ಅವಿರೋಧ ಆಯ್ಕೆ
ನವಲಗುಂದ,ಜೂ12: ಪಟ್ಟಣದ ಮಾಡೆಲ್ ಏಜ್ಯುಕೇಶನ್ ಬೋರ್ಡಿನ ಆಡಳಿತ ಮಂಡಳಿಯ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿ ಲೋಕನಾಥ ಹೇಬಸೂರ್ ಅವರನ್ನು ಉಪಾಧ್ಯಕ್ಷರಾಗಿ ಅವಿರೋಧ ಆಯ್ಕೆಯಾದರು. ಇದೆ ವೇಳೆ ಉಪಾಧ್ಯಕ್ಷರನ್ನು ಆಡಳಿತ ಮಂಡಳಿ ಹಾಗೂ ಶಾಲಾ ಶಿಕ್ಷಕರಿಂದ ಸನ್ಮಾನಿಸಲಾಯಿತು.
ಸಂಸ್ಥೆಯ ಅಧ್ಯಕ್ಷರು ಮಾಜಿ ಸಚಿವರಾದ ಕೆ ಎನ್ ಗಡ್ಡಿ ಸದಸ್ಯರಾದ ಎಸ್ ಎಂ ಪಟ್ಟಣಶೆಟ್ಟಿ, ಎ ಎಸ್ ಬಾಗಿ, ಎನ್ ಪಿ ಕುಲಕರ್ಣಿ, ಆರ್ ಎನ್ ಧಾರವಾಡ, ಎ ಎನ್ ಜೋಶಿ, ವಿ ಎಸ್ ಮದ್ದೂರಾಯಣ್ಣವರ, ಮುಖ್ಯಶಿಕ್ಷಕರಾದ ಜಿ ಎಂ ಮಕಣ್ಣವರ, ಎಸ್ ವಾಯ್ ಉಳ್ಳಿಕಾಶಿ ಶಿಕ್ಷಕರಾದ ಆರ್ ಎಸ್ ಪಾಟೀಲ್, ಎಂ ಎಸ್ ಹಿರೇಮಠ, ಎಂ ವಿ ಗಾರವಾಡ, ಆರ್ ಎಸ್ ಆಲೂರ, ಸೇರಿದಂತೆ ಆಡಳಿತಮಂಡಳಿ ಎಲ್ಲ ಸದಸ್ಯರು, ಶಿಕ್ಷಕರು ಉಪಸ್ಥಿತರಿದ್ದರು.