ಪರಿಸರ ವ್ಯವಸ್ಥೆ ಸಂರಕ್ಷಿಸಿ, ಮರುಸ್ಥಾಪಿಸುವುದು ನಮ್ಮ ಜವಾಬ್ದಾರಿ

ಸಂಜೆವಾಣಿ ವಾರ್ತೆ
ದಾವಣಗೆರೆ.ಜೂ.೧೧: ವಿಶ್ವ ಪರಿಸರ ದಿನವು ನಮ್ಮ ಪರಿಸರವನ್ನು ರಕ್ಷಿಸಲು, ಸಂರಕ್ಷಿಸಲು ಮೀಸಲಾದ ಸಂದರ್ಭವಾಗಿದ್ದು, ಪರಿಸರದ ವ್ಯವಸ್ಥೆಗಳನ್ನು ಸಂರಕ್ಷಿಸುವ, ರಕ್ಷಿಸುವ ಹಾಗೂ ಮರುಸ್ಥಾಪಿಸುವುದು ನಮ್ಮ ಜವಾಬ್ದಾರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ್ ಅಭಿಪ್ರಾಯಪಟ್ಟರು.ಶ್ರೀಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆ, ಆವರಗೆರೆ, ಶ್ರೀಸ್ವಾಮಿ ವಿವೇಕಾನಂದ ವಿದ್ಯಾರ್ಥಿ ಹಸಿರು ಪಡೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ದಾವಣಗೆರೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ದಾವಣಗೆರೆ, ಜಿಲ್ಲಾ ಭಾಲಭವನ ಸಮಿತಿ, ದಾವಣತೆರೆ ಇವರ ಸಂಯುಕ್ತಾಶ್ರಯದಲ್ಲಿ ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಪರಿಸರ ಉಳಿಸಲು ನಾವುಗಳು ಜಾಗತಿಕ ಜ್ಞಾಪಕಕ್ಕಾಗಿ ಪ್ರತಿವರ್ಷ ಜೂನ್ 5ರಂದು ವಿಶ್ವ ಪರಿಸರ ದಿನವನ್ನು ಆಚರಿಸುತ್ತೇವೆ. 1972ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು. ಈ ಘೋಷಣೆಯು ನಿರ್ಣಾಯಕ ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಉತ್ತಮ ಸಾಧನವಾಗಿದೆ ಎಂದರು. ಹೆಚ್ಚುತ್ತಿರುವ ಪರಿಸರದ ಸವಾಲುಗಳನ್ನು ಎದುರಿಸುವ ದೃಷ್ಠಿಕೊಣದಿಂದ ವಿಶ್ವ ಪರಿಸರ ದಿನ ಆಚರಣೆ ಅತಿ ಮುಖ್ಯವಾಗಿದೆ. ಪರಿಸರ ಸಂತಕ್ಷಣೆ ಜೊತೆಗೆ ಹವಾಮಾನ ಬದಲಾವಣೆ, ಅರಣ್ಯ ನಾಶ, ಜೀವ ವೈವಿಧ್ಯತೆಯ ನಷ್ಟ ಮತ್ತು ಮಾಲಿನ್ಯದಂತಹ ಪ್ರಮುಖ ಸಮಸ್ಯೆಗಳ ಪರಿಹಾರ ಕಂಡು ಕೊಳ್ಳಲು ಸಹಾಯಕವಾಗಲಿದೆ ಎಂದು ಹೇಳಿದರು.ಪರಿಸರ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ನಾವುಗಳು ಪರಿಸರವನ್ನು ಉಳಿಸಿದರೆ ನಮ್ಮ ಪರಿಸರ ಪರಂಪರೆಯನ್ನು ಭವಿಷ್ಯದ ಪೀಳಿಗೆಗೆ ನೀಡಲು ಸಾಧ್ಯವಾಗಲಿದೆ. ಇದಕ್ಕಾಗಿ ತಕ್ಕ ಕ್ರಮಗಳನ್ನು ಕೈಗೊಳ್ಳುವ ಜತೆ ಪರಿಸರದ ಅರಿವು ಮೂಡಿಸಬೇಕಾಗಿದೆ. ಆ ಮೂಲಕ ಧನಾತ್ಮಕ ಬದಲಾವಣೆ ತರಬಹುದು ಎಂದು ತಿಳಿಸಿದರು.ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಹೆಚ್.ಅರುಣಕುಮಾರ್ ಮಾತನಾಡಿ, ಮಾನವ ಸೇರಿದಂತೆ ಪ್ರಾಣಿ, ಪಕ್ಷಿಗಳು ಸೇರಿದಂತೆ ಭೂಮಿಯ ಮೇಲಿನ ಜೀವ ಸಂಕಲವು ಆಹಾರ, ಗಾಳಿ, ನೀರು ಇತರೆಗಳಿಗಾಗಿ ಪರಿಸರವನ್ನು ಅವಲಂಬಿಸಿದೆ ಎಂದರೆ ತಪ್ಪಾಗಲಾರದು. ಆದರೆ, ಇತ್ತೀಚಿನ ದಿನಗಳಲ್ಲಿ ಮಾನವ ಅಧುನಿಕ ಬದುಕಿನ ಗೀಳಿಗೆ ಬಿದ್ದು, ಪರಿಸರ ನಾಶ ಮಾಡುತ್ತಿದ್ಧಾನೆ. ಮಾನವನ ದುರಾಸೆಯಿಂದ ಗಾಳಿ, ನೀರು, ಮಣ್ಣು ಸೇರಿದಂತೆ ಪರಿಸರದ ಎಲ್ಲಾ ಅಂಶಗಳು ಕಲುಷಿತಗೊಂಡಿವೆ. ಮುನುಷ್ಯ ತನ್ನ ಅಭಿವೃದ್ದಿಗಾಗಿ ತನಗೆ ಅರಿವಿಲ್ಲದಂತೆ ಪರಿಸರವನ್ನು ಹಾಳು ಮಾಡುತ್ತಿದ್ದಾನೆ. ಹೀಗಾಗಿ ಪ್ರತಿಯೊಬ್ಬರಲ್ಲೂ ಪರಿಸರದ ಕಾಳಜಿ ಮೂಡಿಸಬೇಕೆಂದರು.ವಿದ್ಯಾಸAಸ್ಥೆಯ ನಿರ್ದೇಶಕಿ ಎ.ಹೆಚ್.ಸುಗ್ಗಾದೇವಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಂ.ಸಿದ್ದೇಶ್, ಎಂ.ಗುರುಸಿದ್ದಸ್ವಾಮಿ, ಎ.ಹೆಚ್.ಸಿದ್ದಲಿಂಗಸ್ವಾಮಿ, ಎಸ್.ಬಿ.ಶಿಲ್ಪ ಇತರರು ಇದ್ದರು. ಇದೇ ವೇಳೆ ಹತ್ತು ವಿದ್ಯಾರ್ಥಿಗಳನ್ನು ಒಂದು ವರ್ಷದ ಅವಧಿಗೆ ಪರಿಸರ ರಾಯಭಾರಿಗಳನ್ನಾಗಿ ನೇಮಿಸಿ ಬ್ಯಾಡ್ಜ್ ವಿತರಿಸಲಾಯಿತು.