ಗ್ರಾಮೀಣ ಪದವಿ ಕಾಲೇಜಿನಲ್ಲಿ ಕಾನೂನು ಅರಿವು ಕಾರ್ಯಕ್ರಮ
ಕೋಲಾರ,ಜೂ.೧೨- ಬೇತಮಂಗಲ ಗ್ರಾಮೀಣ ವಿದ್ಯಾ ಸಂಸ್ಥೆಯ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಬೇತಮಂಗಲ ಪೊಲೀಸ್ ಠಾಣೆಯ ಪಿಎಸ್‌ಐ ಬಾದಾಮಿ ಅವರಿಂದ ಕಾನೂನು ಅರಿವು ಮೂಡಿಸಲಾಯಿತು.
ಪಿಎಸ್‌ಐ ಗುರು ರಾಜ್ ಚಿಂತಕಲ್ ಅವರು ಮಾತನಾಡಿ, ೧೮ ವರ್ಷದ ಕೆಳಗಿನ ವಿದ್ಯಾರ್ಥಿಗಳು ಬಾಲ್ಯ ವಯಸ್ಸಿಗೆ ಒಳಪಡುತ್ತದೆ, ಯಾವುದೇ ನಿರ್ಧಾರ ತೆಗೆದುಕೊಂಡರು ಕಾನೂನು ಪ್ರಕಾರ ಅಪರಾಧವಾಗಿರುತ್ತದೆ.
ವಾಹನ ಚಲಾವಣೆ ಮಾಡುವುದು ಕಾನೂನು ಚೌಕಟ್ಟಿನಲ್ಲಿ ಅಪರಾಧವಾಗಿರುತ್ತದೆ, ಅಂತಹ ಮಕ್ಕಳ ಕಂಡು ಬಂದಲ್ಲಿ ಕಾನೂನು ಕ್ರಮ ಕೈಗೊಂಡು ಹಾಗೂ ಪೋಷಕರ ಮೇಲೆಯೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.
ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಅ.ಮು.ಲಕ್ಷ್ಮೀನಾರಾಯಣ್, ಕಾಲೇಜು ಪ್ರಾಂಶುಪಾಲ ಮಲ್ಲಿಕಾರ್ಜುನ, ಶ್ರೀಮತಿ ವಿಜೇಂದ್ರ, ಶಾಲಾ ಸಮಿತಿ ಅಧ್ಯಕ್ಷ ಆರೀಫ್ ಖಾನ್, ಮುಖ್ಯ ಶಿಕ್ಷಕಿ ಮಂಜುಳಾ, ಆಡಳಿತ ಮಂಡಳಿ ವಿಜೇಂದ್ರ ಸೇರಿದಂತೆ ಉಪನ್ಯಾಸಕರು, ಸಹ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.