ವಿದ್ಯಾರ್ಥಿಗಳಿಗಾಗಿ ನೀರಿನ ಸಂಪ್ ನಿರ್ಮಿಸಿ ಕೊಡುವಂತೆ ಮನವಿ
ಸಂಜೆವಾಣಿ ವಾರ್ತೆ
ಸಿರಿಗೇರಿ. ಜೂ.11. ಸಿರುಗುಪ್ಪ ತಾಲೂಕು ಸಿರಿಗೇರಿ ಗ್ರಾಮದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ, ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸಲುವಾಗಿ ನೀರಿನ ಸಂಪು ನಿರ್ಮಿಸಿ ಕೊಡುವಂತೆ ಗ್ರಾಮ ಆಡಳಿತಕ್ಕೆ  ಜೂ.10 ರಂದು ಮನವಿ ಪತ್ರ ಸಲ್ಲಿಸಲಾಗಿದೆ.  ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಬಿಸಿಊಟ ತಯಾರಿಸಲು ಮತ್ತು ಕುಡಿಯುವ ನೀರಿಗಾಗಿ ನೀರಿನ ಸಂಪು ಅವಶ್ಯಕತೆ ಇದೆ. ಶಾಲೆಯಲ್ಲಿ 450ಕ್ಕೂ ಹೆಚ್ಚು ವಿದ್ಯಾರ್ಥಿನಿಯರು 8 ರಿಂದ 10ನೇ ತರಗತಿವರೆಗೆ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಾರಣ ಶಾಲೆಗೆ ಹೆಚ್ಚಿನ ನೀರಿನ ಅವಶ್ಯಕತೆ ಇದ್ದು, ಕುಡಿಯುವ ನೀರನ್ನು ಕುಡಿಟ್ಟುಕೊಳ್ಳಲು ನೀರಿನ ತೊಟ್ಟಿ ಅವಶ್ಯಕತೆ ಇದೆ ಎಂದು ಈಗಾಗಲೇ ಹಿಂದೆ ಮನವಿ ಪತ್ರ ಸಲ್ಲಿಸಲಾಗಿದೆ. ಇಲ್ಲಿಯವರೆಗೂ ನಿರ್ಮಿಸಿಲ್ಲ ಶಾಲೆಯಲ್ಲಿ ಅಭ್ಯಾಸ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಕೂಡಲೇ ನೀರಿನ ತೊಟ್ಟಿ ನಿರ್ಮಿಸಿ ಕೊಡಬೇಕೆಂದು ಕೋರಲಾಗಿದೆ. ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ಬಕಾಡೆ ಈರಯ್ಯ, ಪ್ರಭಾರಿ ಮುಖ್ಯ ಗುರು ಓಂಕಾರ್ ಗೌಡ, ದೈಹಿಕ ಶಿಕ್ಷಕ ಕೃಷ್ಣಮೂರ್ತಿ, ಮುಖಂಡ  ಡ್ರೈವರ್ ಹುಲಗಪ್ಪ ಮನವಿ ಪತ್ರ ಸಲ್ಲಿಸಿದರು. ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಂಡು ಮುಂದಿನ ಯೋಜನೆಯ ಹಣಕಾಸಿನಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಿಕೊಡಲು ಪ್ರಯತ್ನಿಸಲಾಗುವುದೆಂದು ಪಿಡಿಓ ಯು ರಾಮಪ್ಪ ತಿಳಿಸಿದರು.