ಧಾರವಾಡ: ದತ್ತಿ ಉಪನ್ಯಾಸ
ಧಾರವಾಡ,ಜೂ12 : ಮನುಷ್ಯನ ಸಾಮಾಜಿಕ ಜೀವನದಲ್ಲಿಜ್ಯೋತಿಷ್ಯದ ಪ್ರಾಮುಖ್ಯ ಹಲವು ಪ್ರಕಾರವುಳ್ಳದ್ದು. ಮಾನವೀಯ ಅವಶ್ಯಕತೆಗಳೂ, ಆಶೋತ್ತರಗಳೂ ಜ್ಯೋತಿಷ್ಯದ ಅನ್ವೇಷಣಕ್ಕೆ ಸತತವಾದ ಪ್ರೇರಕ ಶಕ್ತಿಯನ್ನು ಒದಗಿಸುತ್ತದೆ ಎಂದು ಸಂಸ್ಕøತ ಉಪನ್ಯಾಸಕ ಹಾಗೂ ವೇದ ವಿಜ್ಞಾನ ಜ್ಯೋತಿಷ್ಯ ಅಂಕಣ ಬರಹಗಾರ ವಿದ್ವಾನ್ ನವೀನಶಾಸ್ತ್ರಿ ರಾ.ಪುರಾಣಿಕ ಹೇಳಿದರು.
ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ದಿ. ಶ್ರೀ ಎನ್.ಕೆ.ಜೋಗಳೇಕರ ಸ್ಮರಣಾರ್ಥದತ್ತಿ ಅಂಗವಾಗಿ ಆಯೋಜಿಸಿದ್ದ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಮತ್ತು ವೈಜ್ಞಾನಿಕ ಚಿಂತನೆಗಳು' ವಿಷಯ ಕುರಿತು ಮಾತನಾಡುತ್ತಿದ್ದರು. ಮುಂದುವರೆದು ಮಾತನಾಡಿದ ಅವರು, ಸಮಾಜ ಜೀವಿಯಾದ ಮಾನವನ ಅವಶ್ಯಕತೆಗಳನ್ನು ಹಲವು ಬಗೆಯ ಅವಸರಗಳನ್ನಾಗಿ ವಿಂಗಡಿಸಬಹುದು. ಜ್ಯೋತಿಷ್ಯವು ಎಲ್ಲ ತುರ್ತು ಅವಶ್ಯಕತೆಗಳಿಗೂ ನಿರ್ದಿಷ್ಟವಾದ ಸಂಬಂಧವನ್ನು ಪಡೆದಿದೆ. ಬದುಕಿನಲ್ಲಿಯಶಸ್ಸು ಬಹುಮಟ್ಟಿಗೆ ಸಂಪತ್ತನ್ನುಇಲ್ಲವೆ ವಿಪತ್ತನ್ನುಅವಲಂಭಿಸುತ್ತದೆ. ಮನುಷ್ಯನುತನ್ನ ಪೂರ್ವಜನ್ಮದಕರ್ಮವಿಪಾಕದಿಂದ ಸದ್ಯದ ಬದುಕಿನಲ್ಲಿಅನುಭವಿಸುವ ಐಶ್ವರ್ಯ, ಖ್ಯಾತಿ, ಪದವಿ, ಸ್ಥಾನಮಾನ, ವಿಪತ್ತು, ಅನಾರೋಗ್ಯ ಮತು ದೌರ್ಬಾಗ್ಯಗಳ ಪ್ರಮಾಣವನ್ನು ಯೋಗಗಳು ತಿಳಿಯಪಡಿಸುತ್ತವೆ. ಅರ್ಥಾತ್ ವಿವಿಧ ಗ್ರಹಸ್ಥಿತಿಗಳು ನಾವು ಪಡೆದುಕೊಂಡು ಬಂದಿರುವದೈಹಿಕ, ಮಾನಸಿಕ ಪ್ರವೃತ್ತಿಗಳ ಮೊತ್ತವನ್ನು ಸೂಚಿಸುತ್ತವೆ. ಅಲ್ಲದೆ ಬಹಳ ಪ್ರಾಚೀನವಾದಂಥಜ್ಯೋತಿಷ್ಯ ಶಾಸ್ತ್ರ ವಿಜ್ಞಾನದಒಂದು ಭಾಗವೇಆಗಿದೆ. ಅದುಜ್ಯೋತಿರ್ವಿಜ್ಞಾನ. ಪಾಶ್ಚಾತ್ಯ ವಿಜ್ಞಾನಿಗಳು ಹೇಳಿದ ಅನೇಕ ವೈಜ್ಞಾನಿಕ ಸಂಶೋಧನೆಗಳು ನಮ್ಮ ಭಾರತೀಯಜ್ಯೋತಿಷ್ಯ ಶಾಸ್ತ್ರವನ್ನುಉದಾಹರಣೆಯಾಗಿ ಬಳಸಿಕೊಂಡು ತಮ್ಮದೇಆದ ಅನೇಕ ಸಂಶೋಧನೆಗಳನ್ನು ಮಾಡಿದ್ದಾರೆ.ಈ ಹೆಗ್ಗಳಿಕೆ ಭಾರತೀಯಜ್ಯೋತಿಷ್ಯ ಶಾಸ್ತ್ರಕ್ಕೆ ಸಲ್ಲುತ್ತದೆ.ಇತ್ತೀಚಿನ ದಿನಮಾನಗಳಲ್ಲಿ ಜ್ಯೋತಿಷ್ಯ ಶಾಸ್ತ್ರವೂಕೂಡಾ ಪ್ರಸಿದ್ಧಿಯಾಗಿರುವಂಥದ್ದು.ಮನುಷ್ಯ ಎಷ್ಟೇ ಆಧುನಿಕತೆಯನ್ನು ಹೊಂದಿದ್ದರೂಕೂಡಾ ಅವನ ಭವಿಷ್ಯವನ್ನು ನಾಳೆ ಏನಾಗುತ್ತದೆಎಂಬುದನ್ನು ತಿಳಿದುಕೊಳ್ಳುವ ಕೌತುಕ ಸದಾಇದ್ದೇಇರುತ್ತದೆ.ಈ ನಿಟ್ಟಿನಲ್ಲಿಜ್ಯೋತಿಷ್ಯ ಶಾಸ್ತ್ರ ಪರಿಹಾರವನ್ನು ಸೂಚಿಸುವಒಂದುದಾರಿದೀಪವಾಗಿದೆ.ಇತ್ತೀಚಿನ ದಿನಮಾನಗಳಲ್ಲಿ ಜ್ಯೋತಿಷ್ಯಅಧ್ಯಯನದಕೊರತೆ ಮತ್ತು ಅನೇಕ ಆಮಿಷಗಳಿಂದ ಅದರ ಪಾವಿತ್ರ್ಯತೆಕಡಿಮೆ ಮಾಡುತ್ತಿರುವುದುಖೇದಕರ. ಹೀಗಾಗಿ ಜ್ಯೋತಿಷ್ಯ ಕೇವಲ ಉದರ ಪೋಷಣೆಗೆಇರದೆಇದೊಂದು ಮುನ್ಸೂಚನೆಯನ್ನು ನೀಡುವ ಶಾಸ್ತ್ರವಾಗಿರುವುದರಿಂದ ನಾವು ಹೆಚ್ಚು ಹೆಚ್ಚು ಅಧ್ಯಯನ ಮಾಡಿದಾಗಅದರ ಮಹತ್ವದಅರಿವಾಗುತ್ತದೆ. ವಿಜ್ಞಾನದಲ್ಲಿ ಪ್ರಯೋಗದ ಮೂಲಕ ಫಲಿತಾಂಶವನ್ನು ಕಂಡುಕೊಳ್ಳುತ್ತೇವೆಯೋ ಹಾಗೆಯೇಜ್ಯೋತಿಷ್ಯ ಶಾಸ್ತ್ರಜಾತಕದ ಮೂಲಕ ಅನೇಕ ಫಲಿತಾಂಶಗಳನ್ನು ಕಂಡುಕೊಳ್ಳಬಹುದು. ಅಲ್ಲದೇಜ್ಯೋತಿಷ್ಯ ಶಾಸ್ತ್ರದಲ್ಲಿಇರುವ ಅನೇಕ ವಿಧದ ಶಾಸ್ತ್ರಗಳು ಮನುಷ್ಯನ ಏಳಿಗೆಗಾಗಿ ಪರಿಹಾರವನ್ನು ಸೂಚಿಸುತ್ತವೆಎಂದು ನವೀನಶಾಸ್ತ್ರಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಮಾನಸಿಕ ಆರೋಗ್ಯತಜ್ಞಡಾ.ಆನಂದ ಕೆ. ಹಂದಿಗೋಳ ತಮ್ಮ ಮತ್ತು ದಿ. ಶ್ರೀ ಎನ್, ಕೆ.ಜೋಗಳೇಕರ ಅವರೊಂದಿಗಿನಒಡನಾಟವನ್ನು ಸ್ಮರಿಸಿಕೊಳ್ಳುತ್ತಾ, ಆ ಜನ್ಮ ಬ್ರಹ್ಮಚಾರಿಗಳಾಗಿದ್ದ ಇವರು ಶಿಸ್ತಿನ ಜೀವನವನ್ನು ನಡೆಸಿದವರು.ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳನ್ನೇ ಆಧರಿಸಿ, ಪ್ರಾಯೋಗಿಕಅನುಭವದಿಂದ ಮೂವತ್ತಕ್ಕೂ ಹೆಚ್ಚು ಜ್ಯೋತಿಷ್ಯ ಗ್ರಂಥಗಳನ್ನು ರಚಿಸಿದವರು.ಸ್ವಾತಂತ್ರ್ಯ ಹೋರಾಟಗಾರರಾಗಿದ್ದಇವರು ಶಕುನ ಜ್ಯೋತಿಷ್ಯಕಾರರನ್ನು ಕರೆಯಿಸಿ ಕಾರ್ಯಾಗಾರ ಮಾಡಿದ್ದರು.ಈ ಹಿನ್ನೆಲೆಯಲ್ಲಿಇವರಿಗೆಜ್ಯೋತಿಷ್ಯ ಬ್ರಹ್ಮ’ `ಜ್ಯೋತಿಷ್ಯ ಪಿತಾಮಹ’ ಎಂಬ ಬಿರುದುಗಳು ಬಂದಿವೆ ಎಂದರು.
ವೀರಣ್ಣಒಡ್ಡೀನ ಸ್ವಾಗತಿಸಿದರು.ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು.ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಶಿ. ಮ. ರಾಚಯ್ಯನವರ ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಪಾರ್ವತಿ ಹಾಲಭಾವಿ, ಶ್ರೀಮತಿ ವಿಜಯಲಕ್ಷ್ಮೀಕಲ್ಯಾಣಶೆಟ್ಟರ, ಶ್ರೀಮತಿ ಗೀತಾ ಕುಂಬಿ, ಕೆ.ಜಿ.ದೇವರಮನಿ, ಮಹಾಂತೇಶ ನರೇಗಲ್, ಎಸ್.ಕೆ.ಕುಂದರಗಿ, ಸರೋಜಿನಿ ದೇವಮಾನೆ, ಎಂ.ಬಿ. ಹೆಗ್ಗೇರಿ ಸೇರಿದಂತೆ ಮುಂತಾದವರಿದ್ದರು.