ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ
ಮುನವಳ್ಳಿ,ಜೂ.11: ತೋರಣಗಟ್ಟಿ ಗ್ರಾಮದ ಗ್ರಾಮದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಇಂದು ದಿ.11 ರಿಂದ ದಿ.21 ರವರೆಗೆ 9 ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರಗುವದು.
ದಿ.11 ರಂದು ಬೆಳಗ್ಗೆ 6 ಗಂಟೆಗೆ ಶ್ರೀ ಗ್ರಾಮದೇವಿ ದೇವಸ್ಥಾನದಲ್ಲಿ ಶ್ರೀ ದೇವಿ ಪಾರಾಯಣದೊಂದಿಗೆ ಜಾತ್ರೆ ಪ್ರಾರಂಭ. ಪ್ರತಿದಿನ ಬೆಳಗ್ಗೆ 6 ರಿಂದ 8 ಗಂಟೆಯ ವರೆಗೆ ಪಾರಾಯಣ ಜರುಗುವುದು.
ಸಾನಿಧ್ಯ ಹೊಸಕೊಟೆಯ ಶ್ರೀ ಅಭಿನವ ರೆವಯ್ಯಾ ಶ್ರೀಗಳು, ಕೊರಕೊಪ್ಪನ ಶ್ರೀ ರೇವ£ಣಸಿದ್ದೇಶ್ವರ ಶ್ರೀಗಳು ವಹಿಸುವರು.
ನೇತೃತ್ವವನ್ನ ಶ್ರೀ ಉಳವಯ್ಯ ಹಿರೇಮಠ, ಮಹಾಂತಯ್ಯ ಬೆನಕಟ್ಟಿಮಠ ವಹಿಸುವರು.
ಮುಧೋಳದ ಶ್ರೀಮತಿ ಸುಶೀಲಾಬಾಯಿ ಜಂಬಗಿ, ಜಮಖಂಡಿಯ ಸೋನಾಬಾಯಿ ಹುನ್ನೂರ ಇವರಿಂದ 9 ದಿನ ಸಂಜೆ ಚೌಡಕಿ ಪದಗಳು ಜರುಗುವುದು.
ಬೆಳಗ್ಗೆ 8.30ಕ್ಕೆ ಶ್ರೀಶೈಲ ಪಾದಯಾತ್ರಿಗಳಿಂದ ಉಪಹಾರ ಸೇವೆ, ಸಂಜೆ 6 ಗಂಟೆಗೆ ಗಡದೇಶ್ವರ ಮಠದ ಶ್ರೀ ವೀರಭದ್ರ ಶಿವಯೋಗಿ ಶಿವಾಚಾರ್ಯ ಶ್ರೀಗಳು, ವಿರಕ್ತಮಠದ ಶ್ರೀ ಸಚ್ಚಿದಾನಂದ ಶ್ರೀಗಳು, ಚೌಕಿಮಠದ ಶ್ರೀ ನಾಗಭೂಷಣ ಶ್ರೀಗಳು, ಇವರ ಸಾನಿಧ್ಯದಲ್ಲಿ ಶ್ರೀ ಗ್ರಾಮ ದೇವಿಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರಗುವುದು.
ಗ್ರಾಮದ ಸುಮಂಗಲಿಯರಿಂದ ಉಡಿ ತುಂಬುವುದು ಹಾಗೂ ಜೊಗಮ್ಮನವರಿಗೆ ಪಡ್ಡಲಗಿ ತುಂಬುವದು, ದೈವದವರಿಂದ ರಾತ್ರಿ 10 ಗಂಟೆಗೆ ಮಹಾಪ್ರಸಾದ ಹಾಗೂ ಡೊಳ್ಳೀನ ಮೇಳಗಳಿಂದ ಡೊಳ್ಳಿನ ಪದಗಳು ಜರಗುವುದು ಎಂದು ಜಾತ್ರಾ ಕಮಿಟಿಯ ಅಧ್ಯಕ್ಷ ಪ್ರಕಟಣೆಯಲ್ಲಿ ತಿಳಿಸಿರುವರು.