ಮಳೆ ಗಾಳಿಗೆ ಮನೆ ಮೇಲೆ ಮುರಿದು ಬಿದ್ದ ಮರದ ಟೊಂಗೆಗಳು
ಕಲಬುರಗಿ,ಜೂ.11-ಮಳೆ, ಗಾಳಿಗೆ ನಗರದ ಎಂ.ಎಸ್.ಕೆ.ಮಿಲ್ ಜಿಡಿಎ ಲೇಔಟ್ 4ನೇ ಬ್ಲಾಕ್‍ನ ಕರ್ನಾಟಕ ಸರ್ಕಾರಿ ಶಾಲೆ ಹಿಂದುಗಡೆ ಮರದ ಟೊಂಗೆಗಳು ಮುರಿದು ಮನೆಯ ಮೇಲೆ ಬಿದ್ದಿವೆ.
ಬೃಹತ್ತಾದ ಮರದ ಟೊಂಗೆಗಳು ಮುರಿದು ಮನೆಯ ಮೇಲೆ ಬಿದ್ದಿರುವುದರಿಂದ ಈ ಮಾರ್ಗದಲ್ಲಿ ಸಂಚರಿಸುವ ಜನರು ಮತ್ತು ಮನೆಯವರು ತೊಂದರೆ ಅನುಭವಿಸುವಂತಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಮುರಿದು ಬಿದ್ದ ಮರದ ಟೊಂಗೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಬಡಾವಣೆಯ ನಿವಾಸಿ ಭೀಮಪ್ಪ ಪೂಜಾರಿ ಅವರು ಒತ್ತಾಯಿಸಿದ್ದಾರೆ.