ಬೆಗೂರು ಸರ್ಕಾರಿ ಆಸ್ಪತ್ರೆಗೆ ಉಚಿತ ಆಮ್ಲಜನಕ ಸಿಲಿಂಡರ್ ವಿತರಣೆ
ಸಂಜೆವಾಣಿ ವಾರ್ತೆ
ಗುಂಡ್ಲುಪೇಟೆ ಜೂ 12 :- ಪ್ರಲಕ್ಷ ಚಾರಿಟಬಲ್ ಟ್ರಸ್ಟ್(ರಿ.) ಮೈಸೂರು, ಪ್ರಲಕ್ಷ ಆಸ್ಪತ್ರೆ, ಮೈಸೂರು ಮತ್ತು ಬೆಂಗಳೂರು ಹಾಗೂ ಡಾ.ಮೋಹನ್. ಎನ್.ಎಸ್, ಸ್ನೇಹ ಬಳಗ ವತಿಯಿಂದ ಬೆಗೂರು ಸರ್ಕಾರಿ ಆಸ್ಪತ್ರೆಗೆ ಉಚಿತ ಆಮ್ಲಜನಕ ಗ್ಯಾಸ್ ಸಿಲಿಂಡರ್ ಅನ್ನು ಡಾ.ಮೋಹನ್ ಅವರು ನೀಡಿದರು.
ಚಾಮರಾಜನಗರ ಜಿಲ್ಲಾ ಡಾಕ್ಟರ್ ಮೋಹನ್ ಸ್ನೇಹ ಬಳಗ ಮತ್ತು ಪ್ರಲಕ್ಷ ಚಾರಿಟಬಲ್ ಟ್ರಸ್ಟ್ (ರಿ.) ಮೈಸೂರು ಸಂಯುಕ್ತಾಶ್ರಯದಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಹೋಬಳಿಯ ಸಮುದಾಯ ಆರೋಗ್ಯ ಕೇಂದ್ರ (ಸರ್ಕಾರಿ ಆಸ್ಪತ್ರೆ)ಗೆ ಭೇಟಿ ನೀಡಿ ಉಚಿತ ಆಮ್ಲಜನಕ ಗ್ಯಾಸ್ ಸಿಲಿಂಡರ್ ಅನ್ನು ಉಚಿತವಾಗಿ ವಿತರಣೆ ಮಾಡಿದರು.
ಇದೇ ವೇಳೆ ಮೈಸೂರು ಪ್ರಲಕ್ಷ ಆಸ್ಪತ್ರೆ ವೈದ್ಯರಾದ ಡಾ.ಮೋಹನ್ ಅವರು ಮಾತನಾಡಿ ಬೇಗೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ದಿನನಿತ್ಯ ಅಪಘಾತಗಳು ಸಂಭವಿಸುತ್ತಿರುವುದರಿಂದ ಸ್ಥಳೀಯರಾದ ಶ್ರೀ ರಾಜೀವ್ ಎಂಬ ಸ್ವಯಂ ಸೇವಕ ಅಂಬುಲೆನ್ಸ್ ಹೊಂದಿದ್ದು ಅದಕ್ಕೆ ಆಕ್ಸಿಜನ್ ಸೌಲಭ್ಯವಿರಲಿಲ್ಲ.
ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಸೌಲಭ್ಯ ಇಲ್ಲದಿರುವುದರ ಬಗ್ಗೆ ತಿಳಿದು ಕಾರಣ ಸುಮಾರು 60 ಸಾವಿರ ಬೆಲೆ ಬಾಳುವ ಆಕ್ಸಿಜನ್ ಸಿಲಿಂಡರ್ ಸಾರ್ವಜನಿಕರ ಉಪಯೋಗಕ್ಕಾಗಿ ಅಂಬುಲೆನ್ಸ್ ಮಾಲಿಕ ಶ್ರೀ ರಾಜೀವ್ ರವರಿಗೆ ಬೇಗೂರು ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ.ಶಿವ ಸ್ವಾಮಿ ಮುಖಾಂತರ ಕೊಡಲಾಗಿದೆ.
ತುರ್ತು ಅಪಘಾತ ಅಥವಾ ರೋಗಿಗಳನ್ನು ಬೇರೆಡೆಗೆ ಕರೆದೊಯ್ಯಲು ಆಕ್ಸಿಜನ್ ತುಂಬಾ ಮುಖ್ಯ ಹಾಗಾಗಿ ಆಂಬುಲೆನ್ಸ್ ನಲ್ಲಿ ಆಕ್ಸಿಜನ್ ಇರುವುದರಿಂದ ಇದು ಬಹಳಷ್ಟು ಜನರಿಗೆ ಉಪಯೋಗವಾಗಲಿದೆ ಸಾಧ್ಯವಾದಷ್ಟು ಪ್ರಾಣಹಾನಿ ತಪ್ಪಿಸಬಹುದು ಇದು ಪ್ರತಿಯೊಬ್ಬ ರೋಗಿಗಳಿಗೂ ಸದುಪಯೋಗವಾಗಲಿ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಡಾ.ಮೋಹನ್.ಎನ್.ಎಸ್ ಬಳಗದ ಅಧ್ಯಕ್ಷರು ಕೆ.ಆರ್.ಲೋಕೇಶ್, ಡಾ.ಶಿವಸ್ವಾಮಿ, (ಆಸ್ಪತ್ರೆ ಸಿಬ್ಬಂದಿವರ್ಗದವರು), ಬಸವರಾಜು, ಮಂಜುಕುಮಾರ್, ಜಗದೀಶ್, ರಾಜಶೇಖರಪ್ಪ, ಮಹೇಶ್, ಹರಿಚಂದ್ರ, ನಟರಾಜು ಇತರೆ ಸದಸ್ಯರುಗಳು ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.