ಪಠ್ಯಶಿಕ್ಷಣದ ಜೊತೆ ಸೇವಾ ಚಟುವಟಿಕೆಗಳು ಮುಖ್ಯ

ಸಂಜೆವಾಣಿ ವಾರ್ತೆ
ಚಿತ್ರದುರ್ಗ, ಜೂ. 11 – ವಿದ್ಯಾರ್ಥಿಗಳಲ್ಲಿ ಪಠ್ಯಶಿಕ್ಷಣದ ಜೊತೆ ಸೇವಾ ಚಟುವಟಿಕೆಗಳ ಬಗ್ಗೆಯೂ ಆಸಕ್ತಿ ಮೂಡಿಸುವ ಕೆಲಸ ಹೆಚ್ಚು ಹೆಚ್ಚು ಆಗಬೇಕಿದೆ ಎಂದು ಡಾ. ಎಸ್.ಹೆಚ್. ಪಂಚಾಕ್ಷರಿ ಹೇಳಿದರು.ನಗರದ ಚಂದ್ರವಳ್ಳಿಯ ಎಸ್.ಜೆ.ಎಂ. ಕಾಲೇಜು ವತಿಯಿಂದ ಇಂಗಳದಾಳು ಗ್ರಾಮದಲ್ಲಿ ಆಯೋಜಿಸಿರುವ ಎನ್.ಎಸ್.ಎಸ್. ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಳ್ಳಿ, ನಗರಗಳ ವ್ಯತ್ಯಾಸ, ಪರಿಸರ ಸಂರಕ್ಷಣೆ, ಸೇವೆಯ ಫಲ ಸೇರಿದಂತೆ ಸಮಾಜದ ವಿವಿಧ ಸ್ವರೂಪಗಳನ್ನು ತಿಳಿಸುವ ಎನ್.ಎಸ್.ಎಸ್ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಬಹಳಷ್ಟು ಸಹಕಾರಿಯಾಗಿವೆ. ನಮ್ಮ ಕಾಲೇಜು ಆಡಳಿತ ಮಂಡಳಿಯು ಎನ್‌ಎಸ್‌ಎಸ್ ಶಿಬಿರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ಹೇಳಿದರು.ಮುಖ್ಯಅತಿಥಿ ಐಕ್ಯೂಎಸಿ ಸಂಚಾಲಕ ಡಾ. ಹರ್ಷವರ್ಧನ್ ಮಾತನಾಡಿ, ಹಳ್ಳಿಗಳ ಉದ್ಧಾರವಾದರೆ ದೇಶವು ತನ್ನಿಂದತಾನೇ ಉದ್ಧಾರವಾಗುತ್ತದೆ ಎಂಬುದು ಗಾಂಧೀಜಿಯವರ ಆಶಯವಾಗಿದೆ. ಎನ್.ಎಸ್.ಎಸ್. ಸ್ಥಾಪನೆಯ ಮೂಲಉದ್ದೇಶ ವಿಶ್ವವಿದ್ಯಾನಿಲಯದ ಮಟ್ಟದ ವಿದ್ಯಾರ್ಥಿಗಳನ್ನು ಹಳ್ಳಿಗಳ ಅಧ್ಯಯನದತ್ತ ತೊಡಗಿಸುವುದು. ಗ್ರಾಮಗಳಲ್ಲಿ ಸ್ವಚ್ಛತೆ, ಪರಿಸರ ನೈರ್ಮಲ್ಯ ಬಗ್ಗೆ ಜಾಗೃತಿ ಮೂಡಿಸುವುದು, ಮೂಲಭೂತ ಸೌಕರ್ಯಗಳ ಅಭಿವೃದ್ಧಿ, ಆದರ್ಶಮೌಲ್ಯಗಳನ್ನು ಬಿತ್ತುವುದಾಗಿದೆ. ಅದರಂತೆ ಇಂಗಳದಾಣು ಗ್ರಾಮದಲ್ಲಿ ಜಾಗೃತಿ ಮೂಡಿಸುವ ಉz್ದೆÃಶದಿಂದ ಈ ಶಿಬಿರವನ್ನು ಕಾಲೇಜಿನಿಂದ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಇಂಥ ಕಾರ್ಯಕ್ರಮಗಳು ಪೂರಕವಾಗಿವೆ. ಹಾಗಾಗಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇಂಥ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಉಪಯೋಗ ಪಡೆದುಕೊಳ್ಳಬೇಕೆಂದರು.ಇತಿಹಾಸ ಪ್ರಾಧ್ಯಾಪಕ ಪ್ರೊ. ಎಸ್. ಆನಂದ್ ಪ್ರಾಸ್ತಾವಿಕವಾಗಿ ಮಾತನಾಡಿ, ರಾಷ್ಟಿçÃಯ ಸೇವಾ ಯೋಜನೆಯ ಮಹತ್ವ ಮತ್ತು ಶಿಬಿರಾರ್ಥಿಗಳು ಶಿಬಿರದಲ್ಲಿ ನಿರ್ವಹಿಸಬೇಕಾದ ಶಿಸ್ತಿನ ಬಗ್ಗೆ ತಿಳಿಸಿದರು.ಮಾಜಿ ತಾ| ಪಂ. ಸದಸ್ಯ ಟಿ.ಕೆ. ರಾಮಪ್ಪ, ಗ್ರಾ.ಪ. ಸದಸ್ಯರಾದ ಬೃಂದ ವಸಂತಿಕುಮಾರ್, ಪ್ರಕಾಶ್ ಎಂ., ಪ್ರೊ. ಹೆಚ್.ಎಂ. ಮಂಜುನಾಥಸ್ವಾಮಿ, ಅಧೀಕ್ಷಕ ಶ್ರೀನಿವಾಸಮೂರ್ತಿ, ಉಪನ್ಯಾಸಕ ಲಕ್ಷಿö್ಮಕಾಂತ್, ಗ್ರಾಮದ ಹಿರಿಯ ಮುಖಂಡರು ವೇದಿಕೆಯಲ್ಲಿದ್ದರು.ಎನ್.ಎಸ್.ಎಸ್. ಅಧಿಕಾರಿ ಪ್ರೊ. ಟಿ.ಎನ್. ರಜಪೂತ ಸ್ವಾಗತಿಸಿದರು. ಡಾ. ಬಿ. ರೇವಣ್ಣ ನಿರೂಪಿಸಿದರು. ಎನ್.ಎಸ್.ಎಸ್. ಅಧಿಕಾರಿ ಪ್ರೊ. ನಾಗರಾಜ.ಬಿ. ವಂದಿಸಿದರು.