ಕ್ರೀಡಾಪಟುಗಳು ದುಶ್ಚಟದಿಂದ ದೂರವಿರಿ:ಮಿಲಿಂದ ಸಾಗರ
ಜೇವರ್ಗಿ:ಜೂ.12:ಪ್ರತಿಯೊಬ್ಬ ಯುವಕರು ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸಬೇಕು. ನಮ್ಮ ತಾಲೂಕಿನ ಕ್ರೀಡಾಪಟುಗಳು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ ಬೇಕೆಂದು ಎಂದು ಬಯಸಿದರು ಹಾಗೂ ಶಾರೀರಿಕವಾಗಿ ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಮಹತ್ವ ದೊಡ್ಡದು. ಕ್ರೀಡಾಪಟುಗಳು ದುಶ್ಚಟದಿಂದ.ದೂರ ಇರಬೇಕೆಂದು ಬೆಳಕು ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಕಾರ್ಯದರ್ಶಿಗಳಾದ ಮಿಲಿಂದ ಸಾಗರ ಅಭಿಪ್ರಾಯಪಟ್ಟರು.
ಜೇವರ್ಗಿ ಪಟ್ಟಣದಲ್ಲಿ ತಾಲೂಕು ಕ್ರೀಡಾಂಗಣದಲ್ಲಿ ಜೈ ಭೀಮ್ ಹಾಗೂ ಆನಂದ್ ಗೆಳೆಯರು ಸೇರಿಕೊಂಡು ಕ್ರಿಕೆಟ್ ಟೂರ್ನಮೆಂಟ್ ಆಯೋಜಿಸಿದರು ಪ್ರಥಮ ಬಹುಮಾನ ಭಜರಂಗಿ ಬಾಯ್ಸ್ ನೆಲೋಗಿ ಮಡಿಲಿಗೆ ದ್ವಿತೀಯ ಬಹುಮಾನ ಜನತಾ ಕಾಲೋನಿ ಟೈಗರ್ ರವರು ವಿಜೇತರಾಗಿದ್ದರು.
ಈ ಸಂದರ್ಭದಲ್ಲಿ ಅಪ್ಸರ್ ಪಟೇಲ್. ಮಹೇಶ್ ಹೆಗಡೆ. ಶರಣು ಚೆನ್ನೂರು.ಬಸವರಾಜ. ಇಂಗಳಗಿ. ಬಸವರಾಜ್ ಮದ್ದರಕಿ. ಇತರರು ಇದ್ದರು.
ಕ್ರೀಡಾಪಟುಗಳಾದ ಯಲ್ಲಾಲಿಂಗ್. ವಿರೇಶ್. ಭಗವಂತರಾಯ. ವಿಶ್ವ. ಬಲಭೀಮ್. ರಮೇಶ್ ಪರಶುರಾಮ ಆನಂದ ವಿಶ್ವರಾಧ್ಯ.. ಹೀಗೆ ಹಲವುರು ಕ್ರೀಡಾಪಟುಗಳು ಭಾಗವಹಿಸಿದರು.