ಶಿಥಿಲಾವಸ್ಥೆಯಲ್ಲಿ 90 ವರ್ಷದ ಹಳೇಯ ಶಾಲಾ ಕೊಠಡಿ; ಸರ್ಕಾರದ ತಾತ್ಸಾರಕ್ಕೆ ಗ್ರಾಮಸ್ಥರ ಆರೋಪ
ಜಗಳೂರು.ಜೂ.೧೧ – ಜ್ಞಾನ ದೇಗಲವಿದು ಕೈ ಮುಗುದು ಒಳಗೆ ಬಾ ಎಂದು ಸರಕಾರಿ ಶಾಲೆಯ ಬಾಗಿನಲ್ಲಿ ಬರೆದಿರುತ್ತಾರೆ. ಆದರೆ ತಾಲೂಕಿನ ರಸ್ತೆಮಕುಂಟೆ.ಭರಮಸಮುದ್ರ.ಹಾಲೇಕಲ್ಲು.ಜಗಳೂರು ಪಟ್ಟಣದ ಉರ್ದು ಶಾಲೆ ಸೊಕ್ಕೆ ಸೇರಿದಂತೆ ಪಾಳು ಬಿದ್ದ ಶಾಲೆಯಾಗಿವೆ ಇನ್ನುಳಿದಂತೆ ತಾಲೂಕಿ ನಲ್ಲಿ ಅನೇಕ ಶಾಲೆಗಳು ದುರಸ್ತಿ ಎಲ್ಲಿವೆ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಯಾವಗ ಗೋಡೆಗಳು, ಚಾವಣಿಗಳು ಉದುರಿ ಮಕ್ಕಳ ಮೈ ಮೇಲೆ ಬೀಳುತ್ತವೋ ಎಂಬ ಆಂತಕದಲ್ಲಿ ಪಾಠ ಕೇಳಬೇಕಾದ ದುಸ್ಥಿತಿ ಇಲ್ಲಿನ ಶಾಲಾ ಮಕ್ಕಳಿಗೆ ಮತ್ತು ಪೋಷಕರಿಗೆ ಎದುರಾಗಿದೆ ಅಲ್ಲಿನ ಗ್ರಾಮಸ್ಥರು ಸಾಕಷ್ಟು ಬಾರಿ ಸಂಬಂಧಿಸಿದ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿ ಕಾರಿಗಳಿಗೆ ಮನವಿ ಮಾಡಿದರು ಇಲ್ಲಿಯವರೆಗೆ ತಲೆ ಕೆಡಿಸಿ ಕೊಳ್ಳುತ್ತಿಲ್ಲ ಎಂಬ ಆರೋಪ ಪ್ರಜ್ಞಾವಂತ ಯುವಕರದಾಗಿದೆ. ಈಗಾಗಲೇ ಮಳೆಗಾಲ ಆರಂಭವಾಗಿದೆ ಮತ್ತು ಶಾಲೆ ಆರಂಭ ವಾಗಿ ಮೂರು ವಾರಗಳು ಕಳೆಯುತ್ತ ಬಂದಿದೆ,ಜೊತೆಯಲ್ಲಿ ಮುಂಗಾರು ಮಳೆಯು ಸಹ ರಾಜ್ಯಕ್ಕೆ ಕಾಲಿಟ್ಟಿದ್ದು, ಜಿಟಿ ಜಿಟಿ ಮಳೆ ಏನಾದರೂ ಬಂತು ಎಂದರೆ ಹಲವು ಶಾಲೆಗಳ ಮೇಲ್ಚಾ ವಾಣಿ ಬಿದ್ದಿರುವುದು ಕಾಣಬಹುದಾಗಿದ್ದು, ಭರಮಸಮುದ್ರ ಗ್ರಾಮದ ಸರಕಾರಿ ಶಾಲೆಯ ಕೊಠಡಿಗಳು ಮಳೆ ಗಾಳಿಗೆ ಬಿದ್ದು ಹೋಗಿದ್ದು,ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ಅಕ್ಷರಶಃಹ ತೊಂದರೆ ಯಾಗುತ್ತಿದೆ.ನಮ್ಮೂರಿನ ಶಾಲೆಯ ದುರಸ್ಥಿ ಕಾರ್ಯ ಮಾಡಿಸಿ ಬಡವರ ಮಕ್ಕಳ ವಿದ್ಯಾಭ್ಯಾಸಕ್ಕೆ ಶಾಸಕ ಬಿ.ದೇವೇಂದ್ರಪ್ಪ ಅವರು ಅನುವು ಮಾಡಿಕೊಡ ಬೇಕೆಂದು ಹೋರಾಟಗಾರ ಕುಮಾರ್,ಭರಮಸಮುದ್ರ. ರಸ್ತೆ ಮಕುಂಟೆ ಗ್ರಾಮದ ಮೇಗಳಮನೆ ನಾಗರಾಜ್  ಇವರು ಒತ್ತಾಯಿಸಿದ್ದಾರೆ.