ಮೂರನೇ ಬಾರಿ ಪ್ರಧಾನಿಯಾಗಿ ಮೋದಿ ಪದಗ್ರಹಣ ಬಿಜೆಪಿಯಿಂದ ವಿಜಯೋತ್ಸವ
ಬೀದರ್:ಜೂ.11: ನರೇಂದ್ರ ಮೋದಿಯವರು ದೇಶದ ಪ್ರಧಾನಮಂತ್ರಿಯಾಗಿ ಮೂರನೇ ಬಾರಿಗೆ ಅಧಿಕಾರ ಸ್ವೀಕರಿಸಿದ ಹಿನ್ನೆಲೆಯಲ್ಲಿ ಭಾರತೀಯ ಜನತಾ ಪಕ್ಷವು ಬೀದರ್ನಲ್ಲಿ ವಿಜಯೋತ್ಸವ ಆಚರಿಸಿತ್ತು.
ನಗರದ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಪಕ್ಷದ ಕಾರ್ಯಕರ್ತರು ಪರಸ್ಪರ ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಶಕುಂತಲಾ ಬೆಲ್ದಾಳೆ, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೀರಪ್ಪ ಔರದೆ , ನಗರ ಮಂಡಲ ಅಧ್ಯಕ್ಷ ಶಶಿಧರ ಹೊಸಳ್ಳಿ , ಪ್ರಮುಖರಾದ ಗುರುನಾಥ ಜಾಂತಿಕರ, ವೀರೇಶ ಸ್ವಾಮಿ, ಸುಭಾಷ ಮಡಿವಾಳ, ನಿತಿನ್ ನವಲ್ಕೆಲೆ, ರಾಜಕುಮಾರ ನೆಮತಾಬಾದ, ಸಂದೀಪ ಪಾಟೀಲ, ರೋಷನ್ ವರ್ಮಾ, ಗಣೇಶ ಭೋಸಲೆ, ಸಂಗಮೇಶ ಹುಮ್ನಾಬಾದೆ, ಬಸವ ಮುಲಾಗೆ ಸೇರಿದಂತೆ ಪಕ್ಷದ ಪ್ರಮುಖರು ಕಾರ್ಯಕರ್ತರು ಸಾರ್ವಜನಿಕರು ಉಪಸ್ಥಿತರಿದ್ದರು.