ನುಡಿದಿದ್ದಾರೆ ಎಂದರು.ಎಲ್ಲಾ ಜನಾಂಗದವರು ಖಾದಿ ಬಳಸದಿದ್ದರೆ, ಅದು ವ್ಯಾಪಕವಾಗಲಾರದು, ನಮ್ಮಲ್ಲಿ ಖಾದಿ ವ್ಯಾಪಕವಾಗಿ ಬಳಕೆಗೆ ಬರದಿದ್ದಲ್ಲಿ ವಸ್ತç ಬಹಿಷ್ಕಾರವು ತಾನಾಗಿಯೇ ಬರುತ್ತದೆ. ಭಾರತದ ಹಸಿದ ಜನಕೋಟಿಯ ಬಗ್ಗೆ ನಮಗೆ ಮನಮಿಡಿಯುವುದಾದರೆ, ನಾವು ಅವರ ಮನೆಗಳಲ್ಲಿ ಚರಕಗಳನ್ನು ಸ್ಥಾಪಿಸಬೇಕು, ಆದ್ದರಿಂದ ನಾವೇ ತಜ್ಞರಾಗಬೇಕು, ಅದಕ್ಕಾಗಿ ನಾವೇ ದಿನವೂ ಸೂತ್ರವೆಂದು ದಾರ ಮಾಡಬೇಕು, ನಾವು ಚರಕದ ರಹಸ್ಯವನ್ನು ಅರ್ಥ ಮಾಡಿಕೊಂಡಿದ್ದರೆ, ಅದು ಅನುಕೂಲಕರ. ಅದು ಪ್ರೇಮದ ಸಂಕೇತ ಎಂಬುದನ್ನು ಕಂಡುಕೊAಡಿದ್ದರೆ, ನಾವು ಬೇರೆ ಯೋಚನೆಗೆ ತೊಡಗುವುದಿಲ್ಲ. ಬಹು ಜನ ನಮ್ಮನ್ನು ಹಿಂಬಾಲಿಸದಿದ್ದರೆ, ನೂಲಲು, ಅಂಜಿ ಮಾಡಲು ಅಥವಾ ನೇಯಲು ನಮಗೆ ಬೇಕಾದಷ್ಟು ಸಮಯ ಸಿಗುತ್ತದೆ ಎಂದಿದ್ದರು.ಕೇವಲ ಆರ್ಥಿಕ ದೃಷ್ಟಿಯಿಂದ ಹೇಳುವುದಾದರೆ ವಿದೇಶಿ ನೂಲಿನ ಬಟ್ಟೆಯ ವರ್ತಕರು, ತಮ್ಮ ವ್ಯಾಪಾರವನ್ನು ಕೈ ಬಿಡದೆ ಹೋದರೆ ಮತ್ತು ಜನ ತಮ್ಮ ವಿದೇಶಿ ವಸ್ತç ಮೋಹದಿಂದ ಮುಕ್ತರಾಗದೆ ಹೋದರೆ, ದೇಶದ ಅತ್ಯಂತ ಉಗ್ರರೋಗವಾದ ಹಸಿವನ್ನು ಎಂದಿಗೂ ಗುಣಪಡಿಸಲಾಗುವುದಿಲ್ಲ ಎಂದು ಧೈರ್ಯವಾಗಿ ಹೇಳುತ್ತೇನೆ ಎಂದಿದ್ದರು.