ಪ್ರಾಣಿಗಳಿಂದ ಬೆಳೆನಾಶ: ನಿಯಂತ್ರಣಕ್ಕೆ ಮನವಿ
ಲಕ್ಷ್ಮೇಶ್ವರ,ಜೂ.11: ತಾಲೂಕಿನ ಗುಳಗುಜ್ಜಿಕೊಪ್ಪ ಗ್ರಾಮದಲ್ಲಿ ರೈತರು ಬಿತ್ತನೆ ಮಾಡಿರುವ ಜಮೀನುಗಳಲ್ಲಿ ಚಿಗರಿ,ಹಂದಿ,ಮುಳ್ಳು ಹಂದಿ,ಮಂಗಗಳ ಉಪಟಳದಿಂದಾಗಿ ಬೆಳೆಗಳು ಚಿಗರುವ ಹಂತದಲ್ಲಿಯೇ ನಾಶವಾಗತೊಡಗಿದ್ದು ಅವಗಳ ನಿಯಂತ್ರಣ ಮಾಡುವಂತೆ ಭಾರತೀಯ ಕಿಸಾನ ಸಂಘದ ಸದಸ್ಯರು ತಹಶಿಲ್ದಾರರಿಗೆ ಗೊನಾಳ ಗ್ರಾಮ ಪಂಚಾಯತಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಮನವಿ ಸಲ್ಲಿಸಿದರು.
ಮನವಿ ಪತ್ರದಲ್ಲಿ ರೈತರು ಬಿತ್ತಿದ್ದ ಮೆಕ್ಕೆಜೋಳ, ಶೇಂಗಾ,ಹತ್ತಿ,ಮೆಣಸಿನ ಗಿಡಗಳನ್ನು ರಾತ್ರೋರಾತ್ರಿ ಪ್ರಾಣಿಗಳು ಎಲ್ಲ ಬೀಜಗಳನ್ನು ಭೂಮಿಯಿಂದ ಅಗೆದು ಸಸಿಗಳು ಪಡಿಸುತ್ತಿವೇ ಎಕರೆಗೆ ಹತ್ತಾರು ಸಾವಿರ ರೂಪಾಯಿ ಖರ್ಚು ಮಾಡಿ ಬೀಜಗಳನ್ನು ಬಿತ್ತಿದ್ದು ಈಗ ಪ್ರಾಣಿಗಳ ಹಾವಳಿಯಿಂದ ನಷ್ಟವಾಗುತ್ತಿವೆ ಆದರಿಂದ ಸಂಬಂಧಿಸಿದ ಅಧಿಕಾರಿಗಳು ಮನವಿಗೆ ಸ್ಪಂದಿಸಿ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಕೈಗೊಳಲಾಗುವುದು ಎಂದು ಭಾರತೀಯ ಕಿಸಾನ ಸಂಘ ಎಚ್ಚರಿಸಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಠಾಕಪ್ಪ ಸಾತಪೆÇತೆ ನಿಂಗಪ್ಪ ಶಿವಬಸವಣ್ಣವರ ಲಿಂಗನಗೌಡ ಹೊಸಗೌಡರ,ಕರಿಯಪ್ಪ ಹೊಸಗೌಡರ,ಅಣ್ಣಪ್ಪ ರಾಮಗೇರಿ,ಚಂದ್ರು ಎಂ.ಎಸ್. ಯಲ್ಲಪ್ಪ ಎನ್.ಡಿ ಬಸು ಮಾಹಾಗೌಡ ರುದ್ರಪ್ಪ ಪೂಜಾರ ಎಸ್.ಎಫ.ಹೊಸಮನಿ ಗಂಗಾಧರವ ಮಾದರ ಕೆ.ಬಿ.ದುರ್ಗನವರ ಸೇರಿದಂತೆ ಅನೇಕರು ಇದ್ದರು.