ಲಿಂಗಾಯತ ಸಮಾಜಕ್ಕೆ ಮೋದಿ ಸಂಪುಟದಲ್ಲಿ ದ್ರೋಹ  :  ಡಿ. ಬಸವರಾಜ್

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.11; ಬಿಜೆಪಿಗೆ ಮೊದಲಿಂದಲೂ ದೊಡ್ಡ ಪ್ರಮಾಣದಲ್ಲಿ ಬೆಂಬಲಿಸಿದ್ದ ಪ್ರಬಲ ಲಿಂಗಾಯತ ಸಮಾಜಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದ್ರೋಹ ಬಗೆದಿದ್ದಾರೆಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ಆರೋಪಿಸಿದ್ದಾರೆ.  ಕಳೆದ ಎರಡು ಬಾರಿ ಸರ್ಕಾರ ನಡೆಸಿದಾಗಲೂ ಲಿಂಗಾಯತ ಸಮುದಾಯಕ್ಕೆ ಕೇವಲ ರಾಜ್ಯ ದರ್ಜೆ ಸಚಿವರನ್ನಾಗಿ ಮಾತ್ರ ಮೋದಿಯವರು ಮಾಡುತ್ತ ಬಂದಿದ್ದಾರೆ. ಈ ಬಾರಿಯಾದರೂ ಮಾಜಿ ಮುಖ್ಯ ಮಂತ್ರಿಗಳಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ ಬಿಜೆಪಿ ಯಿಂದ ಸಂಸದರಾಗಿ ಆಯ್ಕೆ ಆಗಿದ್ದು  ಲಿಂಗಾಯತ ಸಮಾಜಕ್ಕೆ ಕ್ಯಾಬಿನೆಟ್ ದರ್ಜೆ ಸಚಿವರನ್ನಾಗಿ ಮಾಡಬೇಕಿತ್ತು ಆದರೆ ಮೋದಿಯವರು ಲಿಂಗಾಯಿತರು ಕೇವಲ ಬಿಜೆಪಿಗೆ ಮತ ಹಾಕಲು ಇದ್ದಾರೆ ಬಿಜೆಪಿಯಲ್ಲಿ ಲಿಂಗಾಯತರನ್ನು ಮೂರನೇ ದರ್ಜೆ ನಾಗರೀಕರಂತೆ ನಡೆಸಿಕೊಳ್ಳುತ್ತಿದ್ದಾರೆಂದು ಅವರು ವಾಗ್ದಾಳಿ ಮಾಡಿದ್ದಾರೆ. ಲಿಂಗಾಯತ ಸಮುದಾಯದ ರಾಜ್ಯದ ನಾಯಕರು ಇನ್ನದಾರು ಬಿಜೆಪಿಗೆ ಬೆಂಬಲಿಸುವುದನ್ನು ಬೀಡಬೇಕು ಎಂದು ಡಿ. ಬಸವರಾಜ್ ಅವರು ಲಿಂಗಾಯತ ನಾಯಕರಲ್ಲಿ ಮನವಿ ಮಾಡಿದ್ದಾರೆ ಜೊತೆಗೆ ಎಸ್ ಸಿ, ಎಸ್ ಟಿ, ಒಬಿಸಿ ಯವರಿಗೂ ಮೋದಿ ತಮ್ಮ ಸಂಪುಟದಲ್ಲಿ ರಾಜ್ಯದಿಂದ ಪ್ರತಿನಿದ್ಯಾ ನೀಡದೇ ಸಾಮಾಜಿಕ ನ್ಯಾಯಕ್ಕೂ ಕೊಡಲಿ ಪೆಟ್ಟು ನೀಡಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.