ಜೂನ್ 12, 13 ರಂದು ವರ್ಣರಂಜಿತ ಧಾರ್ಮಿಕ ಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಹೊಸಪೇಟೆ ಜೂ11: ಹೊಸಪೇಟೆಯ ಸಿದ್ಧಿವಿನಾಯಕ ದೇವಸ್ಥಾನದ 25ನೇ ವಾರ್ಷಿಕೋತ್ಸವ ಜೂನ್ 12 ಮತ್ತು 13 ರಂದು ಅದ್ದೂರಿಯಾಗಿ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
12 ರಂದು ವಿಶೇಷ ಪೂಜೆ ಹಾಗೂ ಸಂಜೆ ಅಂಜಲಿ ಭರತನಾಟ್ಯ ಕಲಾಸಂಘ, ಶ್ರೀ ಲಕ್ಷ್ಮೀನಾರಾಯಣ ಭಜನಾ ಮಂಡಳಿಯವರಿಂದ ಹಾಗೂ ವಿಳಾಸ ನಾಯಕ್ ಗಾಯಕನಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ಮತ್ತು 13 ರಂದು ವಾರ್ಷಿಕೋತ್ಸವದ ಪ್ರಯುಕ್ತ ಗಣಹೋಮ, ಪೂಣ್ಯಾವಾಚನ,ಧ್ವಜಾರೋಹಣ, ಕುಂಭಾಭಿಷೇಕ, ಸಹಸ್ರ ಮೋದಕ ಹೋಮ, ಇತ್ಯಾದಿಗಳು ಅದ್ದೂರಿಯಾಗು ಜರುಗಲಿವೆ. ಹಂಪಿ ಹೇಮಕೂಟ ಸಂಸ್ಥಾನಮಠದ ಪೂಜ್ಯ ಜಗದ್ಗುರು ಕೊಟ್ಟೂರು ಸಂಗನಬಸವಲಿಂಗ ಮಹಾಸ್ವಾಮಿಗಳು ಪಾಲ್ಗೊಳ್ಳಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವಂತೆ ಕೋರಿದೆ.
One attachment • Scanned by Gmail