ದೇಶದ ಸದೃಡತೆಗೆ ಎನ್.ಎಸ್.ಎಸ್.ಸಹಾಯಕಾರಿ
ಕುಂದಗೋಳ: ಸದೃಡ ದೇಶ ಕಟ್ಟುವಲ್ಲಿ ಯುವಕರ ಪಾತ್ರ ಬಹಳಷ್ಟಿದೆ. ಶ್ರಮ ಮತ್ತು ಬಲಿದಾನವು ಇದರ ಯಶಸ್ಸಿಗೆ ಬಹುಮುಖ್ಯ ಕಾರಣವಾಗುತ್ತದೆ ಎಂದು ಪ್ರಾಚಾರ್ಯ ಡಾ.ಬಿ.ಎಸ್.ಶಿರಿಯಪ್ಪಗೌಡ್ರ ಹೇಳಿದರು.
ಪಟ್ಟಣದ ಷ.ಬ್ರ.ಲಿಂ,ಸಿದ್ದಲಿಂಗ ಶಿವಾಚಾರ್ಯಮಹಾಸ್ವಾಮಿಗಳ ಸರಕಾರಿ ಪದವಿ ಕಾಲೇಜಿನ ಎನ್.ಎನ್.ಎಸ್.ಶಿಬಿರಕ್ಕೆ ದತ್ತು ಗ್ರಾಮವಾದ ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಚಾಲನೆ ನೀಡಿ ಅವರು ಮಾತನಾಡಿದರು.
ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಜರುಗಿದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಸೇವಾ ಶಿಭಿರವು ಅತ್ಯಂತ ಪ್ರಯೋಜನಕಾರಿ ಹಾಗೂ ರಾಷ್ಟ್ರದ ದೃಡ ಸಂಕಲ್ಪದ ಅನೇಕ ವಿಚಾರಗಳಿಗೆ ಮಾರ್ಗದರ್ಶನ ಕಲ್ಪಿಸುತ್ತದೆ ಎಂದರು.
ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಪೆÇ್ರ.ಕೃಷ್ಣಪ್ಪ ಲಮಾಣಿ,ಡಾ.ಸುಮಂಗಲಾ ಮಟ್ಟಿ,ಗ್ರಾಮ ಪಂಚಾಯತಿ ಸದಸ್ಯರಾದ ಶಿವಾನಂದ ಶಿವಳ್ಳಿ, ಅಶೋಕ ತಡಸೂರ,ಫಕ್ಕಿರಪ್ಪ ಬೂಷಣ್ಣಾವರ್, ಮಲ್ಲೇಶ ಕದಡಿ, ಲಕ್ಷ್ಮಣ ತಳವಾರ ಕಾರ್ಯಕ್ರಮ ಯಶಸ್ವಿಗೆ ಸಹಕರಿಸಿದರು.