ಮಾನವ ವಿದ್ಯಾವಂತನಾದಂತೆಲ್ಲಾ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚುತ್ತಿದೆ- ಜಿ.ಪಂ.ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ
ಚಿಕ್ಕಬಳ್ಳಾಪುರ.ಜೂ೧೨:ಆಧುನಿಕ ಪಾಶ್ಚಿಮಾತ್ಯ ನಾಗರೀಕತೆಯಿಂದ ಅವಿಭಕ್ತ ಕುಟುಂಬಗಳು ಮಾಯವಾಗಿ ವಿಭಕ್ತ ಕುಟುಂಬಗಳು ಹೆಚ್ಚಾಗಿ, ಮಾನವ ವಿದ್ಯಾವಂತನಾದಂತೆಲ್ಲಾ ವೃದ್ದಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿದೆ. ವೃದ್ದಾಶ್ರಮ ಮತ್ತು ಅನಾಥಾಶ್ರಮಗಳ ಸಂಖ್ಯೆ ಬಾರತದಲ್ಲಿ ಹೆಚ್ಚಾಗುತ್ತಿರುವುದು ಕಳವಳಕಾರಿಯಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್‌ರವರ ತಂದೆ ಹಾಗೂ ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ಪಿ.ಎನ್.ಕೇಶವರೆಡ್ಡಿ ಆತಂಕ ವ್ಯೆಕ್ತ ಪಡಿಸಿದರು.
ಸೋಮವಾರ ತಮ್ಮ ೮೯ನೇ ಜನ್ಮದಿನಾಚರಣೆ ಪ್ರಯುಕ್ತ ತಾಲ್ಲೂಕಿನ ಸುಲ್ತಾನ ಪೇಟೆಯಲ್ಲಿರುವ ದ್ವಾರಕ ಮಾಯಿ ವೃದ್ದಾಶ್ರಮದಲ್ಲಿನ ವೃದ್ದರಿಗೆ ಹೋಳಿಗೆ ಭೋಜನ ವ್ಯೆವಸ್ಥೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಿಂದೆ ನಮ್ಮ ಧರ್ಮ ಮತ್ತು ಸಂಸ್ಕೃತಿಯನ್ನು ಭಾರತೀಯರಾದ ನಾವು ಮೈಗೂಡಿಸಿ ಕೊಂಡಿದ್ದಾಗ ಅಭಾಲ ವೃದ್ಧರಾದಿಯಾಗಿ ಯಾರು ಅನಾಥರಾಗದಂತೆ ದತ್ತು ಪಡೆದು ಅವರನ್ನು ತಮ್ಮ ಮನೆಯವರಂತೆ ಸಾಕಿ ಸಲಹುತ್ತಿದ್ದರು.ಆದರೆ ಇಂದು ನಮ್ಮ ಸಂಸ್ಕೃತಿ ಮರೆತು ಪಾಶ್ಚಿಮಾತ್ಯಸಂಸ್ಕೃತಿಯತ್ತ ಮುಖ ಮಾಡಿ ಹೆತ್ತ ತಂದೆ ತಾಯಿಯನ್ನು ವೃದ್ಧಾಶ್ರಮಗಳ ಪಾಲು ಮಾಡುತ್ತಿದ್ದಾರೆ. ಇಳಿ ವಯಸ್ಸಿನ ಹಿರಿಯ ನಾಗರಿಕರ ಪಾಲನೆ ಪೋಷಣೆ ಜೊತೆಗೆ ಅವರೊಂದಿಗೆ ಆದರಣಿಯ ಪ್ರೀತಿ ಮಮತೆ ಕರುಣೆ ಹಾಗೂ ಅಪ್ಪುಗೆ ಇಟ್ಟುಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಆಗಬೇಕು ಎಂದು ಯುವ ಜನತೆಗೆ ಕರೆ ನೀಡಿದರು.
ದೇಶದಲ್ಲಿ ಹೆಚ್ಚು ಹೆಚ್ಚಾಗಿ ಒಳ್ಳೆಯ ಶಾಲೆಗಳು ಮತ್ತು ಆಸ್ಪತ್ರೆಗಳು ನಿರ್ಮಾಣವಾಗಬೇಕು ವೃದ್ರಾಶ್ರಮಗಳು ಎಂದಿಗೂ ಆಗಬಾರದು ಎಲ್ಲಾ ಮಕ್ಕಳು ತಮ್ಮ ತಂದೆ ತಾಯಂದಿರು ಹಾಗೂ ಅಜ್ಜ ಅಜ್ಜಿಯರನ್ನು ತಾವೇ ಸ್ವತಹ ನೋಡಿಕೊಳ್ಳಬೇಕು ಎಂದು ಬುದ್ಧಿ ಮಾತನ್ನು ಹೇಳಿದರು
ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಚಿಕ್ಕಗರಿಗರೆಡ್ಡಿ ಮಾತನಾಡಿ, ಕೇಶವರೆಡ್ಡಿಗೆ ೮೯ ವಯಸ್ಸಾಗಿದ್ದರು ಯುವಕರ ತರಹ ಚಟುವಟಿಕೆಯಿಂದ ಇರ್ತಾರೆ ಅವರಿಗೆ ದೇವರು ಆಯುರಾರೋಗ್ಯ ಕೊಟ್ಟು ಬಾಳುವಂತೆ ಮಾಡಲಿ ಅವರಿಗೆ ರಾಜಕೀಯದಲ್ಲೂ ಇನ್ನಷ್ಟು ಮೇಲ್ಮಟ್ಟಕ್ಕೆ ಬೆಳೆಯುವ ಶಕ್ತಿಯನ್ನ ದೇವರು ನೀಡಲಿ ಎಂದು ಶುಭಕೋರಿದರು.
ಕೇಶವರೆಡ್ಡಿಯವರ ಅಪಾರ ಅಭಿಮಾನಿಗಳು ಇಂದು ವೃದ್ದಾಶ್ರಮದಲ್ಲಿರುವ ಎಲ್ಲ ವೃದ್ದರಿಗೂ ಹೋಳಿಗೆ ಊಟ ಹಾಕಿಸಿ ಅಲ್ಲಿಯೇ ಹುಟ್ಟು ಹಬ್ಬ ಆಚರಣೆ ಮಾಡಿದರು.ತಮ್ಮ ಮನೆ ದೇವರು ಚಿಕ್ಕಪೈಲಗುರ್ಕಿ ಚೆನ್ನಕೇಶವ ದೇವಾಲಯದಲ್ಲಿ ಮತ್ತು ನಂದಿಯ ಬೋಗನಂದೀಶ್ವರ ದೇವಾಲಯದಲ್ಲಿ ವಿಷೇಶ ಪೂಜೆ ಸಲ್ಲಿಸಿ ಶುಭಕೋರಿದರು.
ಈ ವೇಳೆ ಯುವ ಮುಖಂಡ ಗಿರೀಶ್ ಚಿಕ್ಕಗೆರಿಗರೆಡ್ಡಿ, ನಗರಸಭೆ ಮಾಜಿ ಅಧ್ಯಕ್ಷ ಆನಂದಬಾಬುರೆಡ್ಡಿ, ಮಾಜಿ ನಗರಸಭಾ ಸದಸ್ಯರಾದ ಕೇಶವ, ಮಹಾಕಾಳಿ ಬಾಬು,ನಗರಸಭಾ ಸದಸ್ಯ ಯತೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ,ಅನು ಆನಂದ್, ಮಧು ಚಂದ್ರ,ಗಡ್ಡಂ ನಾಗರಾಜ್, ಅನ್ನದಾನಿ ಸತೀಶ್,ನಂದಿ ರಮೇಶ್,ರಂಗಣ್ಣ, ಶ್ರೀನಿವಾಸ್, ಮತ್ತಿತರರು ಇದ್ದರು.