ಮುರುಘೇಂದ್ರ ಶ್ರೀಗಳ ಜನ್ಮದಿನೋತ್ಸವ
ಮುನವಳ್ಳಿ,ಜೂ.12: ಪಟ್ಟಣದ ಶ್ರೀ ಸೋಮಶೇಖರ ಮಠದ ಶ್ರೀ ಮುರುಘೇಂದ್ರ ಶ್ರೀಗಳ 50 ನೇ ಜನ್ಮದಿನೋತ್ಸವದ ಅಂಗವಾಗಿ ವಿವಿಧ ಕಾರ್ಯಕ್ರಮಗಳು ಸೋಮವಾರ ಜರಗಿದವು.
ಸಾನಿಧ್ಯವಹಿಸಿದ ಶ್ರೀ ಮುರಗೋಡದ ಶ್ರೀ ನೀಲಕಂಠ ಶ್ರೀಗಳು ಮಾತನಾಡಿ ಮಠವನ್ನು ಭಕ್ತರ ಸಹಕಾರದಿಂದ ನಾಡಿನಾದ್ಯಂತ ಹೆಸರುವಾಸಿಯಾಗುವಂತೆ ಮಾಡಿರುವುದು ಶ್ರೀ ಮುರುಘೇಂದ್ರ ಶ್ರೀಗಳು ಕರ್ತೃತ್ವಶಕ್ತಿಗೆ ಉದಾಹರಣೆ. ವೈಕ್ತಿಗೆ ಎಷ್ಟು ವಯಸ್ಸಾಯ್ತು ಎನ್ನುವುದು ಮುಖ್ಯವಲ್ಲ ಎಷ್ಟು ಸಮಾಜಮುಖಿ ಕೆಲಸ ಮಾಡಿದರು ಎನ್ನುವದು ಮುಖ್ಯ. ಶ್ರೀ ಮುರುಘೇಂದ್ರ ಶ್ರೀಗಳ ಭಕ್ತರನ್ನೆಲ್ಲ ಒಗ್ಗೂಡಿಸಿಕೊಂಡು ಸಮಾಜಕ್ಕೆ ಉಪಯುಕ್ತವಾಗುವಂಥ ಕೆಲಸ ಮಾಡುತ್ತಿರುವರು. ಯೋಗ ಹಾಗೂ ಶಿಕ್ಷಣ ಸಂಸ್ಥೆ ಹುಟ್ಟುಹಾಕಿ ಹಲವಾರು ಬಡಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಿರುವದು ಶ್ಲ್ಯಾಘನೀಯ ಇನ್ನು ಹೆಚ್ಚು ಹೆಚ್ಚು ಸಂಸ್ಥೆಗಳನ್ನು ಹುಟ್ಟುಹಾಕಿ ಮಠದ ಹಾಗೂ ಮುನವಳ್ಳಿಯ ಕಿರ್ತಿಯನ್ನು ಹೆಚ್ಚಿಸಲಿ ಎಂದರು.
ಶ್ರೀ ಮುರುಘೇಂದ್ರ ಶ್ರೀಗಳು ಮಾತನಾಡಿ ಶ್ರೀಮಠವು ಆದ್ಯಾತ್ಮೀಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಸಾಂಸ್ಕøತಿಕವಾಗಿ ಬೇಳೆಯಲು ಹಾನಗಲ ಕುಮಾರೇಶ್ವರನು ನಮಗೆ ಪ್ರೇರಕ ಶಕ್ತಿ. ಭಕ್ತರೇ ಶ್ರೀಮಠದ ಶಕ್ತಿಯಾಗಿದ್ದಾರೆ ಎಂದರು.
ಅಮೀನಗಡದ ಶ್ರೀ ಪ್ರಭುಶಂಕರಾಜೇಂದ್ರ ಶ್ರೀಗಳು ಕುಂದರಗಿಯ ಶ್ರೀ ಅಮರಸಿದ್ದೇಶ್ವರು ಶ್ರೀಗಳು, ಚೀಕಲಪರ್ವಿಯ ಶ್ರೀ ಸದಾಶಿವ ಶ್ರೀಗಳು, ಸವದತ್ತಿಯ ಮೂಲಿಮಠದ ಶ್ರೀ ಮಲ್ಲಿಕಾರ್ಜುನ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ಉಪ್ಪಿನಬೆಟಗೇರಿಯ ಶ್ರೀ ಕುಮಾರ ವಿರೂಪಾಕ್ಷ ಶ್ರೀಗಳು, ಕಮತಗಿಯ ಶ್ರೀ ಹುಚ್ಚೇಶ್ವರ ಶ್ರೀಗಳು, ಬೈಲಹೊಂಗಲದ ಶ್ರೀ ಪ್ರಭುನೀಲಕಂಠ ಶ್ರೀಗಳು, ಹೊಸಳ್ಳಿಯ ಶ್ರೀ ಅಭಿನವ ಬೂದೀಶ್ವರ ಶ್ರೀಗಳು, ಶ್ರೀ ವಿರೂಪಾಕ್ಷ ಗುರೂಜಿ ಘಟಪ್ರಭಾದ ಶ್ರೀಗಳು, ಶ್ರೀ ಶಿವಾನಂದ ಶ್ರೀಗಳು, ಯರಗಟ್ಟಿಯ ಗಣಪತಿ ಮಹಾರಾಜರು ಉಪಸ್ಥಿತರಿದ್ದರು.
ಶಾಸಕ ವಿಶ್ವಾಸ ವೈಧ್ಯ, ನಿಂಗನಗೌಡ ಮಲಗೌಡ್ರ, ರವೀಂದ್ರ ಯಲಿಗಾರ, ಚಂದ್ರು ಜಂಬ್ರಿ, ಸಿ.ಬಿ.ಬಾಳಿ, ವಿರೂಪಾಕ್ಷ ಮಾಮನಿ, ಅರುಣಗೌಡ ಪಾಟೀಲ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಟಿ.ಪಿ.ಮನೋಳಿ, ಈರಣ್ಣ ಸಂಕಣ್ಣವರ, ವೀರಪಯ್ಯ ಶಾಸ್ತ್ರಿಗಳು, ಡಾ|| ಎಂ.ಬಿ.ಅಷ್ಟಗಿಮಠ, ಮಂಜುನಾಥ ಭಂಡಾರಿ, ಶೇಖರ ಮುಪ್ಪಿನವರಮಠ, ಜಗದೀಶ ಹಿರೇಮಠ, ಎಂ.ಎಚ್.ಪಾಟೀಲ್, ಕೆ.ಬಿ.ನಲವಡೆ, ರುದ್ರಮ್ಮ ಶಿರಸಂಗಿ, ಉಷಾ ಗೋಪಶೆಟ್ಟಿ, ರಾಧಾ ಕುಲಕರ್ಣಿ, ಮಂಗಲಾ ಯರಗುದ್ದಿ, ಅನುರಾಧಾ ಬೆಟಗೇರಿ, ಇತರರು ಉಪಸ್ಥಿತರಿದ್ದರು. ಮಹಾಪ್ರಸಾದೊಂದಿಗೆ ಕಾರ್ಯಕ್ರಮ ಮಂಗಳವಾಯಿತು.