ಅಕ್ರಮವಾಗಿ ಮದ್ಯ ಮಾರಾಟ: ಓರ್ವನ ಬಂಧನ
ಕಲಬುರಗಿ,ಜೂ.11-ಇಲ್ಲಿನ ರಾಮನಗರದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್-ಅರ್ಬನ್ ಪೊಲೀಸ್ ಠಾಣೆಯ ಪಿಎಸ್‍ಐ ಅಬ್ದುಲ್ ಜಬ್ಬಾರ್, ಸಿಬ್ಬಂದಿಗಳಾದ ಅನೀಲ, ವಿಶಾಲ ಅವರು ದಾಳಿ ನಡೆಸಿ ರಾಮನಗರದ ನಾಗರಾಜ ಚೆನ್ನವೀರಪ್ಪ ಬೆಡಪಳ್ಳಿ ಎಂಬಾತನನ್ನು ಬಂಧಿಸಿ 1,440 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ. ಸಬ್-ಸರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶವ ಪತ್ತೆ
ನಗರದ ಬಿ.ಶ್ಯಾಮಸುಂದರ ಸರ್ಕಲ್ ಹತ್ತಿರದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ ಬಳಿ 50 ರಿಂದ 55 ವರ್ಷ ವಯಸ್ಸಿನ ಅಪರಿಚಿತ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿದೆ. ಈ ಸಂಬಂಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತನ ವಾರಸುದಾರರು ಯಾರಾದರು ಇದ್ದಲ್ಲಿ ಬ್ರಹ್ಮಪುರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.