ನೀಟ್ ರದ್ಧತಿಗೆ ಆಗ್ರಹಿಸಿ ಕಾಂಗ್ರೆಸ್ ಪ್ರತಿಭಟನೆ
ಬೆಂಗಳೂರು, ಜೂ. ೧೧- ಕೇಂದ್ರ ಬಿಜೆಪಿ ಸರ್ಕಾರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯಲ್ಲಿ ನ್ಯಾಯ ಒದಗಿಸಿ ಕೊಡುವಲ್ಲಿ ವಿಫಲವಾಗಿ ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿ ಕೊಡಬೇಕು ಹಾಗೂ ಮತ್ತೆ ಅವಕಾಶ ಕಲ್ಪಿಸಿ ಕೊಡಬೇಕು, ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ಇಂದು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರಶ್ನೆ ಪತ್ರಿಕೆ ಬಯಲಾಗಿದೆ ಎಂದು ವಿದ್ಯಾರ್ಥಿಗಳೇ ದೇಶ ವ್ಯಾಪ್ತಿ ಹೋರಾಟ ನಡೆಸುತ್ತಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಮೌನಕ್ಕೆ ಶರಣಾಗಿದ್ದಾರೆ ಇದು ವಿದ್ಯಾರ್ಥಿಗಳಲ್ಲಿ ಅನುಮಾನಕ್ಕೆ ಕಾರಣವಾಗಿದೆ. ದೇಶದ ಶೇರು ಮಾರುಕಟ್ಟೆಯಲ್ಲಿ ಅಕ್ರಮವಾಗಿ ವ್ಯವಹಾರ ನಡೆಸಲು ಹಾಗೂ ಲಕ್ಷಾಂತರ ಕೋಟಿ ಹಣವನ್ನು ವಂಚಿಸಿರುವ ಪ್ರಕರಣದ ಬಗ್ಗೆ ಕೂಡಲೇ ಜಂಟಿ ಸಂಸದೀಯ ಸಮಿತಿಗೆ ವಹಿಸಬೇಕೆಂದು ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು,
ಕೇಂದ್ರ ಬಿಜೆಪಿ ಸರ್ಕಾರ ತನ್ನ ಅಸ್ತಿತ್ವವನ್ನು ಕಳೆದುಕೊಂಡರು ಷೇರು ಮಾರುಕಟ್ಟೆಯಲ್ಲಿ ಷೇರು ದಳ್ಳಾಳಿಗಳಂತೆ ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿ, ಗೃಹ ಸಚಿವರಾದ ಅಮಿತ್ ಶಾ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಷೇರು ಹಗರಣವನ್ನು ಉತ್ತೇಜಿಸಿ ಅವರೇ ಷೇರು ದಳ್ಳಾಳಿಗಳಂತೆ ಹೇಳಿಕೆ ನೀಡಿ ದೇಶದ ಜನರಿಗೆ ವಂಚಿಸಿರುವ ಹಿನ್ನೆಲೆಯಲ್ಲಿ ಈ ಪ್ರಕರಣದ ಸತ್ಯಾಂಶ ಹೊರಬರಲು ಜೆಪಿಸಿ ತನಿಖೆ ನಡೆಸಬೇಕೆಂದು ಈಗಾಗಲೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿರವರು ಆಗ್ರಹ ಪಡಿಸಿದ್ದಾರೆ,
ಈ ಹಿನ್ನೆಲೆಯಲ್ಲಿ ಕೂಡಲೇ ಪ್ರಧಾನಿ ನರೇಂದ್ರ ಮೋದಿ, ನಿರ್ಮಲ ಸೀತಾರಾಮನ್, ಗೃಹ ಸಚಿವರು ದೇಶದ ಜನರ ಕ್ಷಮೆ ಕೋರಿ ತನಿಖೆ ನಡೆಸಲು ಕೂಡಲೇ ಜೆಪಿಸಿಗೆ ವಹಿಸಬೇಕೆಂದು ಆಗ್ರಹಿಸಲಾಗುತ್ತಿದೆ,
ಲೋಕಸಭಾ ಚುನಾವಣೆ ಮುಗಿದ ನಂತರ ನರೇಂದ್ರ ಮೋದಿ ರವರು ನಡೆಸಿರುವ ಕುತಂತ್ರ ಈಗ ದೇಶದ ಜನರಿಗೆ ತಿಳಿದಿದೆ,
ದೇಶದ ಪ್ರಧಾನಮಂತ್ರಿಯಾಗಿ ದೇಶದ ಜನರನ್ನು ರಕ್ಷಿಸುವ ಬದಲು ಶೇರು ಮಾರುಕಟ್ಟೆಯಲ್ಲಿ ಅಕ್ರಮಕ್ಕೆ ಪ್ರೋತ್ಸಾಹ ನೀಡಿ ಅಕ್ರಮದಲ್ಲಿ ಖಾಸಗಿ ಕಂಪನಿ ಮಾಲೀಕರಿಗೆ ಸಹಾಯವಾಗುವಂತೆ ವಾಮ ಮಾರ್ಗದಲ್ಲಿ ಬೆಂಬಲಿಸಿರುವುದು ಈಗ ಬಹಿರಂಗವಾಗಿದೆ,
ಈ ಪ್ರಕರಣದಲ್ಲಿ ಅವರು ನೈತಿಕತೆಯನ್ನು ಹೊರಬೇಕು ಈ ಅಕ್ರಮ ಹಗರಣದಲ್ಲಿ ದೇಶದ ಜನರಿಗೆ ವಂಚನೆ ಆಗಿರುವುದರಿಂದ ಪ್ರತಿಭಟನೆ ನಡೆಸಲಾಯಿತು.
ಈ ಪ್ರತಿಭಟನೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ಮೈಸೂರ ಎಲೆಕ್ಟ್ರಿಕಲ್ ಇಂಡಸ್ಟ್ರೀಸ್ ನ ಅಧ್ಯಕ್ಷರಾದ ಎಸ್ ಮನೋಹರ್ ರವರು ಕಾಂಗ್ರೆಸ್ ಪಕ್ಷದ ಮುಖಂಡರುಗಳಾದ ಎ. ಆನಂದ್, ಪರಿಸರ ರಾಮಕೃಷ್ಣ, ಹೇಮರಾಜ್, ಪ್ರಕಾಶ್, ಚೇತನ್,ಉಮೇಶ್,ಆನಂದ್ ಕುಮಾರ್, ನವೀನ್, ಪುಟ್ಟರಾಜು, ಚಿನ್ನಿ ಪ್ರಕಾಶ್, ವಾಸು ಭಾಗವಹಿಸಿದ್ದರು.
ನೀಟ್ ಪರೀಕ್ಷೆಯಲ್ಲಿನ ಅಕ್ರಮಕ್ಕೆ ಕೇಂದ್ರ ಸರ್ಕಾರ ಕುಮ್ಮಕ್ಕು ನೀಡಿರುವ ಹಿನ್ನೆಲೆಯಲ್ಲಿ ಕೂಡಲೇ ನೀಟ್ ಪರೀಕ್ಷೆ ರದ್ದು ಗೊಳಿಸುವಂತೆ ಒತ್ತಾಯಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಎಸ್ ಮನೋಹರ್, ನೇತೃತ್ವದಲ್ಲಿ ಗಾಂಧಿ ಪ್ರತಿಮೆ ಮುಂದೆ ಪ್ರತಿಭಟನೆ ನಡೆಸಲಾಯಿತು. ಕಾಂಗ್ರೆಸ್ ಪಕ್ಷದ ಮುಖಂಡರಾದ ಎ. ಆನಂದ್, ಪರಿಸರ ರಾಮಕೃಷ್ಣ, ಹೇಮರಾಜ್, ಪ್ರಕಾಶ್, ಚೇತನ್,ಉಮೇಶ್,ಆನಂದ್ ಕುಮಾರ್, ನವೀನ್, ಪುಟ್ಟರಾಜು, ಚಿನ್ನಿ ಪ್ರಕಾಶ್, ವಾಸು ಭಾಗವಹಿಸಿದ್ದರು.