ಬಾಲಕರ ಪಪೂ ಕಾಲೇಜಿನ ವಾಲಿಬಾಲ್ ತಂಡ ಪ್ರಥಮ
ಗುಳೇದಗುಡ್ಡ,ಸೆ25: ಪಟ್ಟಣದಲ್ಲಿ ನಡೆದ ತಾಲೂಕಮಟ್ಟದ ಪದವಿ ಪೂರ್ವ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಸ್ಥಳೀಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜು ತಂಡ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಚೆಸ್ ಆಟದಲ್ಲಿ ದರ್ಶನ್ ಗೌಡರ ಪ್ರಥಮ, ರಾಹುಲ ರಾಠೋಡ 200 ಮೀ ಓಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಮಹಿಳೆಯರ ವಾಲಿಬಾಲ್ ಹಾಗೂ ಪುರುಷರ ಖೋಖೋ ತಂಡಗಳು ದ್ವಿತೀಯ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಪ್ರಾಚಾರ್ಯ ವಿಠ್ಠಲ ಕಳಸಾ ತಿಳಿಸಿದ್ದಾರೆ.