ಆತ್ಮಹತ್ಯೆ ಪ್ರಕರಣ: ತಲಾ 4.15ಲಕ್ಷ ಪರಿಹಾರ ನೀಡಿದ ಡಿ.ರವಿಶಂಕರ್
ಸಂಜೆವಾಣಿ ವಾರ್ತೆ
ಕೆ.ಆರ್.ನಗರ, ಜೂ.12:- ತಾಲೂಕಿನ ಚಂದಗಾಲು ಗ್ರಾಮದ ನಾಯಕ ಸಮುದಾಯದ ಮಹದೇವನಾಯಕನ ಕುಟುಂಬದ ನಾಲ್ವರ ಆತ್ಮಹತ್ಯೆ ವಿಚಾರದಲ್ಲಿ ನಾನು ಕ್ಷೇತ್ರದ ಶಾಸಕ ಮತ್ತು ಸರ್ಕಾರದ ಪ್ರತಿನಿಧಿಯಾಗಿ ಜವಾಬ್ದಾರಿಯುತವಾಗಿ ನಡೆದುಕೊಂಡಿದ್ದೇನೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ವ್ಯಕ್ತಿಯೋರ್ವನ ಕಿರುಕುಳದಿಂದ ಮಹದೇವನಾಯಕನ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ ಪರಿಣಾಮ ಮಹದೇವನಾಯಕ ಮತ್ತು ಆತನ ಪುತ್ರಿ ಲೀಲಾವತಿ ಮೃತಪಟ್ಟಿದ್ದು ಪತ್ನಿ ಗೌರಮ್ಮ ಅಪ್ರಾಪ್ತ ಬಾಲಕಿ ಬದುಕುಳಿದಿದ್ದು ಈ ಪ್ರಕರಣದಲ್ಲಿ ಗ್ರಾಮದ ಮುಖಂಡರು ಮತ್ತು ನಾಯಕ ಸಮಾಜದ ಯಜಮಾನರ ಮಾತಿನಂತೆ ಕೇಸು ದಾಖಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗಿದೆ. ಕುಟುಂಬಕ್ಕೆ ತೊಂದರೆ ನೀಡಿದ ಚೀರನಹಳ್ಳಿ ಗ್ರಾಮದ ಲೋಕೇಶ್ ವಿರುದ್ದ ಪೆÇೀಕ್ಸೋ, ಎಸ್‍ಸಿ/ಎಸ್ಟಿ ದೌರ್ಜನ್ಯ ಮತ್ತು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಕಾಯ್ದೆಯಡಿ ಕೇಸು ದಾಖಲಿಸಿ ಘಟನೆ ನಡೆದ ದಿನವೇ ಆತನನ್ನು ಬಂಧಿಸುವುದರ ಜತೆಗೆ ನಿರ್ಲಕ್ಷವಹಿಸಿದ್ದ ಪೆÇಲೀಸ್ ನಿರೀಕ್ಷಕ ಪಿ.ಪಿ.ಸಂತೋಷ್, ಎಎಸ್‍ಐ ಗಿರೀಶ್, ಮುಖ್ಯಪೇದೆ ರಾಘವೇಂದ್ರ ಅವರನ್ನು ಅಮಾನತ್ತು ಮಾಡಲಾಗಿದೆ ಎಂದರು.
ಇದರ ಜತೆಗೆ ಇಡೀ ಪ್ರಕರಣದ ಬಗ್ಗೆ ನಾನು ಮುಖ್ಯಮಂತ್ರಿ ಗಳೊಂದಿಗ ಚರ್ಚಿಸಿ ಸರ್ಕಾರದಿಂದ ದೊರೆಯುವ ಎಲ್ಲಾ ಪರಿಹಾರವನ್ನು ಕೊಡಿಸಲು ಗಮನಹರಿಸಿದ್ದು ಸಾವನ್ನಪ್ಪಿದ್ದ ಮಹದೇವನಾಯಕ ಮತ್ತು ಪುತ್ರಿ ಲೀಲಾವತಿ ಅವರುಗಳಿಗೆ ಈಗ ತಲಾ 4.15ಲಕ್ಷ ಪರಿಹಾರದ ಚೆಕ್ ಕೊಡಿಸಿದ್ದು ಆ ನಂತರ 4.15 ಲಕ್ಷ ಮೊತ್ತದ ಚೆಕ್ ಕೊಡಿಸಿ ಇತರ ಅನುಕೂಲಗಳನ್ನು ಮಾಡಿಕೊಡುತ್ತೇನೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಪರಿಹಾರದ ಜತೆಗೆ ವೈಯುಕ್ತಿಕ ವಾಗಿಯೂ 2 ಲಕ್ಷ ಹಣ ಕೊಟ್ಟಿದ್ದು ಇದರೊಂದಿಗೆ ಕಾಂಗ್ರೆಸ್ ಪಕ್ಷದ ಪುರಸಭೆ ಸದಸ್ಯ ಶಿವುನಾಯಕ್ ಅವರು 25 ಸಾವಿರ ನೀಡಿದ್ದು ಆತ್ಮಹತ್ಯೆಗೆ ಪ್ರಯತ್ನಿಸಿ ಬದುಕುಳಿದಿರುವ ಇಬ್ಬರ ಹೆಚ್ಚಿನ ಚಿಕಿತ್ಸೆಗೆ ನಾನೇ 25 ಸಾವಿರ ಸಹಾಯ ಮಾಡಿದ್ದು ಮುಂದಿನ ಎಲ್ಲಾ ಜವಾಬ್ದಾರಿಗಳನ್ನು ವಹಿಸಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ ಶಾಸಕರು ಇದರಲ್ಲಿ ಯಾವುದೇ ರಾಜಕೀಯ ಬೆರೆಸಿಲ್ಲ ಎಂದು ನುಡಿದರು.
ಘಟನೆ ನಡೆದ ಕ್ಷಣದಿಂದ ಈವರೆಗೂ ನಾನು ಶಾಸಕನಾಗಿ ಜವಾಬ್ದಾರಿಯಿಂದ ವರ್ತಿಸಿದ್ದು ಇದಕ್ಕೆ ಸರ್ವರ ಸಹಕಾರವನ್ನು ಪಡೆದಿದ್ದೇನೆ ಮತ್ತು ಇದು ನನ್ನ ಕರ್ತವ್ಯವಾಗಿದ್ದು ಇಂತಹಾ ವಿಚಾರಗಳಲ್ಲಿ ಯೂ ರಾಜಕೀಯ ಮಾಡುವವರಿಗೆ ದೇವರು ಒಳ್ಳೆಯ ಬುದ್ದಿಯನ್ನು ಕೊಡಲೆಂದು ಹಾರೈಸಿದರು.