ಆರೋಗ್ಯ ತಪಾಸಣಾ ಶಿಬಿರ
ಲಕ್ಷ್ಮೇಶ್ವರ,ಜೂ.12: ಪಟ್ಟಣದಲ್ಲಿ ಮಂಗಳವಾರ ಶ್ರೀ ಬಾಲಾಜಿ ಆಸ್ಪತ್ರೆ ಹಾಗೂ ಹುಬ್ಬಳ್ಳಿಯ ಕೆಎಲ್‍ಇ ಆಸ್ಪತ್ರೆ ಇವರ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಜರುಗಿತು.
ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದ ಬಾಲಾಜಿ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಹಾಗೂ ಶಾಸಕ ಚಂದ್ರು ಲಮಾಣಿ ಅವರು ಸದೃಢ ಭಾರತ ನಿರ್ಮಾಣಕ್ಕೆ ಆರೋಗ್ಯದ ಸಮಾಜ ಬೇಕು. ಈ ನಿಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಶ್ರೀಸಾಮಾನ್ಯರ ಆರೋಗ್ಯ ತಪಾಸಣೆಗಾಗಿ ಇಂಥ ಶಿಬಿರಗಳನ್ನು ಹಮ್ಮಿಕೊಂಡಿದೆ ಎಂದರು.
ಅವರು ಕಳೆದ ಏಳು ವರ್ಷಗಳಲ್ಲಿ ತಾವು ಕೈಗೊಂಡ ಅನೇಕ ರಚನಾತ್ಮಕ ಹಾಗೂ ಸಮಾಜಯುಕ್ತ ಕಾರ್ಯಕ್ರಮಗಳ ರೂಪರೇಷೆಗಳನ್ನು ವಿವರಿಸಿದರು ಕೊವಿಡ್ ಸಂದರ್ಭದಲ್ಲಿ ತಾವು ಕೈಗೊಂಡ ಕಾರ್ಯ ಜನಮೆಚ್ಚುಗೆಗಳಿಸಿ ತಮ್ಮನ್ನು ಶಾಸಕರನ್ನಾಗಿಸಲು ಕಾರಣವಾಯಿತು ಎಂದು ನೆನಪಿಸಿಕೊಂಡರು.
ಶಿಬಿರದಲ್ಲಿ ರಕ್ತದೊತ್ತಡ ಸಕ್ಕರೆ ಕಾಯಿಲೆ ಹೃದಯ ರೋಗ ಕಿಡ್ನಿ ಸಮಸ್ಯೆ ಶ್ವಾಸಕೋಶ ನರರೋಗ ಸೇರಿದಂತೆ ಅನೇಕ ರೋಗಗಳ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ರೋಗಿಗಳ ತಪಾಸಣೆ ಮಾಡಿದರು.
ಈ ಸಂದರ್ಭದಲ್ಲಿ ತಜ್ಞ ವೈದ್ಯರುಗಳಾದ ಅವಿತ ಸತ್ತೂರ, ರಾಜು ಕದಂ, ಜಯಪ್ರಭ ಗೋವಿಂದ, ದೇಸಾಯಿ ಸಂದೀಪ ಕುಂಬಾರ ,ಸೀತಾ ಮುತಾಲಿಕ್ ವೆಂಕಟೇಶ ಎಚ್ ಎನ್ ಸೇರಿದಂತೆ ಅನೇಕರಿದ್ದರು.