ಖಾಲಿ ಹುದ್ದೆ ಭರ್ತಿ,ಪ್ರತಿ ಕೆಜಿ ರೇಷ್ಮೆ ಗೂಡಿಗೆ 100 ರೂ ಬೆಂಬಲ ಬೆಲೆ ಘೋಷಣೆಗೆ ಒತ್ತಾಯ
ಮುಳಬಾಗಿಲು, ಜೂ-೧೨- ರೇಷ್ಮೆ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿ ಪ್ರತಿ ಕೆ.ಜಿಗೆ ೧೦೦ ಬೆಂಬಲ ಬೆಲೆ ಘೋಷಣೆ ಮಾಡಿ ಬರದಿಂದ ತತ್ತರಿಸಿರುವ ರೇಷ್ಮೆ ಬೆಳೆಗಾರರ ರಕ್ಷಣೆಗೆ ಸರ್ಕಾರ ನಿಲ್ಲಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಮುಖ್ಯ ಮಂತ್ರಿಗಳನ್ನು ಒತ್ತಾಯಿಸಿದರು.
ಯಲುವಳ್ಳಿ ಗ್ರಾಮದ ಪ್ರಗತಿಪರ ರೇಷ್ಮೆ ಬೆಳೆಗಾರರದ ಪ್ರಭಾಕರ ತೋಟದಲ್ಲಿ ಪತ್ರಿಕಾ ಹೇಳಿಕೆ ನೀಡಿ ಮಾತನಾಡಿದ ರವರು ಸರ್ಕಾರಕ್ಕೆ ರೈತರಿಂದಲೇ ನಿರ್ಲಕ್ಷೆಯಾಗಿದೆ. ಪ್ರತಿಯೊಂದು ಸಮಸ್ಯೆಗೂ ಬೀದಿಗೆ ಬಂದು ಹೋರಾಟ ಮಾಡುವ ಪರಿಸ್ಥಿತಿ ಇದೆ. ಒಂದು ಕಡೆ ಬರ ಮತ್ತೊಂದು ಕಡೆ ಪ್ರಕೃತಿ ವಿಕೋಪದಿಂದ ತತ್ತರಿಸಿರುವ ರೈತರಿಗೆ ವರದಾನ ಸ್ವಾಭಿಮಾನದ ಬದುಕು ನೀಡಿರುವಂತಹ ರೇಷ್ಮೆಗೆ ಬಾದಿಸುತ್ತಿರುವ ರೋಗಗಳು ನಿಯಂತ್ರಣಕ್ಕೆ ಬಾರದೆ ಅದನ್ನೇ ನಂಬಿಕೊಂಡಿರುವ ಲಕ್ಷಾಂತರ ರೈತ ಕುಟುಂಬಗಳು ಬೀದಿಗೆ ಬಂದಿದ್ದರೂ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುವಲ್ಲಿ ರೇಷ್ಮೆ ಸಚಿವರು ಸರ್ಕಾರ ವಿಫಲವಾಗಿದೆ ಎಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಅಸಮದಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ರೇಷ್ಮೆ ಇಲಾಖೆಯು ಸಿಬ್ಬಂದಿ ಕೊರತೆಯಿಂದ ಬಳಲುತ್ತಿದೆ. ವರ್ಷದಿಂದ ವರ್ಷಕ್ಕೆ ನೌಕರರ ಕೊರತೆ ಹೆಚ್ಚಾಗುತ್ತಲೇ ಇದ್ದು, ಮಂಜೂರಾದ ೪೨೯೯ ಹುದ್ದೆಗಳ ಪೈಕಿ ೧೩೦೦ ಮಾತ್ರ ಭರ್ತಿಯಾಗಿ ಎಲ್ಲಾ ಹುದ್ದೆಗಳು ಖಾಲಿ ಉಳಿದಿವೆ. ಇದರಿಂದ ಇಲಾಖೆಗಳಲ್ಲಿ ರೇಷ್ಮೆ ಬೆಳೆಗಾರರ ಯಾವುದೇ ಕೆಲಸವಾಗದೆ ತಿಂಗಳಾನುಗಟ್ಟಲೆ ಇಲಾಖೆಗೆ ಅಲೆದಾಡುವ ಪರಿಸ್ತಿತಿ ಇದೆ ಎಂದು ಸರ್ಕಾರಕ್ಕೆ ಮನವರಿಕೆ ಮಾಡಿದರು.
ತಾಲ್ಲೂಕು ಅಧ್ಯಕ್ಷ ಯಲುವಳ್ಳಿ ಪ್ರಭಾಕರ್ ಮಾತನಾಡಿ ಜಿಲ್ಲಾ ರೇಷ್ಮೆ ಕಛೇರಿ ತಾಲ್ಲೂಕು ಕಛೇರಿ ತಾಂತ್ರಿ ಸಿಬ್ಬಂದಿ, ತಾಂತ್ರಿಕ ಸೇವಾ ಕೇಂದ್ರದ ಸಿಬ್ಬಂದಿ ಸೇರಿದಂತೆ ಅನೇಕ ಹುದ್ದೆಗಳು ಖಾಲಿ ಇವೆ. ಪ್ರತಿ ವರ್ಷ ನಿವೃತ್ತ ವಾಗುವವರ ಸ್ಥಾನಕ್ಕೂ ನೇಮಕವಾಗುತ್ತಿಲ್ಲ. ಇದರಿಂದ ಇಲಾಖೆಯ ಯೋಜನೆ ತಲುಪಿಸುವುದು, ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸಲಹೆ ನಿಡುಲು ಕಷ್ಟವಾಗುತ್ತಿದೆ. ಮತ್ತೊಂದಡೆ ಇಲಾಖೆ ತಾಲ್ಲೂಕು ಕಛೇರಿ ಸೇರಿದಂತೆ ವಿವಿಧ ಕಛೆರಿಗಳ ನಿರ್ವಹಣೆಗೂ ಸಿಬ್ಬಂದಿ ಕೊರತೆ ಸವಾಲಾಗಿದೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಪ್ರ.ಕಾರ್ಯದರ್ಶಿ ಪಾರುಕ್‌ಪಾಷ, ಅಂಬ್ಲಿಕಲ್ ಮಂಜುನಾಥ, ಹೆಬ್ಬಣಿ ಆನಂದರೆಡ್ಡಿ, ರಾಜೇಶ್, ಧರ್ಮ, ನಾಗೇಶ್, ರಾಮಮೂರ್ತಿ, ಸುನಿಲ್‌ಕುಮಾರ್, ವಿಜಯ್‌ಪಾಲ್, ಬಂಗಾರಿ ಮಂಜು, ಭಾಸ್ಕರ್, ವೇಣು, ವಿಶ್ವ, ಜುಬೇರ್‌ಪಾಷ, ಸುಪ್ರಿಂಚಲ, ಶಿವಾರೆಡ್ಡಿ, ಜಿಲ್ಲಾಧ್ಯಕ್ಷ ಈಕಂಬಳ್ಳಿ ಮಂಜುನಾಥ ಹಾಗೂ ಇನ್ನು ಮುಂತಾದವರು ಇದ್ದರು.