ಜಿ.ಎಂ.ಎಸ್ ಅಕಾಡೆಮಿಯಲ್ಲಿ ಪರಿಸರ ದಿನಾಚರಣೆ

ಸಂಜೆವಾಣಿ ವಾರ್ತೆ
ದಾವಣಗೆರೆ. ಜೂ.೧೧; ನಗರದ  ಜಿ.ಎಂ.ಎಸ್ ಅಕಾಡೆಮಿ ಪ್ರಥಮ ದರ್ಜೆ ಕಾಲೇಜು, ಜಿ.ಎಂ. ವಿಶ್ವವಿದ್ಯಾನಿಲಯ, ದಾವಣಗೆರೆ ವಿಟಾ ಸೈಯೇನ್‌ಶೆಯಾ ಫೋರಂ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲರಾದ ಡಾ. ಶ್ವೇತಾ ಮರಿಗೌಡರ, 2024ರ ಪರಿಸರ ದಿನದ ಉಲ್ಲೇಖ “ಭೂಮಿ ಪುನಃಸ್ಥಾಪನೆ, ಮರುಭೂಮಿಕರಣ ಬರಸ್ಥಿತಿಸ್ಥಾಪಕತ್ವ” ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಹಾಗೂ ಪರಿಸರದಲ್ಲಿ ಸಸ್ಯಗಳನ್ನು ಪ್ರೀತಿಸುತ್ತಾ ಪ್ರತಿಯೊಬ್ಬರೂ ಪರಿಸರ ದಿನದ ಜೊತೆಗೆ ವರ್ಷಕ್ಕೆ ಒಂದು ಗಿಡ ನೆಡುವುದರ ಮೂಲಕ ಪರಿಸರದ ಜವಾಬ್ದಾರಿಯನ್ನು ಅರಿತು ಪರಿಸರದ ಪ್ರಾಮುಖ್ಯತೆಯನ್ನು ಮನಗಂಡು ಪ್ಲಾಸ್ಟೀಕ್ ಬಳಕೆಯನ್ನು ತಡೆಯುವುದರ ಮೂಲಕ ಪ್ರಕೃತಿದತ್ತವಾಗಿ “ಸಂರಕ್ಷಣೆ ನಮ್ಮೆಲ್ಲರ ಹೊಣೆ”ಯನ್ನು ಯುವ ಪೀಳಿಗೆಗೆ ನೀಡಬೇಕು ಎಂದು ತಿಳಿಸಿದರು. ವಿಟಾ ಸೈಯೇನ್‌ಶೆಯಾ ಫೋರಂನ ಸಂಚಾಲಕಿಯಾದ ಡಾ. ಅರುಣಾ ಚರಂತಿಮಠ ಈ ಕಾರ್ಯಕ್ರಮವನ್ನು ಆಯೋಜಿಸಿದರು. ಫೋರಂನ ಸದಸ್ಯ ವಿದ್ಯಾರ್ಥಿಗಳಾದ ಕು. ಕವಿತಾ ಕಾರ್ಯಕ್ರಮದ ನಿರೂಪಣೆ ಮಾಡಿದರು. ಕು. ದೀಪಾ ಇವರು ಗಣ್ಯರನ್ನು ಸ್ವಾಗತಿಸಿದರು, ಕು. ಸಿಂಚನಾ ಭಾಷಣವನ್ನು ಹಾಗೂ ಕು. ವೈಷ್ಣವಿ ವಂದನಾರ್ಪಣೆಯನ್ನು ಮಾಡಿದರು. ಕಾರ್ಯಕ್ರಮದಲ್ಲಿ ಪ್ರಾಧ್ಯಾಪಕರು ಕಾಲೇಜಿನ ವಿದ್ಯಾರ್ಥಿಗಳು, ಕಾಲೇಜಿನ ಆವರಣದಲ್ಲಿ ಒಂದೊAದು ಸಸಿ ನೆಡುವುದರ ಮೂಲಕ ಪರಿಸರ ದಿನವನ್ನು ಆಚರಿಸಿದರು.