ಕೆ.ಇ.ಬಿ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಮಹಿಳೆ ಸಾವು
ಜೇವರ್ಗಿ :ಜೂ.12:ಕೆಇಬಿ ಅಧಿಕಾರಿಗಳ ನಿರ್ಲಕ್ಷದಿಂದ ಬೇಜವಾಬ್ದಾರಿಯಿಂದ ಬಳ್ಳೂಂಡಗಿ ಗ್ರಾಮದಲ್ಲಿ ತಳವಾರ ಸಮಾಜದ ಹೆಣ್ಣುಮಗಳು ರೇಣುಕಾ ತಳವಾರ್ ವಿದ್ಯುತ್ ತಂತಿಗೆ ತಗಲಿ ಸಾವಿಗೀಡಾಗಿದ್ದಾಳೆ. ಈ ಘಟನೆ ಮಧ್ಯಾಹ್ನ 1:30 ಗಂಟೆಗೆ ನಡೆದರು ಸಾಯಂಕಾಲ 5:00 ಆದರೂ ಕೂಡ, ಜೇವರ್ಗಿ ತಾಲೂಕಿನ ಕೆ.ಇ.ಬಿ ಅಧಿಕಾರಿಗಳಾದ ಎಇಇ, ಜೆಇ, ಬಳ್ಳೂಂಡಗಿ ವ್ಯಾಪ್ತಿಗೆ ಒಳಪಡುವ ಕೆಇಬಿ ಎಸ್ಟಿ, ಲೈನ್ ಮ್ಯಾನ್ ಯಾರು ಸ್ಥಳಕ್ಕೆ ಭೇಟಿ ನೀಡಿಲ್ಲ. ಜೊತೆಗೆ ಪೆÇಲೀಸ್ ಠಾಣೆಗೆ ಮಾಹಿತಿ ಕೊಡದೆ, ತಮ್ಮನ್ನು ತಾವು ಹೇಗೆ ರಕ್ಷಣೆ ಮಾಡಿಕೊಳ್ಳಬೇಕೆಂಬ ಸ್ವಯಂ ರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ವಿನ ವಿದ್ಯುತ್ ತಗಲಿ ಮೃತಪಟ್ಟ ಮಹಿಳಾ ಬಗ್ಗೆ ಎಚ್ಚೆತ್ತು ಕಾಳಜಿ ಇಲ್ಲ ಕೂಡಲೆ ಇವರನ್ನ ಅಮಾನತು ಮಾಡಬೇಕು ಮೃತ ಮಳ್ಳಿಗೆ ಸರ್ಕಾರ ಪರಿಹಾರ ಮತ್ತು ನೌಕರಿ ಕೊಡಬೇಕು ಎಂದು ತಳವಾರ್ ಸಮಾಜದ ಮುಖಂಡ ಬಸವರಾಜ್ ಬೂದಿಹಾಳ್ ಸರ್ಕರಕ್ಕೆ ಆಗ್ರಹಿಸಿದ್ದಾರೆ
ಈ ಒಂದು ದುರ್ಘಟನೆ ಡಾ. ಸರ್ದಾರ ರಾಯಪ್ಪ, ಅಶೋಕ ಕಂಕಿ, ಹಾಗೂ ಭೀಮರಾಯ ತಳವಾರ್ ಬೇಲೂರು ಇವರಿಗೆ ಗೊತ್ತಾದ ಮೇಲೆ ಸ್ಥಳಕ್ಕೆ ಹೋಗಿ ಘಟನೆ ಬಗ್ಗೆ ವಿಚಾರಿಸಿ, ಕೆಇಬಿ ಅಧಿಕಾರಿಗಳಿಗೆ ಮಾತಾಡಿದ ಮೇಲೆ ಬಂದು ತಮ್ಮ ರಕ್ಷಣೆ ಬಗ್ಗೆ ಮಾತಾಡಿದರೆ ಹೊರ್ತು ಘಟನೆಯಲ್ಲಿ ಸಾವಿಗೀಡಾದವಳ ಕುಟುಂಬಕ್ಕೆ ಮತ್ತು ಅವಳ ಮಕ್ಕಳಿಗೆ ನ್ಯಾಯ ನ್ಯಾಯ ಕೊಡಿಸುವ ಕೆಲಸ ಮಾಡಿಲ್ಲ ಇದನ್ನು ಗಂಭೀರವಾಗಿ ಪರಿಗಣಿಸಿ ಸರಕಾರಿ ನೌಕರಿ ಮತ್ತು ಪರಿಹಾರ ಕೊಡಬೇಕೆಂದು ಕೋಲಿ ಸಮಾಜದ ಮುಖಂಡ ಬಸವರಾಜ ಬೂದಿಹಾಳ ಹೇಳಿದರು ನಂತರ ಮಾತನಾಡಿದ ಅವರು ರಾಜಕೀಯ ಮಾಡಿ ಕೆಲವೊಬ್ಬರ ಪಿಎಗಳು, ಮುಖಂಡರುಗಳು ಹೋರಾಟಗಾರರ ಮೇಲೆ ಒತ್ತಡ ಹಾಕಿ ಮಧ್ಯದಲ್ಲಿ ಬಿಡುವಂತೆ ಒತ್ತಾಯಿಸಿ ಗ್ರಾಮಸ್ಥರಿಂದ ಒತ್ತಡ ಹಾಕಿದ್ದಾರೆ. ಆದರೆ ಇವರೆಲ್ಲ ಯಾರ ಒತ್ತಡಕ್ ಒಳಗಾಗದೆ ಕೆಇಬಿ ಅಧಿಕಾರಿಗಳ ಮೇಲೆ
ಎಫ್.ಐ.ಆರ್ ಮಾಡಿಸಿ ಪೆÇೀಸ್ಟ್ ಮಾಟರ್ಂ ಮಾಡಿದ್ದೇವೆ
ಆದರೂ ಕೆಇಬಿ ಅಧಿಕಾರಿಗಳು ಬಳುಂಡಿಗಿ ಗ್ರಾಮದ ಮುಖಂಡರನ್ನು ಮತ್ತು ಬೇರೆಯವರಿಂದ ಪ್ರಕರಣವನ್ನು ದಾರಿ ತಪ್ಪಿಸಿ ಕೆಲಸ ಮಾಡುತ್ತಿದ್ದಾರೆ ಸಮಾಜದ ವಿಶೇಷವಾಗಿ ಮಹಿಳೆಗೆ ಅನ್ಯಾಯ ಮಾಡುವ ಕೆಲಸ ಮಾಡಬೇಕಾಗಿದೆ ಆದ್ದರಿಂದ ಸಮಾಜದ ಬಂಧುಗಳು ಎಚ್ಚೆತ್ತುಕೊಂಡು ಮುರ್ತಾಳ ಅನಾಥ ಮಕ್ಕಳಿಗೆ ನ್ಯಾಯ ಕೊಡಿಸುವುದು ಪ್ರಜ್ಞಾವಂತರ ಕರ್ತವ್ಯವಾಗಿದೆ. ಏಕೆಂದರೆ ಈ ಮಕ್ಕಳ ತಂದೆ ತೀರಿಕೊಂಡು ಮೂರು ತಿಂಗಳು ಆಗಿದೆ. ಈಗ ತಾಯಿ ತೀರಿಕೊಂಡಿದ್ದಾಳೆ. ತಂದೆ ತಾಯಿ ಇಬ್ಬರು ತೀರಿಕೊಂಡಿರುವ ಈ ಅನಾಥ ಮಕ್ಕಳಿಗೆ ಯಾರು ಸಾಕುತ್ತಾರೆ ಎಂಬುದು ಅಲ್ಲಿ ನೆರೆದಿರುವ ಜನರು ಅಧಿಕಾರಿಗಳಿಗೆ ಕೇಳಿದರು ಕೂಡ ಇದರ ಬಗ್ಗೆ ಯಾವುದೇ ರೀತಿಯಲ್ಲಿ ಸಮಾಧಾನ ಹೇಳುವ ಪ್ರಯತ್ನ ಕೂಡ ಮಾಡಿಲ್ಲ. ಎಂದು ನೋವಿನಿಂದ ಸಮಾಜದ ಮುಖಂಡ ಬಸವರಾಜ್ ಬೂದಿಹಾಳ ಹೇಳಿದರು