ಸಮಾಜ ತಿದ್ದುವ ಸಾಹಿತ್ಯ ರಚನೆಯಾಗಬೇಕು
ಕೋಲಾರ ಜೂ ೧೨ ಬಡಜನರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಹಾಗೂ ಅವರ ಕಷ ಕಾರ್ಪಣ್ಯಗಳನ್ನು ಸಮಾಜದ ಗಮನಕ್ಕೆ ತರುವ ಪ್ರಾಮಾಣಿಕ ಪ್ರಯತ್ನ ಸಾಹಿತಿಗಳಿಗಳಿಂದ ಆಗಬೇಕು ಎಂದು ಕರ್ನಾಟಕ ರಾಜ್ಯ ಎಸ್ಸಿ /ಎಸ್ಟಿ ಸರ್ಕಾರಿ ನೌಕರರ ಸಮನ್ವಯ ಸಮಿತಿ ಜಿಲ್ಲಾದ್ಯಕ್ಷ ರಾಮಾಂಜನೇಯ ತಿಳಿಸಿದರು.
ನಗರದ ಎಸ್ಸೆನ್ಸ್ ಕೆಫೆಯಲ್ಲಿ ಮಂಗಳವಾರ ಸಮಿತಿಯ ವತಿಯಿಂದ ಏರ್ಪಡಿಸಿದ್ದ ಸಾಹಿತಿ ಡಾ.ಸಿದ್ದಲಿಂಗಯ್ಯ ಒಂದು ನೆನಪು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸ್ವತಃ ಜನಸಾಮಾನ್ಯರ ಕಷ್ಟಗಳನ್ನು ನೋಡಿ ಬೆಳೆದು ಅದರ ಅನುಭವ ವನ್ನು ಸಾಹಿತ್ಯ ರೂಪಕ್ಕೆ ನೀಡಿದ ಆದರ್ಶ ಪುರುಷರ ನೆನೆಪು ಶಾಶ್ವತಗೊಳಿಸಲು ಆಗಿಂದಾಗೆ ಕನ್ನಡ ಸಾಹಿತ್ಯವನ್ನು ಚಿಂತನ ಮಂತನಕ್ಕೆ ಒಳಪಡಿಸಬೇಕು ಎಂದರು.
ಪ್ರಶಸ್ತಿ ಸ್ವೀಕರಿಸಿದ ಬಾಲಕೀಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕರಾದ ಉದಯ್ ಕುಮಾರ್ ಮಾತನಾಡಿ ವಿದ್ಯಾರ್ಥಿ ದೆಸೆಯಿಂದಲೆ ತಮಗೆ ಆದ ಅನುಭವವನ್ನು ಸಾಹಿತ್ಯ ರೂಪಕ್ಕೆ ನೀಡಿದ ಆದರ್ಶ ವ್ಯಕ್ತಿತ್ವದ ಸಿದ್ದಲಿಂಗಯ್ಯರವರ ಸಾಹಿತ್ಯ ಶ್ರೇಷ ಮತ್ತು ಆದರ್ಶನೀಯ ಎಂದು ಬಣ್ಣಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ಗೌರವಾದ್ಯಕ್ಷ ಜಿ.ಶ್ರೀನಿವಾಸ ಮಾತನಾಡಿ ಅನೇಕ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ಆಶಾಗೋಪುರವಾಗಿದ್ದ ಸಿದ್ದಲಿಂಗಯ್ಯ ನವರ ಸಾಹಿತ್ಯ ಅವರ ನೋವಿನ ಕೂಗಿನಿಂದ ಮೂಡಿಬಂದದ್ದು,
ಇಂತಹ ಸಾಹಿತ್ಯವನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಿ ಜನಮಾನಸದಲ್ಲಿ ಉಳಿಯುವಂತೆ ಮಾಡುವ ಪ್ರಯತ್ನ ಪ್ರತಿಯೊಬ್ಬರಿಂದಲೂ ಆಗಬೇಕೆಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎನ್. ಮುಕುಂದ ಮಾತನಾಡಿ ಹಲವಾರು ವಷಗಳ ಹಿಂದೆ ಶೋಷಣೆ, ದಬ್ಬಾಳಿಕೆ ಹಾಗೂ ಜಾತಿ ತಾರತಮ್ಯವನ್ನು ಎಳೆಎಳೆಯಾಗಿ ಬಿಚ್ಚಿ ಕೊಟ್ಟ ಅದನ್ನು ಕಾವ್ಯದ ರೂಪಕ್ಕೆ ನೀಡಿ ಜನಸಾಮಾನ್ಯರ ಮತ್ತು ಸರ್ಕಾರದ ಗಮನ ಸೆಳೆಯುವ ಸಾಹಿತ್ಯ ರಚನೆ ಸಾಹಿತ್ಯ ಅಭಿಮಾನಿಗಳಿಂದ ಆಗಬೇಕು ಎಂದರು.
ಸಮಾರಂಭದಲ್ಲಿ ಸಮಿತಿಯ ಮುಖಂಡರುಗಳಾದ ವಿಜಯಲಕ್ಷ್ಮಿ ಪದ್ಮಾವತಿ ಪಿ.ಡಿ.ಒ. ನಾರಾಯಣಪ್ಪ ಕೃಷ್ಣಮೂರ್ತಿ ನಾರಾಯಣಸ್ವಾಮಿ ಶಂಕರಪ್ಪ ರಾಮಚಂದ್ರ ಮತ್ತಿತರು ಉಪಸ್ಥಿತರಿದ್ದರು.