ಭೂ ಮಾಫಿಯಾ ವಿರುದ್ಧ ಕೆಆರ್‍ಎಸ್ ಪಕ್ಷದಿಂದ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ
ಸಂಜೆವಾಣಿ ವಾರ್ತೆ,
ವಿಜಯಪುರ,ಜೂ.12: ಜಿಲ್ಲೆಯ ಇಂಡಿ ತಾಲೂಕಿನ ಹಂಜಗಿ ಗ್ರಾಮದ ಸರ್ವೇ ನಂಬರ್ 531/*/1ವಿಸ್ತೀರ್ಣ 03ಎಕರೆ 20ಗುಂಟೆ ಸರ್ಕಾರಿ ಭೂಮಿಯನ್ನು ಖೊಟ್ಟಿ ದಾಖಲೆ ಸೃಷ್ಟಿಸಿ ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಿರುವ ಸರ್ಕಾರಿ ಅಧಿಕಾರಿಯ ಮೇಲೆ ಎಫ್‍ಐಆರ್ ದಾಖಲಿಸಿ ಸರ್ಕಾರದ ಅಸ್ತಿಯನ್ನು ಮರಳಿ ಸರ್ಕಾರಕ್ಕೆ ಕೊಡಬೇಕು ಎಂದು ಆಗ್ರಹಿಸಿ ಇಂಡಿ ತಹಸೀಲ್ದಾರ್ ಕಚೇರಿಯ ಎದುರು ಕೆಆರ್‍ಎಸ್ ಪಕ್ಷವು ಧರಣಿ ಕೈಗೊಂಡಿದೆ.
ಇದೇ ಸಂದರ್ಭದಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಮಾತನಾಡಿ, ಜಿಲ್ಲೆಯಲ್ಲಿ ಭೂ ಮಾಫಿಯಾದ ದೊಡ್ಡ ಜಾಲವೇ ಸಕ್ರಿಯವಾಗಿದೆ. ಅದರ ನಿಯಂತ್ರಣಕ್ಕೆ ಇಲ್ಲಿಯವರೆಗೂ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡಿಲ್ಲ. ರಾಜಕೀಯ ಒತ್ತಡಕ್ಕೆ ಸರ್ಕಾರಗಳು ಒಳಗಾಗಿವೆ ಎಂದು ಕಂಡು ಬರುತ್ತದೆ ಎಂದು ತಿಳಿಸಿದರು.
ವಿಜಯಪುರ ಜಿಲ್ಲಾ ಉಸ್ತುವಾರಿಗಳು ಆಗಿರುವ ವಿಜಯಕುಮಾರ ಯುಬಿ, ಜಿಲ್ಲಾಧ್ಯಕ್ಷ ಅಶೋಕ ಜಾಧವ, ಗಣಪತಿ ರಾಠೋಡ, ನಬಿರಸೂಲ್ ಜಮಾದಾರ, ಚಂದ್ರಕಾಂತ ನಗರೆ, ಲಕ್ಷ್ಮಣ ಚಡಚಣ, ಮಲ್ಲಿಕಾರ್ಜುನ ಬಿರಾದಾರ, ಲಕ್ಷ್ಮಣ ಕಲಾಲ್, ಹಮಿದ ಇನಾಮದಾರ್, ಅಣ್ಣಾ ಪೂಜಾರಿ, ದುರ್ಗಪ್ಪ ಬೂದಿಹಾಳ, ಕಾಂತುಗೌಡ ಬಿರಾದಾರ, ಭೀಮಾಶಂಕರ ಕಾಂಬಳೆ, ದೇಸು ಚವ್ಹಾಣ, ಭರತ ಗೂರೂಡ, ಸುರೇಶ ನಿಂಬೋಣಿ ಇತರರು ಇದ್ದರು.