ಎಸ್‍ಬಿಆರ್ ನೀಟ್-ಜೆಇಇ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ದೊಡ್ಡಪ್ಪಅಪ್ಪ ಸ್ಕಾಲರ್‍ಶಿಪ್ ರೂ.3.5 ಕೋಟಿಗೆ ಹೆಚ್ಚಳ
ಕಲಬುರಗಿ:ಜೂ.11:ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಎಸ್‍ಬಿಆರ್‍ಕಾಲೇಜಿನ ನೀಟ್ ಮತ್ತುಜೆಇಇರ್ಯಾಂಕ್ ವಿಜೇತ ವಿದ್ಯಾರ್ಥಿಗಳಿಗೆ ವಾರ್ಷಿಕ ನೀಡುತ್ತಿದ್ದ ರೂ.2.5 ಕೋಟಿ ಸ್ಕಾಲರ್‍ಶಿಪ್ ಮೊತ್ತವನ್ನು ರೂ.3.5 ಕೋಟಿಗೆ ಹೆಚ್ಚಳ ಮಾಡಲಾಗಿದೆಎಂದು ಸಂಘದಚೇರ್‍ಪರ್ಸನ್‍ಡಾ.ದಾಕ್ಷಾಯಿಣಿಅವ್ವಾಜಿ ತಿಳಿಸಿದರು.
ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದದಾಸೋಹ ಮನೆಯಲ್ಲಿಪ್ರಸಕ್ತ ಶೈಕ್ಷಣಿಕ ವರ್ಷದ ನೀಟ್, ಜೆಇಇ ಮತ್ತು ದ್ವಿತೀಯ ಪಿಯು ಫಲಿತಾಂಶದಲ್ಲಿರ್ಯಾಂಕ್ ಪಡೆದ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿಅವರು ಮಾತನಾಡಿದರು.ಇಂದುಕಲ್ಯಾಣಕರ್ನಾಟಕ ಶೈಕ್ಷಣಿಕ ಗುಚ್ಛ (ಎಜುಕೇಷನಲ್ ಹಬ್) ಆಗಿ ಪರಿವರ್ತನೆಗೊಂಡಿರುವುದರ ಹಿಂದೆಎಸ್‍ಬಿಆರ್ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ.ಅದರಲ್ಲೂ ಈ ಸಂಸ್ಥೆಯಲ್ಲಿಕಲಿತ ವಿದ್ಯಾರ್ಥಿಗಳ ಕಾರಣಕ್ಕಾಗಿಇಂದುಜಗತ್ತಿನಾದ್ಯಂತ ಸಂಸ್ಥೆಯ ಹೆಸರುಅಜರಾಮರಗೊಂಡಿದೆ.ಚಿ.ದೊಡ್ಡಪ್ಪಎಸ್.ಅಪ್ಪ ಹೆಸರಿನಲ್ಲಿ ಮೂರುವರೆಕೋಟಿ ಮೊತ್ತದ ಸ್ಕಾಲರ್‍ಶಿಪ್ ಸ್ಥಾಪಿಸಿ ವಾರ್ಷಿಕ 123 ವಿದ್ಯಾರ್ಥಿಗಳ ವಿದ್ಯಾಭ್ಯಾಸ ಮತ್ತುದಾಸೋಹಕ್ಕೆ ವ್ಯಯಿಸಲಾಗುತ್ತಿದೆ.ಈ ಪೈಕಿ 40 ವಿದ್ಯಾರ್ಥಿಗಳಿ ತಲಾ ರೂ.5 ಲಕ್ಷಖರ್ಚಾಗಲಿದೆಎಂದುವಿವರಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಲಾಭ ಲಭಿಸುವಂತಾಗಬೇಕುಎನ್ನುವ ಸದಾಶಯದೊಂದಿಗೆ60 ವರ್ಷಗಳ ಹಿಂದೆಎಸ್‍ಬಿಆರ್ ಸ್ಥಾಪಿಸಲಾಗಿದ್ದು, ಸಾವಿರಾರು ಸಾಧಕ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ಇಂಜಿನಿಯರಿಂಗ್ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆತೋರುತ್ತಿದ್ದಾರೆಎಂದರು.
ಶರಣಬಸವೇಶ್ವರ ವಿದ್ಯಾವರ್ದಕ ಸಂಘದ ಬೆಳವಣಿಗೆಯಲ್ಲಿ ವಿದ್ಯಾರ್ಥಿಗಳ ಪೋಷಕರ ಪಾತ್ರಅತ್ಯಂತ ಮಹತ್ವದ್ದಾಗಿದೆಎಂದುಕೃತಜ್ಞತೆಯಿಂದ ಸ್ಮರಿಸಿದ ಅವ್ವಾಜಿ, ಈ ನಿಟ್ಟಿನಲ್ಲಿ ದಶಕಗಳಿಂದ ಪೋಷಕರ ನಂಬಿಕೆ ಮತ್ತು ವಿಶ್ವಾಸ ಉಳಿಸಿಕೊಂಡು ಬರುವ ಬದ್ಧತೆಯನ್ನು ಸಂಸ್ಥೆ ಪ್ರದರ್ಶಿಸುತ್ತಾ ಬಂದಿದೆಎಂದು ನುಡಿದರು.
ಇದಕ್ಕೂ ಮುಂಚೆ ಸಂಘದ ಕಾರ್ಯದರ್ಶಿ ಬಸವರಾಜದೇಶಮುಖಅವರು ಮಾತನಾಡಿ, ನೀಟ್ ಪರೀಕ್ಷೆಯ 720 ಅಂಕಗಳ ಪೈಕಿ 705 ಅಂಕಗಳೊಂದಿಗೆ ಪ್ರಥಮರ್ಯಾಂಕ್ ಪಡೆದ ವಿದ್ಯಾರ್ಥಿ ವಿನಯಕುಮಾರ್‍ಸಂಗನಬಸಪ್ಪಕಸಬೇಗೌಡಅವರಿಗೆ ಸಂಸ್ಥೆಯಿಂದ ರೂ.1 ಲಕ್ಷ ಹಾಗೂ 700 ಅಂಕಗಳೊಂದಿಗೆ ದ್ವಿತೀಯರ್ಯಾಂಕ್ ಪಡೆದಪಂಚಾಕ್ಷರಿರಾಜಶೇಖರ ಲೋಣಿಮಠಅವರಿಗೆ ಬಹುಮಾನವಾಗಿ ರೂ.51 ಸಾವಿರ ನೀಡುತ್ತಿರುವುದಾಗಿ ತಿಳಿಸಿದರು.
ಇದೇ ವೇಳೆ, ನೀಟ್ ಮತ್ತುಜೆಇಇಟಾಪರ್ ವಿದ್ಯಾರ್ಥಿಗಳಾದ ವಿನಯಕುಮಾರ್, ಪಂಚಾಕ್ಷರಿ, ಶರಣರಾಜ್, ಕು.ಬನಶಂಕರಿ ಹಾಗೂ ಅವರ ಪೋಷಕರನ್ನು ಸಂಸ್ಥಾನದಎಂಟನೇ ಪೀಠಾಧಿಪತಿಡಾ.ಶರಣಬಸವಪ್ಪಅಪ್ಪ ಹಾಗೂ ಡಾ.ದಾಕ್ಷಾಯಿಣಿಅವ್ವಾಜಿ ಸನ್ಮಾನಿಸಿದರು.ಏತನ್ಮಧ್ಯೆ, ವೈದ್ಯರಾದ ಸಂಸ್ಥೆಯಡಾ.ಅಲ್ಲಮಪ್ರಭುದೇಶಮುಖಅವರನ್ನುಡಾ.ಶರಣಬಸವಪ್ಪಅಪ್ಪ ಹಾಗೂ ದಾಕ್ಷಾಯಿಣಿಅವ್ವಾಜಿಆತ್ಮೀಯವಾಗಿ ಸನ್ಮಾನಿಸಿದರು.
ಪ್ರತಿಷ್ಠಿತ ಸಂಸ್ಥೆಗಳಿಗೆ ಪ್ರವೇಶ
ಎಸ್.ಬಿ.ಆರ್‍ಕಾಲೇಜಿನ 13 ವಿದ್ಯಾರ್ಥಿಗಳು ಪ್ರಸಕ್ತ ಸಾಲಿನ ಜೆಇಇ ಮೇನ್ಸ್ ಪರೀಕ್ಷೆಯಲ್ಲಿಅರ್ಹತೆ ಪಡೆದುದೇಶದ ಪ್ರತಿಷ್ಠಿತಐಐಟ ಕಾಲೇಜುಗಳಲ್ಲಿ ಪ್ರವೇಶ ಪಡೆಯಲಿದ್ದಾರೆಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದಚೇರ್‍ಪರ್ಸನ್‍ಡಾ.ದಾಕ್ಷಾಯಿಣಿಎಸ್.ಅಪ್ಪ ಸಂತಸ ವ್ಯಕ್ತಪಡಿಸಿದರು.
ಇದರಜೊತೆಗೆ, 500ಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ವೈದ್ಯಕೀಯ ವಿಭಾಗಕ್ಕೆ ಪ್ರವೇಶ ಪಡೆಯುತ್ತಿದ್ದು, ಜೆಇಇ ಮೇನ್ಸ್ ಪರೀಕ್ಷೆಯಲ್ಲಿಅರ್ಹತೆ ಪಡೆದ 163 ವಿದ್ಯಾರ್ಥಿಗಳು ಎನ್.ಐ.ಟಿ ಕಾಲೇಜುಗಳಲ್ಲಿ ಪ್ರವೇಶ ಪಡೆಯುತ್ತಿದ್ದಾರೆಎಂದು ಖುಷಿ ಹಂಚಿಕೊಂಡರು.