ಎನ್.ಎಸ್.ಎಸ್‍ನಿಂದ ಸುಭದ್ರ ರಾಷ್ಟ್ರ ನಿರ್ಮಾಣ
ಬಾಗಲಕೋಟೆ,ಸೆ25: ನಾಗರಿಕ ಸಮಾಜ ನಿರ್ಮಾಣಕ್ಕಾಗಿ ಎನ್.ಎಸ್.ಎಸ್‍ನಂತಹ ವೇದಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಬಾಗವಹಿಸಬೇಕು ಇದರಿಂದ ಸುಭದ್ರ ರಾಷ್ಟ್ರ ನಿರ್ಮಾಣವಾಗುತ್ತದೆ ಎಂದು ಬೀಳಗಿಯ ಸರಕಾರಿ ಪ್ರಥಮ ದರ್ಜೇ ಕಾಲೇಜಿನ ಪ್ರಾಧ್ಯಾಪಕರಾದ ಮೌನೇಶ್ ಕಮ್ಮಾರ್ ಹೇಳಿದರು.
ನಗರದ ಬಿವಿವಿ ಸಂಘದ ಬಸವೇಶ್ವರ ಕಲಾ ಮಹಾವಿದ್ಯಾಲದಲ್ಲಿ ನಡೆದ ಎನ್.ಎಸ್.ಎಸ್ ಸಂಸ್ಥಾಪನಾ ದಿನಚಾರಣೆಯ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು ಎನ್.ಎಸ್.ಎಸ್‍ನಿಂದ ಸಾಮಾಜಿಕ ಜವಾಬ್ದಾರಿ ವಿದ್ಯಾರ್ಥಿಗಳಲ್ಲಿ ಬೆಳೆಯುತ್ತದೆ. ಸಂಘಟಿತ ಬದುಕನ್ನು ಕಲಿಸುತ್ತದೆ, ಉತ್ತಮ ಗುಣಮಟ್ಟದ ಜೀವನ ನಡೆಸಲು ಸಾಧ್ಯ. ವಿದ್ಯಾರ್ಥಿಗಳು ತದೇಕ ಚಿತ್ತದತ್ತ ಗಮನ ಹರಿಸಬೇಕು. ಮಾನಸಿಕ ತೋಳಲಾಟದಿಂದ ದೂರವಿದ್ದು ತಮ್ಮ ಕರ್ತವ್ಯಗಳನ್ನು ಅಚ್ಚುಕಟ್ಟಾಗಿ ಪಾಲಿಸಿದರೆ ಯಶಸ್ಸು ಸಾಧ್ಯ ಎಂದರು.
ಇದೇ ಸಂಧರ್ಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದ ಪ್ರಾಧ್ಯಾಪಕ ಡಾ.ಎಸ.ಡಿ ಕೆಂಗಲಗುತ್ತಿ ರಾಷ್ಟ್ರೀಯ ಸೇವಾ ಯೋಜನೆ 1969ರಲ್ಲಿ ಜಾರಿಗೆ ಬಂದಿದ್ದು, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಜವಾಬ್ದಾರಿ ಇಂದ ಕ್ರಿಯಾಶೀಲರಾಗಬೇಕೆಂಬುವುದು ಇದರ ಸದುದ್ದೇಶವಾಗಿದೆ. ಯುವಕರೆ ಭವ್ಯ ಭಾರತದ ಕನಸುಗಾರರು, ವಿದ್ಯಾರ್ಥಿಗಳು ಜಾತ್ಯಾತೀತ, ಧರ್ಮಾತೀತ, ಲಿಂಗಾತೀತವಾಗಿ ಸ್ವಪ್ರೇರಣೆಯಿಂದ ಕೆಲಸ ಮಾಡಲು ಪ್ರೇರೆಪಿಸುತ್ತದೆ, ಸಮಾಜದಲ್ಲಿ ಉತ್ತಮರಾಗಲು ಸ್ವ-ಆತ್ಮವಾಲೋಕನ ಮಾಡಿಕೊಳ್ಳಬೇಕು ಎಂದರು.
ಪ್ರಾಚಾರ್ಯರಾದ ಎಸ್.ಆರ್ ಮುಗನೂರಮಠ ಮಾತನಾಡಿ ವಿದ್ಯಾರ್ಥಿಗಳು ದೇಶ ಮುನ್ನಡೆಸುವ ಕೆಲಸ ಮಾಡಬೇಕು. ನಮ್ಮ ದಿನನಿತ್ಯದ ಚಟುವಟಿಕೆಗಳಿಗೆ ಇನ್ನೊಬ್ಬರ ಮೇಲೆ ಅವಲಂಬನೆಯಾಗದೆ ನಮ್ಮ ಕೆಲಸಗಳನ್ನು ನಾವೇ ಮಾಡಿಕೋಳ್ಳಬೇಕು, ಯುಕ್ತತೆ ಮತ್ತು ಉಪಯುಕ್ತತೆ ಗುಣ ಬೆಳಸಿಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ಐಕ್ಯೂಎಸಿ ಸಂಯೋಜಕರಾದ ಡಾ.ಎ.ಯು ರಾಠೋಡ್. ಎನ್.ಎಸ್.ಎಸ್ ಅಧಿಕಾರಿಗಳಾದ ಎಮ್.ಎಚ್.ವಡ್ಡರ, ಡಾ ವೀರುಪಾಕ್ಷಿ ಎನ್.ಬಿ ಹಾಗೂ ವಿದ್ಯಾರ್ಥಿಗಳು ಇದ್ದರು. ಸಿದ್ಧಾರೂಢ ನಾಗರೆಡ್ಡಿ ನಿರೂಪಿಸಿದರು.