ಬಿಕೆಜಿ ಗ್ಲೋಬಲ್ ಕಾಲೇಜಿನಲ್ಲಿ ನೀಟ್ ಸಾಧಕರಿಗೆ ಸನ್ಮಾನ
ಸಂಜೆವಾಣಿ ವಾರ್ತೆ
ಸಂಡೂರು: ಜು: 11: ಸಂಡೂರು ವಿದ್ಯಾರ್ಥಿಗಳ ನಿರಂತರ ಅಭ್ಯಾಸ ಮತ್ತು ಉಪನ್ಯಾಸಕರ ಮಾರ್ಗದರ್ಶನ ಇಂದು ವಿದ್ಯಾರ್ಥಿಗಳು ನೀಟ್, ಜೆ.ಇ.ಇ. ಮತ್ತು ಕೆ.ಸಿ.ಇ.ಟಿ.ಯಲ್ಲಿ ಉತ್ತಮ ಸಾಧನೆ ಮಾಡುವ ಮೂಲಕ ಬಿಕೆಜಿ ಗ್ಲೋಬಲ್ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರಾದ ಕೆ.ವಿ.ಮೋಹನರಾವ್ ತಿಳಿಸಿದರು.
ಅವರು ತಾಲೂಕಿನ ಕೃಷ್ಣಾನಗರದಲ್ಲಿಯ ಬಿಕೆಜಿ ಗ್ಲೋಬಲ್ ಪದವಿಪೂರ್ವ ಕಾಲೇಜಿನ 2024ರ ಸಾಲಿನಲ್ಲಿ ಕೆಸಿಇಟಿ, ನೀಟ್ ಮತ್ತು ಜೆಇಇ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರನ್ನು ಕಾಲೇಜು ಆಡಳಿತ ಮಂಡಳಿ ಪರವಾಗಿ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಅವರು ಮಾತನಾಡಿ ಮುಂದೆಯೂ ಸಹ ಈ ರೀತಿಯ ಅಭ್ಯಾಸ ಮುಂದುವರಿಸಿದಲ್ಲಿ ಉತ್ತಮ ಸ್ಥಾನಕ್ಕೆ ಹೋಗುತ್ತೀರಿ ಎಂದು ಶುಭಕೋರಿದರು.
ಈ ಸಂದರ್ಭದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಾದ ಅಕ್ಷರ 600/720, ಶರಣ್ಯ ಪಿ 576/720, ಕ್ಲಿಂಟನ್ 533/720, ಧನುಷ್ 455/720 ಮತ್ತು ನಿಖಿತಾಸಿ439/720 ಮತ್ತು ಜೆಇಇ ಪರೀಕ್ಷೆಯಲ್ಲಿ ಸಾಧನೆಮಾಡಿದ ಶ್ರೀಲಲಿತಾ ಅವರನ್ನು ಸನ್ಮಾನಿಸಲಾಯಿತು. ಕೆಸಿಇಟಿ, ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸಹ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಅಡಳಿತ ಮಂಡಳಿಯ ಮುಖ್ಯಸ್ಥರು, ಪ್ರಾಂಶುಪಾಲರು, ಅಡ್ಮಿನ್ ನಾಗರಾಜ ಉಪನ್ಯಾಸಕರಾದ ರವಿಕುಮಾರ ಎಲ್ಲಾ ಸಿಬ್ಬಂದಿಗಳು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.