`ಮಕ್ಕಳ ಅಧ್ಯಯನ ಭಾಷೆಯೇ ಚಿತ್ರಕಲೆ’
ಧಾರವಾಡ,ಸೆ25 : ಪ್ರತೀ ಮಗುವೂ ವಿಭಿನ್ನ ಶೈಲಿಗಳಲ್ಲಿ ತನ್ನ ಮನದಾಳದ ಕಲ್ಪನೆಗಳಿಗೆ ಅನುಸಾರವಾಗಿ ಗೀಚುವುದರಲ್ಲಿಯೇ ಆನಂದವನ್ನು ಅನುಭವಿಸುತ್ತದೆ. ನಂತರ ಶಾಲಾ ಕಲಿಕೆಯಲ್ಲಿ ಶಿಕ್ಷಕರು ಚಿತ್ರಗಳ ಮೂಲಕವೇ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಹಾಗಾಗಿ ಮಕ್ಕಳ ಅಧ್ಯಯನ ಭಾಷೆಯೇ ಚಿತ್ರಕಲೆಯಾಗಿದೆ ಎಂದು ಶಾಲಾ ಶಿಕ್ಷಣ ಇಲಾಖೆಯ ಕಿತ್ತೂರು ಕರ್ನಾಟಕ ಶೈಕ್ಷಣಿಕ ವಲಯದ ಹೆಚ್ಚುವರಿ ಆಯುಕ್ತೆ ಜಯಶ್ರೀ ಶಿಂತ್ರಿ ಪ್ರತಿಪಾದಿಸಿದರು.
ಆಯುಕ್ತರ ಕಚೇರಿಯ ಆಡಳಿತ ಡಿಡಿಪಿಐ ಸಂಜೀವ ಬಿಂಗೇರಿ, ಸರಕಾರಿ ಚಿತ್ರಕಲಾ ಕಾಲೇಜಿನ ಪ್ರಾಚಾರ್ಯ ಡಾ. ಬಸವರಾಜ ಕುರಿಯವರ ಹಾಗೂ `ಜೀವನ ಶಿಕ್ಷಣ’ ಮಾಸಪತ್ರಿಕೆಯ ನಿವೃತ್ತ ಸಂಪಾದಕ ಗುರುಮೂರ್ತಿ ಯರಗಂಬಳಿಮಠ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಹಿರಿಯ ಚಿತ್ರಕಲಾ ವಿಷಯ ಪರಿವೀಕ್ಷಕ ಪಿ.ಆರ್. ಬಾರಕೇರ, ಎಸ್.ಎ. ಕೇಸರಿ, ಗುರುರಾಜ ಅಂಬೇಕರ, ರವಿ ಗೋಡಕೆ, ಗೋಪಾಲ ಚಲವಾದಿ, ಇಸೂಫ್‍ಅಲಿ ಖಲಾಸಿ, ವಿಜಯಕುಮಾರ ಶಿಂಗೆ, ಹೇಮಂತ ಲಮಾಣಿ ಇದ್ದರು.
ಯೋಜನಾ ಸಹಾಯಕ ಪ್ರವೀಣ ಬಿರಾದಾರ ಸ್ವಾಗತಿಸಿದರು. ಹಿರಿಯ ಸಹಾಯಕ ನಿರ್ದೇಶಕ ಬಿ.ವೈ. ಭಜಂತ್ರಿ ವಂದಿಸಿದರು. ಚಿತ್ರಕಲಾ ಶಿಕ್ಷಕ ಡಾ. ಸಂಗಮೇಶ ಬಗಲಿ ಸ್ವತಃ ಸಿದ್ಧಪಡಿಸಿ ತಂದಿದ್ದ ಆಯುಕ್ತರ ಭಾವಚಿತ್ರವನ್ನು ಜಯಶ್ರೀ ಶಿಂತ್ರಿ ಅವರಿಗೆ ಸಲ್ಲಿಸಿದರು.