ನಾಗರಹಳ್ಳಿ ತಾಂಡಾ ಘಟನೆ- ಅಗತ್ಯ ಪರಿಹಾರ ಕ್ರಮಗಳಿಗೆ ಶಾಸಕ ಡಾ. ಅಜಯ್‌ ಸಿಂಗ್‌ ಅಧಿಕಾರಿಗಳಿಗೆ ಸೂಚನೆ
ಕಲಬುರಗಿ:ಜೂ.11:ಕಲುಷಿತ ನೀರು ಸೇವಿಸಿ ಆರು ಮಕ್ಕಳು ಅಸ್ವಸ್ಥರಾಗಿರುವ ಜೇವರ್ಗಿ ತಾಲೂಕಿನ ನಾಗರಹಳ್ಳಿ ತಾಂಡಾದಲ್ಲಿ ನಡೆದಿರುವ ಘಟನೆಗೆ ಸಂಬಂಧಿಸಿದಂತೆ ಶಾಸಕ ಡಾ. ಅಜಯ್‌ ಸಿಂಗ್‌ ತಕ್ಷಣ ಸ್ಪಂದಿಸಿ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದಾರೆ.
ಸದರಿ ವಿಷಯ ತಮ್ಮ ಗಮನಕ್ಕೆ ಬರುತ್ತಿದ್ದಂತೆಯೇ ತಾಲೂಕು ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಶಾಸಕರಾದ ಡಾ. ಅಜಯ್‌ ಸಿಂಗ್‌ ತಾಪಂ ಮುಖ್ಯಾಧಿಕಾರಿಗಳು. ತಹಶೀಲ್ದಾರರು ಸೇರಿದಂತೆ ಸಂಬಂಧಪಟ್ಟಂತಹ ಇಲಾಖೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಮಕ್ಕಳ ಸದರಿ ಬೆಳವಣಿಗೆಯ ಸಂಪೂರ್ಣ ಮಾಹಿತಿ ಪಡೆದು ಅಗತ್ಯ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
6 ಮಕ್ಕಳು ಊಟದ ನಂತರ ನೀರು ಕುಡಿದು ವಾಂತಿಭ್ದು ತೊಂದರೆ ಎದುರಿಸಿದ್ದಾರೆ. ಸದ್ಯ ಅವರೆಲ್ಲರೂ ಅಪಾಯದಿಂದ ಪಾರಾಗಿದ್ದು ಆರೋಗ್ಯವಾಗಿದ್ದಾರೆ. ಚಿಕಿತ್ಸೆಗೆ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸದರಿ ತಾಂಡಾದಲ್ಲಿನ ಕೊಳವೆ ಬಾವಿಯ ನೀರಿನ ಪರೀಕ್ಷೆ ಮಾಡಿ ತೊಂದರೆಗಳನ್ನು ನಿವಾರಣೆಗೆ ಶಾಸಕರಾದ ಡಾ. ಅಜಯ್‌ ಸಿಂಗ್‌ ಸೂಚನೆ ನೀಡಿದ್ದಾರೆ.