ದರ್ಶನ್ ಕೃತ್ಯ :ಶೋಭೆ ತರುವಂತದ್ದಲ್ಲ
ಬೆಂಗಳೂರು, ಜೂ. ೧೨- ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಜನತೆಗೆ ಸಂದೇಶ ನೀಡಬೇಕಾದ ಕರ್ತವ್ಯ ಚಿತ್ರರಂಗದ್ದು. ಆದರೆ, ಚಿತ್ರೋದ್ಯಮಕ್ಕೆ ಕಳಂಕ ತರುವ ಪ್ರಕರಣ ಇದಾಗಿದೆ.
ಈ ಪ್ರಕರಣ ಪ್ರತಿಕ್ರಿಯಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ನಟ ದರ್ಶನ್ ಎಸಗಿರುವ ಕೃತ್ಯ ಚಿತ್ರರಂಗಕ್ಕೆ ಶೋಭೆ ತರುವಂತದ್ದಲ್ಲ ಎಂದು ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಈ ಘಟನೆಯನ್ನು ಖಂಡಿಸುತ್ತೇನೆ. ಈ ಘಟನೆ ಚಿತ್ರರಂಗಕ್ಕೆ ಶೋಭೆ ತರುವಂತದಲ್ಲ. ರಾಜ್‌ಕುಮಾರ್, ವಿಷ್ಣವರ್ಧನ್, ಅಂಬರೀಶ್ ಅಂತಹವರನ್ನು ನೋಡಿ ದರ್ಶನ್ ಕಲಿಯಬೇಕು. ತಪ್ಪು ಮಾಡಿದರೆ ಕರೆದು ಬುದ್ದಿ ಹೇಳಬೇಕಿತ್ತು ಎಂದರು.
ಕೊಲೆಯಾದ ರೇಣುಕಾಸ್ವಾಮಿ ತಂದೆ ತಾಯಿಗೆ ನಾವು ಧೈರ್ಯ ಹೇಳಬೇಕು. ಯಾರದ್ದೂ ತಪ್ಪು, ಯಾರು ಸರಿ ಅನ್ನೋದನ್ನು ಪೊಲೀಸರು ನೋಡಬೇಕಾಗುತ್ತದೆ ಎಂದು ಹೇಳಿದ್ದಾರೆ.