ಸಸಿ ನೆಟ್ಟು ಪರಿಸರ ದಿನ ಆಚರಣೆ
ಸಂಜೆವಾಣಿ ನ್ಯೂಸ್
ಮೈಸೂರು: ಜೂ.12:- ಮೈಸೂರಿನ ರೋಟರಿ ಕ್ಲಬ್ ಸಂಸ್ಥೆಗಳ ವಲಯ-8 ಮತ್ತು ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ 1000 ಸಸಿಗಳನ್ನೂ ನೆಡುವ ಕಾರ್ಯಕ್ರಮಕ್ಕೆ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರದಲ್ಲಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ಚಾಲನೆ ನೀಡಲಾಯಿತು.
ರೋಟರಿ ಇಂಟರ್ ನ್ಯಾಷನಲ್ 3181ರ ಜಿಲ್ಲೆಯ ಜಿಲ್ಲಾ ಗವರ್ನರ್ ರೋಟರಿಯನ್ ವಿಕ್ರಮ ದತ್ತಾ ಮಾತನಾಡಿ, ಅಂತರಾಷ್ಟ್ರೀಯ ಗುಣಮಟ್ಟದ ಶಿಕ್ಷಣವನ್ನೂ ಕೊಡಲು ಮೈಸೂರಿನಲ್ಲಿ ಪ್ರಾರಂಭವಾಗಿರುವ ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ಆವರಣದಲ್ಲಿ ರೋಟರಿ ಸಂಸ್ಥೆಗಳು, ಅರಣ್ಯ ಇಲಾಖೆಯ ಸಹಯೋಗದೊಂದಿಗೆ 1000 ಸಸಿಗಳನ್ನೂ ನೆಡುವ ಈ ವಿನೂತನ ಕಾರ್ಯಕ್ರಮ ಮಾಡುತ್ತಿರುವುದು ಶಿಕ್ಷಣದ ಜೊತೆಗೆ, ಪರಿಸರ ಸಂರಕ್ಷಣೆ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವೂ ಮೂಡಿಸುತ್ತಿರುವುದು ಉತ್ತಮ ಕೆಲಸವಾಗಿದೆ. ರೋಟರಿಯ ಏಳು ಪ್ರಮುಖ ಗುರಿಗಳಲ್ಲಿ ಪರಿಸರ ಮತ್ತು ವಿದ್ಯೆಯ ಬಗ್ಗೆ ಮಹತ್ವ ನೀಡಲಾಗಿದೆ ಎಂದರು.
ಐ.ಎಫ್. ಎಸ್. ಅಧಿಕಾರಿ ಮೈಸೂರು ವಿಭಾಗದ ಡಿಸಿಎಫ್ ಡಾ.ಕೆ.ಎನ್.ಬಸವರಾಜ ಮಾತನಾಡಿ ಪ್ರಕೃತಿಯ ಮಡಿಲಿನಲ್ಲಿರುವ ಚಾಮುಂಡಿಬೆಟ್ಟದ ಸುಂದರ ವಾತಾವರಣದ ಈ ಶಾಲೆಯಲ್ಲಿ ಉತ್ತಮವಾಗಿ ಇರುವ ಕಟ್ಟಡದ ಜೊತೆಗೆ ಸಸಿಗಳನ್ನೂ ನೆಡುವುದರ ಮೂಲಕ ಅವುಗಳನ್ನೂ ಬೆಳೆಸುತ್ತೀರುವುದು ಶ್ಲಾಘನೀಯ ವಿಚಾರವಾಗಿದೆ. ನಮ್ಮ ಅರಣ್ಯ ಇಲಾಖೆವತಿಯಿಂದ ಈ ವರ್ಷ 3ಲಕ್ಷದ 30ಸಾವಿರ ಸಸಿಗಳನ್ನೂ ರೈತರಿಗೆ ಮತ್ತು ಸಾರ್ವಜನಿಕರಿಗೆ ರಿಯಾಯತಿ ದರದಲ್ಲಿ ಒಂದು ಸಸಿಗೆ ರೂ.3 ರೂಪಾಯಿಯಿಂದ 6 ರೂಪಾಯಿವರೆಗೆ ಕೊಡಲಾಗುತ್ತಿದೆ. ಈ ವರ್ಷ ಅರಣ್ಯ ಇಲಾಖೆವತಿಯಿಂದಲೂ ಒಂದು ಲಕ್ಷ ಸಸಿಗಳನ್ನೂ ನೆಡಲಾಗುತ್ತೀದೆ ಎಂದರು.
ಮೈಸೂರು ವಿಶ್ವವಿದ್ಯಾನಿಲಯದ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಈ.ಸಿ.ನಿಂಗರಾಜ್ ಗೌಡ ಮಾತನಾಡಿ, ಪರಿಸರದ ಬಗ್ಗೆ ಜಾಗೃತಿ ಮತ್ತು ಪರಿಸರ ಸಂರಕ್ಷಣೆಯ ಇಂದಿನ ತುರ್ತು ಅಗತ್ಯವಾಗಿದೆ. ಶುಧ್ದವಾದ ಗಾಳಿ, ಜಾಗತಿಕ ಹವಾಮಾನ, ತಾಪಮಾನವನ್ನೂ ಸುಸ್ಥಿತಿಯಲ್ಲಿ ಇಡಲೂ ಸಸಿಗಳನ್ನೂ ನೆಡುವುದರ ಜೊತೆಗೆ ಅವೂಗಳನ್ನೂ ಏಳೆಂಟು ವರ್ಷಗಳ ಕಾಲ ಬೆಳೆಸುವುದರ ಕಡೆಗೆ ಎಲ್ಲರೂ ಗಮನಹರಿಸುವಂತೆ ಸಲಹೆ ನೀಡಿದರು.
ಸಿಲಿಕಾನ್ ಸಿಟಿ ಇಂಟರ್ ನ್ಯಾಷನಲ್ ಸ್ಕೂಲ್ ನ ಕಾರ್ಯದರ್ಶಿಯವರಾದ ಎಲ್.ರವಿ, ಸಹಾಯಕ ಗರ್ವನರ್ ರೋ. ಎಂ. ರಾಜೀವ್, ರೋ. ಕೇಶವಪ್ರಕಾಶ್, ವಲಯ ಸೇನಾನಿ ರೋ. ಎಂ.ಮೋಹನ್, ರೋ.ಕೆ.ಎನ್.ಸಂತೋಷ್, ಎನ್.ಕಿರಣ್, ಎಂ.ಎಸ್‍ಉಮಶಂಕರ್ ಆರಾಧ್ಯ, ರೋ.ಮುರಳೀಧರ್, ರೋ.ಗೋವರ್ಧನ್ ಯಾದವ್, ರೋ.ಪ್ರಭಾಕರ್, ರೋ. ದಿನೇಶ್ ಬಸವಪಟ್ಟಣ, ದಿಲೀಪ್ ಆರಾಧ್ಯ ಮತ್ತಿತರರು ಇದ್ದರು.