ಮೋದಿ ಮತ್ತೊಮ್ಮೆ ಪ್ರಧಾನಿಯಾಗಿ ಪ್ರಮಾಣ ವಚನ: ಹರಕೆ ತೀರಿಸಿದ ಅಭಿಮಾನಿಗಳು
ವಿಜಯಪುರ,ಜೂ.11: ಬಸವನ ಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿ ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಕ್ಕೆ ಬಿಜೆಪಿ ಕಾರ್ಯಕರ್ತರು, ನರೇಂದ್ರ ಮೋದಿಯವರ ಅಭಿಮಾನಿಗಳು ಪರಸ್ಪರ ಸಿಹಿ ಹಂಚಿ ಜಯ ಘೋಷ ಹಾಕುವುದರೊಂದಿಗೆ ಸಂಭ್ರಮಿಸಿದರು.
ಲೋಕಸಭಾ ಚುನಾವಣೆ 2024ರ ಫಲಿತಾಂಶ ಏರುಪೇರು ನಡೆಯುತ್ತಿರುವಾಗ ಹಳೆಯ ಬಿ.ಜೆ.ಪಿ ಕಾರ್ಯಕರ್ತರು ಪಟ್ಟಣದ ರಾಮೇಶ್ವರ ದೇವರಿಗೆ ಹಾಗೂ ಮಾರುತಿ ದೇವರಿಗೆ ಮೊರೆ ಹೋದರು. ಭಕ್ತಿಯಿಂದ ಸಂಕಲ್ಪ ಮಾಡಿಕೊಂಡರು. ಮತ್ತೊಮ್ಮೆ ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಬೇಕೆಂದು ಭಗವಂತನಲ್ಲಿ ಹರಿಕೆ ಹೊತ್ತಿದ್ದರು. ಆದ್ದರಿಂದ ಸಂಕಲ್ಪ ಫಲಿಸಿದ್ದರಿಂದ ಭಾನುವಾರ ನರೇಂದ್ರ ಮೋದಿ ಅವರು ದೇಶದ 3ನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಮಾಡಿದ ಬಳಿಕ ಕಾರ್ಯಕರ್ತರು ಅಭಿಮಾನಿಗಳು ಹರಿಕೆ ಹೊತ್ತ ಲಕ್ಷ್ಮಣ ಹಡಪದ ಅವರು ಮಾರುತಿ ದೇವಸ್ಥಾನದಿಂದ ರಾಮೇಶ್ವರ ದೇವಾಲಯ ವರೆಗೆ ದೀಡ ನಮಸ್ಕಾರ ಹಾಕಿ ಅಪಾರ ಅಭಿಮಾನಿಗಳ ಸಮ್ಮುಖದಲ್ಲಿ ಹರಿಕೆ ತೀರಿಸಿದರು. ನಂತರ ಲಕ್ಷ್ಮಣ ಹಡಪದವರಿಗೆ ಗೌರವಿಸಿದರು.
ಈ ಸಂದರ್ಭದಲ್ಲಿ ರೇವಣಸಿದ್ದ ಮಣೂರ, ಶಿವಾಜಿ ಮೋರೆ, ಹನಮಂತ ಬದ್ನೂರ, ಮಾಳು ನಾಗರಾಳ, ಸಿದ್ರಾಯ ಕವಟೇಕರ, ಸುಭಾಸ ಲೇಸಪ್ಪಗೋಳ, ಪುಟ್ಟು ತೇಲಿ, ಅಡಿವಯ್ಯ ವಿಭೂತಿ, ಶರಣಯ್ಯ ಗಿಡ್ಡಿ, ಪ್ರವೀಣ ಹಡಪದ, ಉಮೇಶ ನಾವಿ, ಗಡ್ಡೆಪ್ಪ ಎಲೇರಿ, ಮಾಂತು ಅಗಸರ, ಪುಟ್ಟು ಕೆಂಗಣಗುತ್ತಿ, ವೃಷಭ ಲೇಸಪ್ಪಗೋಳ, ಜಗದೀಶ ಅರುಟಗಿ, ಬಸವರಾಜ ಅಲಗೊಂಡ, ಮಲ್ಲು ನಾಟಿಕಾರ ಇನ್ನೂ ಅಪಾರ ಅಭಿಮಾನಿಗಳು ಉಪಸ್ಥಿತರಿದ್ದರು.