ಆತ್ಮೀಯರಿಂದ ಸನ್ಮಾನಿತರಾಗುತ್ತಿರುವುದು ಸಂತಸ
ಸೈದಾಪುರ;ಜೂ.11:ಪ್ರೌಢ ಶಾಲೆಯಲ್ಲಿ ಕಲಿತ ಆತ್ಮೀಯ ಗೆಳೆಯರಿಂದ ಸನ್ಮಾನಿತನಾಗುತ್ತಿರುವುದು ನನಗೆ ಅತಿ ಸಂತಸವನ್ನುಂಟು ಮಾಡಿದೆ ಎಂದು ಕಲಬುರಗಿ ಚಾಂದ ಬಿಬಿ ಬಿ.ಈಡಿ ಕಾಲೇಜಿನ ಪ್ರಾಧ್ಯಾಪಕ ಡಾ.ಶರಬಯ್ಯ ಸ್ವಾಮಿ ಅಭಿಪ್ರಾಯಪಟ್ಟರು.
ಪಟ್ಟಣದ ಜಿಆರ್‍ಬಿ ಪಾರ್ಕನಲ್ಲಿ ಇತ್ತಿಚಿಗೆ ಅವರಿಗೆ ಧಾರವಾಡ ವಿಶ್ವವಿದ್ಯಾಲಯದಿಂದ ಪಿಎಚ್‍ಡಿ ಪದವಿ ನೀಡಲಾದ ಅಂಗವಾಗಿ ತಮ್ಮ ಗೆಳೆಯರ ಬಳಗದಿಂದ ಸನ್ಮಾನಿತರಾಗಿ ಮಾತನಾಡಿರು. ಸೈದಾಪುರ ಪಟ್ಟಣ ಶಿಕ್ಷಣ ಸೇರಿದಂತೆ ಸಂಸ್ಕøತಿಕ ಉತ್ತಮ ತಾಣವಾಗಿದೆ. ಇಲ್ಲಿನ ಸಾಕಷ್ಟು ಜನರು ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಅದರಲ್ಲಿ ನಾನು ಭಾಗಿಯಾಗಿ ನಿಮ್ಮಿಂದ ಸನ್ಮಾನಿತರಾಗಿರುವುದು ನನ್ನ ಜವಬ್ದಾರಿ ಹೆಚಾÐಗುವಂತೆ ಮಾಡಿದೆ. ಸದಾ ಗೆಳೆಯರ ಪ್ರೀತಿ ಸಹಕಾರ ಇನ್ನೂ ಹೆಚ್ಚಿನದಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ 1996ರ ವಿದ್ಯಾ ವರ್ಧಕ ಪ್ರೌಢ ಶಾಲೆಯ ಗೆಳೆಯರು ಹಾಗೂ ಅವರ ಕುಟಂಬ ವರ್ಗದವರು ಸೇರಿದಂತೆ ಇತರರಿದ್ದರು.