ಸರ್ವ ಸಾಧಾರಣ ಸಭೆ
ಮುನವಳ್ಳಿ,ಸೆ25: ಕಟಕೋಳ ಗ್ರಾಮದ ವಿವಿಧೋಧ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಕಾರ್ಯಾಲಯದಲ್ಲಿ 95ನೇ ವಾರ್ಷಿಕ ಸರ್ವ ಸಾಧಾರಣ ಸಭೆ ಸೋಮವಾರ ಜರುಗಿತು.
ಸಂಘದ ಅಧ್ಯಕ್ಷ ಸಂಗಮೇಶ ಶೆಟ್ಟಿಸದಾವರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ ಸಹಕಾರ ಕ್ಷೇತ್ರದಿಂದ ಗ್ರಾಮೀಣ ಭಾಗದ ಅಭಿವೃದ್ದಿ ಸಾಧ್ಯ ಎಂದು ಸಂಘ ಸಂಸ್ಥೆಗಳು ನಿರೂಪಿಸಿವೆ ಹಾಲು ಉತ್ಪಾದಕರ ಸಂಘಗಳು ಪಿ.ಕೆ.ಪಿ.ಎಸ್. ಸಹಕಾರಿ ತತ್ವದಡಿ ಗ್ರಾಮೀಣ ಆರ್ತಿಕ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡುತ್ತಿವೆ ಸಹಕಾರ ಸಂಘಗಳನ್ನು ನಂಬಿ ರೈತರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ ಹಳ್ಳಿ ಜನರಲ್ಲಿ ಆರ್ಥಿಕ ಮನೋಭಾವ ಬೆಳೆಸುವಲ್ಲಿ ಸಹಕಾರಿ ಸಂಘಗಳು 5.99 ಕೋಟಿ ರೂ ಠೇವಣಿ ಸಂಗ್ರಹಿಸಿ 13.40 ಕೋಟಿ ರೂ ಸಾಲ ಹಂಚಿಕೆ ಮಾಡಿದೆ 24.48 ಕೋಟಿ ರೂ ದುಡಿಯುವ ಬಂಡವಾಳ ಹೊಂದಿದೆ ಹಾಗೂ 28.31 ಲಕ್ಷರೂ ಲಾಭಗಳಿಸಿದೆ ಹಾಗೂ ರೈತರ ಏಳಿಗೆಗಾಗಿ ಹಲವು ಹತ್ತಾರು ಯೋಜನೆಗಳನ್ನು ಮುಂಬರುವ ದಿನಗಳಲ್ಲಿ ಕೈಗೂಡಿಸಿಕೊಂಡು ರೈತರಿಗೆ ಹೆಚ್ಚಿನ ಲಾಭ ನೀಡುವದರಲ್ಲಿ ಸಂಘ ಸಹಕಾರಿ ಯಾಗುವದು ಎಂದರು.
ನಿರ್ಧೆಶಕ ಬಾಳನಗೌಡ ಹೊಸಮನಿ ಮಾತನಾಡಿ ಸಂಘಗಳ ಸಾಧನೆ ಮಾತಾಡಬೇಕೆ ವಿನಹಾ ಮಾತನಾಡುವುದೇ ಸಾಧನೆ ಆಗಬಾರದು ನಿರಂತರ ಶ್ರಮದಿಂದ ಸಾಧನೆ ಸುಲಭವಾಗಲಿದೆ ನಮ್ಮ ಸಂಘವು 95 ವರ್ಷ ನಿರಂತರವಾಗಿ ರೈತರಿಗಾಗಿ ಸೇವೆ ಸಲ್ಲಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದರು.
ಮುಖ್ಯ ಪ್ರಧಾನ ವ್ಯವಸ್ಥಾಪಕ ಆರ್.ಎ.ಹಾವಾಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಫ್.ವಿ ಮೇಟಿ ಜಿಲ್ಲಾ ಖಜಾನೆ ಅಧಿಕಾರಿಯಾಗಿ ಆಯ್ಕೆಯಾದ ನಿಮಿತ್ತ ಸಂಘದಿಂದ ಸನ್ಮಾನಿಸಿ ಗೌರವಿಸಿದರು. ಉಪಾಧ್ಯಕ್ಷ ಲಿಂಗರಾಜ ದೇಸಾಯಿ, ನಿರ್ದೇಶಕರುಗಳಾದ ಎನ್. ಬಿ. ದಂಡಿನದುರ್ಗಿ, ಎಂ.ಎಂ.ಆತಾರ, ಜಿ.ಎನ್.ತೋಲಗಿ, ಎಸ್.ಎಂ.ಕುಂಬಾರ, ಎಸ್.ಎಚ್.ವಾದಿ, ಎನ್.ಡಿ.ಅಜ್ಜನ್ನವರ, ವಿ.ಎಫ್.ಕಣವಿ, ವಿ.ಎಚ್.ಜಾಧವ, ಬ್ಯಾಂಕ ನಿರೀಕ್ಷಕ ಎಸ್.ಎಸ್.ಜಂಬಗಿ ಇತರರು ಉಪಸ್ಥಿತರಿದ್ದರು.