ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ
ಗದಗ, ಜೂ12: ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಪ್ರತಿಯೊಬ್ಬರು ಕ್ರೀಯಾಶೀಲತೆಯಿಂದ ಶ್ರಮವಹಿಸಿ ಎಂದು ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ.ಎಸ್.ಶಿವನಗೌಡ್ರ ಅವರು ಹೇಳಿದರು
ನಗರದ ತೊಂಟದಾರ್ಯ ಪ್ರೌಡಶಾಲೆಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ,ಜಿಲ್ಲಾ ಬಾಲಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿ,ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ,ಜಿಲ್ಲಾ ಮಕ್ಕಳ ರಕ್ಷಣಾ ಘಟಕ,ಶಿಕ್ಷಣ ಇಲಾಖೆ,ಪೆÇಲೀಸ್ ಇಲಾಖೆ,ಇವರ ಸಹಯೋಗದಲ್ಲಿ ವಿಶ್ವ ಬಾಲಕಾರ್ಮಿಕರ ಪದ್ಧತಿ ವಿರೋಧಿ ದಿನಾಚರಣೆಯ ಜಾಗೃತಿ ಜಾಥಾಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬಾಲಕಾರ್ಮಿಕ ಪದ್ಧತಿ ಯೂ ಸಾಮಾಜಿಕ ಪಿಡುಗಾಗಿದ್ದು ಬಾಲಕಾರ್ಮಿಕ ಪದ್ಧತಿಯ ನಿರ್ಮೂಲನೆಗೆ ಸಾರ್ವಜನಿಕರು ಮತ್ತು ವಿವಿಧ ಸಂಘ ಸಂಸ್ಥೆಗಳು ಸಹಕರಿಸಿ ಎಂದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅನ್ನಪೂರ್ಣ ಎಂ ಮಾತನಾಡಿ ಸಮಾಜದ ಅನಿಷ್ಟ ಪದ್ಧತಿಯಾದ ಬಾಲಕಾರ್ಮಿಕತೆ ಕೊನೆಗೊಳಿಸಿ ದೇಶದ ಆಸ್ತಿಯಾದ ಮಕ್ಕಳ ಜೀವನವನ್ನು ಉಜ್ವಲಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ದಾಗಿದೆ ಎಂದು ಅವರು ಹೇಳಿದರು.
ಜಾಥಾದಲ್ಲಿ ಕೆಲಸ ಬಿಡಿಸಿ ಶಾಲೆಗೆ ಕಳಿಸಿ,ಬೆಳೆಯುವ ವಯಸ್ಸಿನಲ್ಲೇ ದುಡಿಮೆಗೆ ದೂಡಬೇಡಿ,ಮಕ್ಕಳನ್ನು ಶಾಲೆಗೆ ಕಳಿಸಿ ಕೆಲಸಕ್ಕಲ್ಲ,ದುಡಿಮೆ ಬೇಡ ಶಿಕ್ಷಣ ಬೇಕು,ಮಕ್ಕಳನ್ನು ದುಡಿಸಿಕೊಳ್ಳುವುದು ಕಾನೂನು ಬಾಹಿರ ,ಬನ್ನಿ ಬಾಲಕಾರ್ಮಿಕ ಪದ್ಧತಿಯನ್ನು ತಡೆಯೋಣ ಸತ್ಪ್ರಜೆಗಳನ್ನಾಗಿಸಲು ಹುರಿದುಂಬಿಸೋಣ,ಮಕ್ಕಳಿಗೆ ಬೇಕು ಆಟ ಪಾಠ ಬೇಡ ಕೆಲಸಹಳ ಕಾಟ,ಬಾಲಕಾರ್ಮಿಕ ಪದ್ಧತಿ ನಿವಾರಣೆ ದೇಶದ ಸುಧಾರಣೆ,ದುಡಿಮೆಯಿಂದ ಶಾಲೆಗೆ ಕತ್ತಲೆಯಿಂದ ಬೆಳಕಿಗೆ,ಹಚ್ಚಬೇಡ ಹಚ್ಚಬೇಡ ಕೂಲಿಗೆ ನನ್ನನ್ನು ಹಚ್ಚು ಬಾ ಹಚ್ಚುಬಾ ಶಾಲೆಗೆ ನನ್ನನ್ನು.ದುಡಿಮೆ ಬೇಡ ಶಿಕ್ಷಣ ಬೇಕು ಎಂಬ ಘೋಷವಾಕ್ಯಗಳೊಂದಿಗೆ ತೊಂಟದಾರ್ಯ ಪ್ರೌಡಶಾಲೆಯಿಂದ ಪ್ರಾರಂಭವಾದ ಜಾಥಾ ರೋಟರಿ ವೃತ್ತ,ಗಾಂಧೀ ವೃತ್ತ ಟಾಂಗಾ ವೃತ್ತ ಸೇರಿದಂತೆ ನಗರದ ಪ್ರಮುಖ ವೃತ್ತಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಲಾಯಿತು.
ಜಾಥಾದಲ್ಲಿ ಹೆಚ್ಚುವರಿ ಪೆÇಲೀಸ್ ವರಿಷ್ಟಾಧಿಕಾರಿಗಳಾದ ಎಂ.ಬಿ.ಸಂಕದ, ಜಿಲ್ಲಾ ಕಾರ್ಮಿಕ ಇಲಾಖೆಯ ಅಧಿಕಾರಿ ಮೊಹಮ್ಮದ್ ಅಕ್ರಂ ಎಚ್ ಅಲ್ಲಾಪೂರ,ತೊಂಟದಾರ್ಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಕೊಟ್ರೇಶ ಮೆಣಸಿನಕಾಯಿ, ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಅನ್ನಪೂರ್ಣ,ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಮ್.ಎ.ರಡ್ಡೇರ,ವಾರ್ತಾ ಮತ್ತು ಸಾರ್ವಜನಿಕ ಸಂರ್ಪಕ ಇಲಾಖೆ ಸಹಾಯಕ ನಿರ್ದೇಶಕರಾದ ವಸಂತ ಮಡ್ಲೂರ, ಕಾರ್ಮಿಕ ನಿರೀಕ್ಷಕರಾದ ಗಿರೀಶ ಬಂಕದಮನಿ, ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸೊಸೈಟಿಯ ಯೋಜಾನಾ ನಿರ್ದೇಶಕ ಸಂದೇಶ ಪಾಟೀಲ್ , ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.