ವಿದ್ಯಾರ್ಥಿಗಳಿಗೆ ಕಾನೂನು ಅರಿವು-ನೆರವು
ಕೋಲಾರ,ಜೂ,೧೨:ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಮುಳಬಾಗಿಲು ನಗರ ಪೊಲೀಸ್ ಠಾಣೆಯ ಪಿ.ಎಸ್.ಐ. ಮಂಜುನಾಥ್ ಅವರು ನೇತ್ರತ್ವದಲ್ಲಿ ಸರ್ಕಾರ ಪ್ರಥಮ ದರ್ಜೆ ಕಾಲೇಜಿಗೆ ಭೇಟಿ ನೀಡಿ ವಿದ್ಯಾರ್ಥಿಗಳಿಗೆ ಕಾನೂನಿನ ಅರಿವು-ನೆರವು ಕಾರ್ಯಕ್ರಮವನ್ನು ಹಮ್ಮಿ ಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸಿಗುವ ಪೊಲೀಸ್ ಸೇವೆಗಳು, ಮಹಿಳೆಯರ ಹಾಗೂ ಬಾಲಕಿಯರ ಲೈಂಗಿಕ ಕಿರುಕುಳ ವಿರುದ್ದ ಪೋಕ್ಸೋ ಕಾನುನುಗಳ ಅರಿವು, ಸೈಬರ್ ಪ್ರಕರಣಗಳಲ್ಲಿನ ವಂಚನೆ, ಅಪರಾಧಗಳ ಕುರಿತು ಅರಿವು ಹಾಗೂ ಗಮನವನ್ನು ಬೇರೆಡೆ ಸೆಳೆದು ಮೋಸ ಇತ್ಯಾದಿಗಳ ಅಪರಾಧಗಳ ಬಗ್ಗೆ ವಿದ್ಯಾರ್ಥಿಗಳಿಗೆ ವಿವರವಾಗಿ ತಿಳಿಸಿ ಕೊಟ್ಟರು,
ಕಾಲೇಜಿನ ಉಪನ್ಯಾಸಕರು ವೇದಿಕೆಯಲ್ಲಿ ಉಪಸ್ಥಿತಿರಿದ್ದರು,