ಮೋದಿಗೆ ಹ್ಯಾಟ್ರಿಕ್ ಪ್ರಧಾನಿ ಪಟ್ಟ ಸಂಭ್ರಮಾಚರಣೆ
ಬೇಲೂರು.ಜೂ೧೨: ಭವ್ಯ ಭಾರತ ದೇಶಕ್ಕೆ ಸತತ ಮೂರನೇ ಭಾರಿ ಪ್ರಧಾನಿಯಾಗುವ ಮೂಲಕ ಹ್ಯಾಟ್ರಿಕ್ ಸಾಧನೆ ಮಾಡಿದ ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ಸ್ವೀಕರಿಸಿದ ಹಿನ್ನೆಲೆಯಲ್ಲಿ ಕಡೆಗರ್ಜೆಯ ಗ್ರಾಮಸ್ಥರು ಹಾಗೂ ಬಿಜೆಪಿ ತಾಲ್ಲೂಕು ಯುವ ಮೋರ್ಚದ ಉಪಾಧ್ಯಕ್ಷ ಕಡೆಗರ್ಜೆ ಜಗದೀಶ್ ನೇತೃತ್ವದಲ್ಲಿ ಜಯಘೋಷವನ್ನು ಹಾಕುವ ಮೂಲಕ ಸಂಭ್ರಮಾಚರಣೆ ನಡೆಸಿದರು.
ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ತಾಲ್ಲೂಕು ಬಿಜೆಪಿ ಯುವ ಮೋರ್ಚ ಉಪಾಧ್ಯಕ್ಷ ಕಡೆಗರ್ಜೆ ಜಗದೀಶ್, ಪ್ರಧಾನಿ ಮೋದಿ ಅವರ ಎದೆಗಾರಿಕೆಯನ್ನು ಇಡೀ ವಿಶ್ವವೇ ಮೆಚ್ಚಿಕೊಂಡಿದೆ. ಬಡವರು, ದೀನ-ದಲಿತರು ಸೇರಿದಂತೆ ಎಲ್ಲ ವರ್ಗಗಳ ಬಂಧುಗಳ ಕಲ್ಯಾಣಕ್ಕೆ ಹಗಲಿರುಳೆನ್ನದೇ ಶ್ರಮಿಸುತ್ತಿರುವ ಇಂಥ ಸಮರ್ಥ ನಾಯಕನ ಮತ್ತೊಮ್ಮೆ ಪ್ರಧಾನಿಯಾಗಿದ್ದು ನಿಜಕ್ಕೂ ಖುಷಿ ತಂದಿದೆ ಎಂದ ಅವರು ನೋಟು ಅಮಾನ್ಯೀಕರಣದಂತಹ ಕ್ರಾಂತಿಕಾರಕ ಕ್ರಮಗಳಿಂದ ದಿನನಿತ್ಯದ ವಸ್ತುಗಳ ಬೆಲೆ ಏರಿಕೆ ನಿಯಂತ್ರಣಗೊಂಡಿದೆ. ಬ್ಯಾಂಕುಗಳು, ವಿಮೆ, ಸರಕಾರದ ಸಹಾಯಧನ ಎಲ್ಲವೂ ಮನೆ ಬಾಗಿಲಿಗೆ ಬಂದಿವೆ. ಮೋದಿ ನಾಯಕತ್ವದ ಪರಿಣಾಮ ಭಾರತ ಹೇಳಿದಂತೆ ಇಡೀ ವಿಶ್ವ ಕೇಳುವಂತಾಗಿದೆ. ದೇಶದಲ್ಲಾಗಿರುವ ಸಾಧನೆಗಳು ಪ್ರತಿಪಕ್ಷ ಗಳ ನಾಯಕರ ನಿದ್ರೆಗೆಡಿಸಿವೆ. ಹೀಗಾಗಿಯೇ ವಿರೋಧಿಗಳೆಲ್ಲರೂ ಒಂದಾಗಿದ್ದರೂ ಮೂರನೇ ಭಾರಿ ಪ್ರಧಾನಿಯಾಗಿದ್ದಾರೆ ಎಂದು ತಿಳಿಸಿದರು.
ದೇಶದ ವ್ಯವಸ್ಥೆ ಬದಲಾಯಿಸುವುದೇ ಅಸಾಧ್ಯ ಅನ್ನುವಷ್ಟರ ಮಟ್ಟಿಗೆ ಕಾಂಗ್ರೆಸ್ ದೇಶದ ಸ್ಥಿತಿ ತಂದಿಟ್ಟಿತ್ತು. ಇಂಥ ಸಂದಿಗ್ಧ ಸಂದರ್ಭದಲ್ಲಿ ಮೋದಿ ಕೇವಲ ೧೦ ವರ್ಷಗಳಲ್ಲಿ ಒಟ್ಟಾರೆ ವ್ಯವಸ್ಥೆ ಬದಲಾಯಿಸುವ ಕಾರ್ಯ ಮಾಡಿದ್ದಾರೆ. ಇಂಥ ನಾಯಕನ ಅಗತ್ಯ ನಮ್ಮ ದೇಶಕ್ಕಿದ್ದು, ಭಾರತ ವಿಶ್ವಗುರುವಾಗಲು ಮತ್ತೊಮ್ಮೆ ಮೋದಿಗೆ ಅವಕಾಶ ನೀಡಿದ್ದು ಇಡೀ ವಿಶ್ವವೇ ಭಾರತದ ಬಗ್ಗೆ ತಿರುಗು ನೋಡುವಂತಾಗಿದೆ.ಮುಂದಿನ ದಿನದಂದು ಇನ್ನೂ ಹೆಚ್ಚಿನ ಕೆಲಸಗಳನ್ನು ಮೋದಿಯವರು ಮಾಡಲಿ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಮುಖಂಡರಾದ ಹೇಮರಾಜ್ ಬಿಜೆಪಿ ಮುಖಂಡರಾದ ಸುರೇಶ್ ಶಶಿ ದಿನೇಶ್ ಲೋಹಿತ್ ವಿಜಯರಾಜ್ ಗ್ರಾಮ್ ಪಂಚಾಯತ್ ಮಲ್ಲೇಶ್ ಗ್ರಾಮ ಪಂಚಾಯತ್ ಸದಸ್ಯರಾದ ಯಶೋದ ಮಂಜುನಾಥ್ ಮುಂತಾದವರು ಭಾಗವಹಿಸಿದ್ದರು