ಅಂಬೇಡ್ಕರ ಭವನ ನಿರ್ಮಾಣ ಹೋರಾಟ: 24 ನೇ ದಿನಕ್ಕೆ ಕಾಲಿಟ್ಟ ಧರಣಿ ಸತ್ಯಾಗ್ರಹರಕ್ತದಲ್ಲಿ ಬರೆದ ಪತ್ರ ರಾಜ್ಯಪಾಲರಿಗೆ ರವಾನೆ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.12: ವಿಜಯಪುರ ನಗರದ ಮನಗೂಳಿ ಅಗಸಿ ಬಡಾವಣೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಾ. ಬಿ.ಆರ್.ಅಂಬೇಡ್ಕರ್ ಯುವಕ ಸಂಘದಿಂದ ಹಮ್ಮಿಕೊಂಡಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಬುಧವಾರ 24ನೇ ದಿನಕ್ಕೆ ಕಾಲಿಟ್ಟಿದೆ.
ಮುಖಂಡ ಪ್ರದೀಪ ಚಲವಾದಿ ಅವರು ರಕ್ತದಲ್ಲಿ ಬರೆದ ಪತ್ರವನ್ನು ಜಿಲ್ಲಾಧಿಕಾರಿಗಳು ಸ್ವೀಕರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿಗಳ ಕಛೇರಿ ಆವರಣದಲ್ಲಿನ ಅಂಚೆ ಕಚೇರಿಯಲ್ಲಿ ನೋಂದಾಯಿತ ಅಂಚೆ ಮೂಲಕ ರಾಜ್ಯಪಾಲರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ರಕ್ತದಲ್ಲಿ ಬರೆದ ಪತ್ರವನ್ನು ರವಾನೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಅಧ್ಯಕ್ಷ ಶ್ರೀಶೈಲ ಕಾಖಂಡಕಿ, ಕೀರ್ತಿ ಕಾಖಂಡಕಿ, ಬಸವಕುಮಾರ ಕಾಂಬಳೆ, ರವಿ ಕಾಖಂಡಕಿ, ಪ್ರದೀಪ ಚಲವಾದಿ, ಬಸವರಾಜ ಕುಬಕಡ್ಡಿ, ರೋಹಿತ ಮಲಕಣ್ಣವರ, ಕೃμÁ್ಣ ಚಲವಾದಿ, ಪ್ರತಾಪ ಚಿಕ್ಕಲಕ್ಕಿ, ಚೇತನ ಜವಳಿ, ಅಪ್ಪು ಕಾಖಂಡಕಿ, ಜಗದೀಶ ಕೂಡಗಿ, ರಾಮಣ್ಣ ಕಾಖಂಡಕಿ, ರಾಜು ಕಾಖಂಡಕಿ, ಮರೆಪ್ಪ ಖಜಾಪೂರ, ಶೇಖರ ಕೂಡಗಿ, ಬಾಬು ಶಿವಶರಣ, ಶಿವರಾಜ ಸಾಣಕರ, ಸುಭಾಸ ವಾಲಿಕಾರ, ಆಕಾಶ ಚಲವಾದಿ, ಮಂಜುನಾಥ ಶಿವಶರಣ, ಆಕಾಶ ಕಾಂಬಳೆ, ಅರುಣ ಬನಸೋಡೆ, ರಾಕೇಶ ಕಾಖಂಡಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.