ಸರ್ಕಾರದ ಪುಕ್ಕಟೆ ಪರಿಣಾಮ: ಜಮೀನು ಕೆಲಸಕ್ಕೆ ಆಳುಗಳೇ ಸಿಗುತ್ತಿಲ್ಲ
ವಿಶೇಷ ವರದಿ: ಶಿವಕುಮಾರ ಸ್ವಾಮಿ
ಬೀದರ್: ಜೂ.11:ಸರ್ಕಾರದ ಉಚಿತ ಯೋಜನೆಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಹೊಲಕ್ಕೆ ಕೂಲಿ ಆಳುಗಳ ಸಮಸ್ಯೆಯುಂಟಾಗಿದ್ದು ಎಲ್ಲಾ ಕೆಲಸವನ್ನು ತಾವೇ ಮಾಡಬೇಕಾಗಿದೆ.
ಉಳಿಮೆ ಮಾಡುವ ಯಂತ್ರಗಳ ಬಾಡಿಗೆ ಹೆಚ್ಚಳ, ರಸಗೊಬ್ಬರ ಸಮಸ್ಯೆಯಿಂದ ನಲುಗುತ್ತಿರುವ ರೈತರು ಕೃಷಿ ಕಾಯಕವೇ ಬೇಡ ಅನ್ನೋ ಮಟ್ಟಿಗೆ ಬಂದಿದ್ದಾರೆ.
ಹೌದು ಸರ್ಕಾರದ ಉಚಿತ, ಖಚಿತ ಯೋಜನೆಗಳ ಘೋಷನೆಯಿಂದಾಗಿ ಗಡಿ ಜಿಲ್ಲೆ ಬೀದರ್?ನಲ್ಲಿ ಕೃಷಿ ಚಟುವಟಿಗೆ ಕೂಲಿ ಆಳುಗಳ ಸಮಸ್ಯೆ ಹೆಚ್ಚಾಗಿದ್ದು ರೈತರು ಕಂಗಾಲಾಗಿದ್ದಾರೆ.
ಜಿಲ್ಲೆಯಲ್ಲಿ ಒಬ್ಬ ರೈತನಿಗೆ ಕನಿಷ್ಟವೆಂದರೂ 10 ಎಕರೆ ಮೇಲೆಯೇ ಜಮೀನಿದೆ. ಆ ಜಮೀನಿನಲ್ಲಿ ಕೆಲಸ ಮಾಡಲು ಕೂಲಿ ಆಳುಗಳು ಸಿಗದಂತಾ ಸ್ಥಿತಿ ನಿರ್ಮಾಣವಾಗಿದೆ. ಈಗ ಬಿತ್ತನೆ ಸಮಯವಾಗಿದ್ದರಿಂದ ರೈತರು ಹೊಲ ಹದಗೊಳಿಸಿ ಬಿತ್ತನೆಗೆ ಸಜ್ಜಾಗುತ್ತಿದ್ದಾರೆ.
ಹೊಲ ಹದಗೊಳಿಸುವುದರಿಂದ ಹಿಡಿದ ಬೆಳೆ ರಾಶಿ ಮಾಡುವವರೆಗೂ ಕೂಡ ಕೂಲಿ ಆಳುಗಳು ಬೇಕೇ ಬೇಕು. ಇನ್ನೂ ಕಳೆ ಕಿಳುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೂಲಿ ಆಳುಗಳು ಬೇಕಾಗುತ್ತಿದ್ದಾರೆ. ಆದರೆ ಕಳೆದೊಂದು ವರ್ಷದಿಂದ ಕೂಲಿ ಆಳುಗಳ ಸಮಸ್ಯೆ ಹೆಚ್ಚಾಗುತ್ತಿದ್ದು ದಿನಕ್ಕೆ 600 ರೂ. ಕೊಡುತ್ತೇನೆಂದುರೂ ಕೂಲಿ ಆಳುಗಳು ಸಿಗುತ್ತಿಲ್ಲ. ಹೀಗಾಗಿ ಎಲ್ಲವನ್ನು ನಾವೇ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕೂಲಿ ಆಳುಗಳ ಸಹಾಯವಿಲ್ಲದೆ ಒಬ್ಬ ರೈತ ತನ್ನ ಜಮೀನಿನಲ್ಲಿ ತನ್ನ ಕುಟುಂಬದವರಷ್ಟೇ ಸೇರಿಕೊಂಡು ಕೃಷಿ ಮಾಡಲು ಸಾಧ್ಯವಿಲ್ಲ ಕೂಲಿ ಆಳುಗಳು ಬೇಕೆ ಬೇಕು ಆದರೆ ಕೂಲಿ ಆಳು ಸಿಗುತ್ತಿಲ್ಲ, ಎಕರೆಗೆ 25 ಸಾವಿರ ಖರ್ಚು ಮಾಡಿ ಬಿತ್ತನೆ ಮಾಡಿರುತ್ತೇವೇ ಆದರೆ ಕಳೆ ತೆಗೆಯಲು ಕೂಲಿ ಆಳುಗಳು ಸಿಗದೇ ಹೋದರೆ ಇಳುವರಿ ಕುಟಿಂತಗೊಳ್ಳುತ್ತದೆ ಆವಾಗ ನಷ್ಟ ರೈತನಿಗೆ ಆಗುತ್ತದೆ ಏನು ಮಾಡೋದು? ಸರ್ಕಾರ ದ ಉಚಿತ ಯೋಜನೆಯಿಂದಾಗಿ ಕೂಲಿ ಆಳುಗಳ ಸಮಸ್ಯೆಯಿಂದ ನಾವು ಏನು ಮಾಡಬೇಕು? ತಿಳಿಯದಾಗಿದೆ ಎಂದು ರೈತರು ಹೇಳುತ್ತಿದ್ದಾರೆ.
ಕೂಲಿ ಆಳುಗಳ ಸಮಸ್ಯೆಯ ಜೊತೆಗೆ ಪ್ರತಿ ವರ್ಷವೂ ಕೂಡ ಬಿತ್ತನೆ ಬೀಜ, ರಸಗೊಬ್ಬರದ ದರದಲ್ಲಿ ಏರಿಕೆಗಾಗುತ್ತಿದೆ, ಜೊತೆಗೆ ಕೂಲಿ ಆಳುಗಳು ಕೊರತೆಯಿಂದಾಗಿ ಕೂಲಿ ಆಳುಗಳ ಡಿಮ್ಯಾಂಡ್ ಕೂಡ ಹೆಚ್ಚಾಗಿದೆ. ಹೀಗಾಗಿ ಅವರು ಕೂಡ ವರ್ಷದಿಂದ ವರ್ಷಕ್ಕೆ ತಮ್ಮ ಕೂಲಿ ಹಣ ಹೆಚ್ಚು ಮಾಡುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಕೃಷಿ ಕಾಯಕವೇ ಬೇಡ ಅಂತ ಅನುಸುತ್ತಿದೆಂದು ರೈತರು ಹೇಳುತ್ತಿದ್ದಾರೆ.
ರೈತರ ಕಷ್ಟಗಳನ್ನು ಯಾರು ಕೆಳುತ್ತಾರೆ. ಕೂಲಿ ಆಳುಗಳ ಸಮಸ್ಯೆ, ರಸಗೊಬ್ಬರದ ದರಲ್ಲಿ ಏರಿಕೆ, ಉಳುಮೆ ಮಾಡುವ ಟ್ರಾಕ್ಟರ್ ದರದಲ್ಲಿ ಏರಿಕೆ, ಇನ್ನೊಂದು ಕಡೆ ಬೀಜಗಳ ಕೊರೆತೆ ಹೀಗಾದ್ರೆ ರೈತರು ಜೀವನ ಮಾಡುವುದು ಹೇಗೆ ಎಂದು ರೈತರು ರಾಜ್ಯ ಸರ್ಕಾರದ ವಿರೂದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.