ಶ್ರದ್ಧೆಯಿಂದ ಕಾರ್ಯ ನಿರ್ವಹಿಸುವವರಿಗೆ ಸದಾ ಸಾಮಾಜಿಕ ಮನ್ನಣೆ : ಬಿ. ಜಿ. ಶೆಟಕಾರ್
ಬೀದರ:ಜೂ.11:ಸರ್ಕಾರಿ ಸೇವೆ ಇರಲಿ ಅಥವಾ ಖಾಸಗಿ ಸೇವೆರಲಿ ವ್ಯಕ್ತಿಗಳು ಪ್ರಾಮುಖ್ಯವಾಗಿ ಶ್ರದ್ಧಾ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಅವರಿಗೆ ಸಮಾಜವು ಯಾವಾಗಲೂ ಮನ್ನಣೆ ನೀಡುತ್ತದೆ ಎಂದು ಕರ್ನಾಟಕ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಬಿ. ಜಿ. ಶೆಟಕಾರ್ ರವರು ಅಭಿಪ್ರಾಯ ಪಟ್ಟರು.
ನಗರದ ಶಿವಾ ಇಂಟನ್ರ್ಯಾಷನಲ ನಲ್ಲಿ ಏರ್ಪಡಿಸಿದ ಕರ್ನಾಟಕ ಕೈಗಾರಿಕಾ ಔದ್ಯೋಗಿಕ ತರಬೇತಿ ಸಂಸ್ಥೆಯ ನಿವೃತ್ತ ಅಧಿಕಾರಿ ಅಶೋಕ ಕೋಡ್ಲಿಯವರ ಅಭಿನಂದನಾ ಸಮಾರಂಭ ವನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದರು. ವಯೋನಿವೃತ್ತಿ ಯಾದ ಕೊಡ್ಲಿಯವರಿಗೆ ನಮ್ಮ ಸಂಸ್ಥೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸಲು ಅವಕಾಶ ಮಾಡಿಕೊಡಲಾಗುವುದು ಎಂದು ಘೋಷಿಸಿದರು.
ಕೆಆರಈ ಸಂಸ್ಥೆಯ ಕಾರ್ಯದರ್ಶಿ ಸಿದ್ರಾಮ ಪಾರಾ, ಸಹ ಕಾರ್ಯದರ್ಶಿ ಸತೀಶ್ ಪಾಟೀಲ, ಮಹೇಶ ಕುಮಾರ ಭದಭದೆಯವರು ಅತಿಥಿಗಳಾಗಿದ್ದರು. ಪರಿಸರ ಪ್ರೇಮಿ ವೀರಭದ್ರಪ್ಪ ಉಪ್ಪಿನ ರವರು ಮಾತನಾಡಿ, ಮೃಗಶೀರ ಮಳೆ ನಕ್ಷತ್ರದ ತಕ್ಷಣವೇ ಮಾನ್ಸೂನ್ ಆಗಮನ ಆಗಿರುವುದಕ್ಕೆ ರೈತರು ಹಾಗೂ ಜನರ ಮೊಗ ದಲ್ಲಿ ಮಂದಹಾಸ ಮೂಡಿದೆ ಎಂದರು. ಆ ನಿಮಿತ್ಯ ಕಾರ್ಯಕ್ರಮಕ್ಕೆ ಹಾಜರಾದ ಪುಟ್ಟ ಬಾಲಕಿಯರಿಗೆ ಸಸಿ ವಿತರಣೆ ಮಾಡಿ, ಪರಿಸರ ಜಾಗೃತಿ ಮೂಡಿಸಿದರು. ಸಾಧಕರಾದ ಐಟಿಐ ಕಾಲೇಜಿನ ನಿವೃತ್ತ ಸಿಬ್ಬಂದಿಗಳಾದ ಗಣಪತರಾವ, ರಾಮರಾವ ಜಾಧವ, ಅಬ್ದುಲ ಹಕೀಮ, ಶಿವರಾಜ ಬಿರಾದಾರ ಹಾಗೂ ರಮೇಶ್ ಇಟಗೀಕರ್ ರವರಿಗೆ ಗೌರವ ಸನ್ಮಾನ ನೀಡ ಲಾಯಿತು. ಪ್ರಾಚಾರ್ಯ ವಿಜಯಕುಮಾರ ಪಾಟೀಲ, ರವಿ ಪಾಟೀಲ, ಉಮಾಕಾಂತ ರವರು ಹಾಜರಿದ್ದರು. ಸಸಿಗಳಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. 88 ವರ್ಷ ವಯಸ್ಸಿನ ನಿವೃತ್ತ ಶಿಕ್ಷಕ ಪ್ರಲ್ಹಾದರಾವ ಬಿಜಾಪುರ ರವರು ಅಧ್ಯಕ್ಷತೆ ವಹಿಸಿದ್ದರು. ಕಸ್ತೂರಿ ಪಟಪಳ್ಳಿಯವರು ನಿರೂಪಿಸಿದರು. ಚೇತನಾ – ಶಶಾಂಕ ರವರು ಸ್ವಾಗತಿಸಿದರು. ವಿಜಯಲಕ್ಷ್ಮಿಯವರು ವಂದಿ ಸಿದರು. ಶಿವಪುತ್ರ, ಗೌರಮ್ಮ, ಪುತಳಾಬಾಯಿ, ಕಲ್ಯಾಣರಾವ, ಶ್ರೀದೇವಿ, ವಿಜಯಲಕ್ಷ್ಮಿ, ಅಶ್ವಿನಿ, ಶ್ವೇತಾ, ಕಾವ್ಯ, ಕಾಶಿ ನಾಥ, ಪವಿತ್ರ ಕುಮಾರ, ಕಿರಣ, ವೀರಾರೆಡ್ಡಿ, ಮಲ್ಲಾರೆಡ್ಡಿ, ರಾಜ ಶೇಖರ, ಅಗಸತ್ಯ, ಭೀಮರೆಡ್ಡಿ, ಗೌರಮ್ಮ, ಪುತಳಾಬಾಯಿ, ಶಂಕರ ಸೇರಿದಂತೆ ಅಪಾರ ಬಂದು ಬಳಗ ಹಾಗೂ ಮಿತ್ರರು ಹಾಜರಿದ್ದರು.